-->


ಫೆ.20 ರಿಂದ  -  26ರ ತನಕ ಮಟ್ಟಿ ಶ್ರೀ ಕಾಲಭೈರವ ಮಂಜುನಾಥೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶದ ಪುಣ್ಯೋತ್ಸವ

ಫೆ.20 ರಿಂದ - 26ರ ತನಕ ಮಟ್ಟಿ ಶ್ರೀ ಕಾಲಭೈರವ ಮಂಜುನಾಥೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶದ ಪುಣ್ಯೋತ್ಸವ

ಕೈಕಂಬ:ಮಳಲಿ ಮಟ್ಟಿ ಜೋಗಿಮಠ ಶ್ರೀ ಕಾಲಭೈರವ ಮಂಜುನಾಥೇಶ್ವರ ದೇವಸ್ಥಾನದಲ್ಲಿ ಫೆ.20 ರಿಂದ ಫೆ.26 ರ ತನಕ ಬ್ರಹ್ಮಕಲಶದ ಪುಣ್ಯೋತ್ಸವವು ರಾಜ ರಾಜೇಶ್ವರ ತಪೋನಿಧಿ ಶ್ರೀ ಶ್ರೀ ಶ್ರೀ 1008 ರಾಜಯೋಗಿ ನಿರ್ಮಲನಾಥ್ ಜೀ ಮಠಾಧೀಶರ ಮಾರ್ಗದರ್ಶನದಲ್ಲಿ ಪೂಜ್ಯ ರಾಜಶ್ರೀ ಪದ್ಮವಿಭೂಷಣ ಡಾ.ಡಿ ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಅಘೋರ ತಾಂತ್ರಿಕರಾದ ಬ್ರಹ್ಮಶ್ರೀ ವೇದ ವಿದ್ವಾನ್ ದೇರೆಬೈಲು ಶ್ರೀ ವಿಠಲದಾಸ ತಂತ್ರಿಗಳ ನೇತೃತ್ವದಲ್ಲಿ ಶ್ರೀ ಉಮೇಶ್ ನಾಥ್ ಕದ್ರಿಯವರ ದಿವ್ಯ ಉಪಸ್ಥಿತಿಯಲ್ಲಿ ಶ್ರೀ ಕಾಲಬೈರವ ,ಶ್ರೀಮಜುನಾಥೇಶ್ವರ ,ಶ್ರೀ ಜ್ವಾಲಾ ಮಹಾಮ್ಮಾಯಿ ಮತ್ತು ಶ್ರೀ ನಾಗದೇವರ ಹಾಗೂ ಪರಿವಾರ ದೈವಗಳ ಪುನರ್ ಪ್ರತಿಷ್ಠೆ ಹಾಗೂ ಬ್ರಹ್ಮಕಲಶದ ಪುಣ್ಯೋತ್ಸವವು ವಿಜೃಂಭಣೆಯಿಂದ ನಡೆಯಲಿರುವುದು.
ಸುಮಾರು 2 ಕೋ.ರೂ ವೆಚ್ಚದಲ್ಲಿ ದೇವಸ್ಥಾನದ ಜೀರ್ಣೋದ್ದಾರದ ಕಾರ್ಯಗಳು ನಡೆದಿದೆ ಎಂದು ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಕಿರಣ್ ಪಕ್ಕಳ ಹೇಳಿದರು.ದೇವಸ್ಥಾನದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಅವರು ಮಾತನಾಡಿದರು.ಶಾಸಕ ಡಾ.ಭರತ್ ಶೆಟ್ಟಿ ವೈ ಅವರ ಶಾಸಕರ 20 ಲಕ್ಷ ರೂ ಅನುದಾನದಲ್ಲಿ ಗುರುಪುರ ಕೈಕಂಬದಿಂದ ಶ್ರೀ ಕ್ಷೇತ್ರ ಮಟ್ಟಿ ಯ ತನಕ ರಸ್ತೆ ಡಾಮರೀಕರಣ ಕಾಮಗಾರಿ ನಡೆದಿದೆ.ಶ್ರಮದಾನದಲ್ಲಿ ಹಲವಾರು ಸಂಘ ಸಂಸ್ಥೆಗಳು,ಗ್ರಾಮಸ್ಥರು  ಹಗಲು ರಾತ್ರಿಎನ್ನದೆ  ಕೈ ಜೋಡಿಸಿದ್ದಾರೆ.ದೇವರ ಕೆರೆ ಅಭಿವೃದ್ದಿ ಕಾರ್ಯ ಬಾಕಿ ಉಳಿದಿದ್ದು,ಅಭಿವೃದ್ದಿಗಾಗಿ ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ.ಜೀರ್ಣೋದ್ದಾರಕ್ಕೆ ಪೂವಪ್ಪ ಪೂಜಾರಿ ಮತ್ತು ಮಕ್ಕಳು ಜಾಗವನ್ನು ನೀಡಿದ್ದಾರೆ.ದಾನಿಗಳ ಹಾಗೂ ಭಕ್ತರ ಸಹಕಾರದಿಂದ ದೇವಸ್ಥಾನವು ಜೀರ್ಣೋದ್ದಾರವಾಗಿದೆ ಎಂದರು.ಫೆ.19 ರಂದು ಮಧ್ಯಾಹ್ನ 2.30ಕ್ಕೆ ಗಂಜಿಮಠ ಶ್ರೀ ಮಹಾಗಣಪತಿ ದೇವಸ್ಥಾನದಿಂದ ಮೆರವಣೆಗೆಯ ಮೂಲಕ ಹೊರೆಕಾಣಿಕೆ ಸಮರ್ಪಣೆ ನಡೆಯಲಿದ್ದು,ಒಟ್ಟು 8 ದೇವಸ್ಥಾನಗಳಿಂದ ಹೊರೆಕಾಣಿಕೆ ಸಮರ್ಪಣೆಯಾಗಿದೆ ಎಂದರು.


ದೇವಳದ ಆಡಳಿತ ಮೊಕ್ತೇಸರ  ಗಂಗಾಧರ ಜೋಗಿ ಮಾತನಾಡಿ 
ಫೆ.20 ರ ಮಂಗಳವಾರ ಪ್ರಾತಃ ಕಾಲ 7:30 ರಿಂದ ತಂತ್ರಿವರೇಣ್ಯ   ಋತ್ವಿಜರ ಅಗಮನ,ದೇವತಾ ಪ್ರಾರ್ಥನೆ,ತೋರಣ ಮುಹೂರ್ತ,ಉಗ್ರಾಣ ಮುಹೂರ್ತ,ಪುಣ್ಯಾಹ,ಸಪ್ತಪದಿ ,ಆದ್ಯ ಗಣಪತಿ ಯಾಗ.ಧಾರ್ಮಿಕ ಸಭಾ ಕಾರ್ಯಕ್ರಮದ ಉದ್ಘಾಟನೆ ಹಾಗೂ ಸಂಜೆ ಕಟೀಲು ಮೇಳದವರಿಂದ ಯಕ್ಷಗಾನ ಪಂಚಕಲ್ಯಾಣ ನಡೆಯಲಿದೆ.ಫೆ.21 ರ ಬುಧವಾರದಂದು ಪ್ರಾತಃ 7:30 ರಿಂದ ಪುಣ್ಯಾಹ,ಪ್ರತಿಷ್ಠಾ ಪ್ರಧಾನ ಹೋಮ,11:37 ರ ವೃಷಭ ಲಗ್ನದಲ್ಲಿ ಶ್ರೀಮಂಜುನಾಥ,ಶ್ರೀ ಕಾಲಭೈರವ,ಶ್ರೀ ಜ್ವಾಲಾ ಮಹಾಮ್ಮಾಯೀ ದೇವರಿಗೆ ಅಷ್ಠಬಂಧ ಪ್ರತಿಷ್ಠೆ,ಲೇಪನ ಪ್ರೋಕ್ಷ ,ಕಲಶಾಭಿಷೇಕ ,ತತ್ವ ಹೋಮ,ಮಹಾಪೂಜೆ .ಸಾಯಂಕಾಲ 6 ರಿಂದ ದೀಪ ಕಲಾರ್ಚನೆ,ಭದ್ರ ದೀಪ ಪ್ರತಿಷ್ಠೆ,ಕವಾಟ ಬಂಧನ,ನಾಗಾಲಯದಲ್ಲಿ ವಾಸ್ತು ರಕ್ಷೋಘ್ನ ಹೋಮಗಳು ,ಬಿಂಬಾದಿವಾಸ.ಫೆ.22 ರ ಗುರುವಾರದಂದು ಪ್ರಾತಃ 7 ರಿಂದ ಮಹಾ ರುದ್ರಯಾಗ,ಪ್ರಾಯಶ್ಚಿತ ಶಾಂತಿ ಹೋಮ,ನಾಗ ಸಾನಿಧ್ಯದಲ್ಲಿ ಪುಣ್ಯಾಹ,ಗಣಯಾಗ ,ಪ್ರತಿಷ್ಠಾಹೋಮ,ಶುಭ ಮುಹೂರ್ತದಲ್ಲಿ ನಾಗಪ್ರತಿಷ್ಠೆ,ಆಶ್ಲೇಷ ಬಲಿ,ತಂಬಿಲ ಸೇವೆ ,ಸಾಯಂ ಕಾಲ 6 ರಿಂದ ನಾಗ ತನು ,ತರ್ಪಣ ಸೇವೆ ,ಶ್ರೀ ಮಲರಾಯ ಅಣ್ಣಪ್ಪ ಸಾನಿಧ್ಯದಲ್ಲಿ ವಾಸ್ತು ರಕ್ಷೋಘ್ನ ಹೋಮಗಳು,ದೈವ ಶುದ್ದಿ.ಫೆ.23 ರಂದು ಪ್ರಾತಃ 7:30 ರಿಂದ ಶ್ರೀ ಧೂಮಾವತಿ ಬಂಟ ಮಹಿಷಂದಾಯ ದೈವಸ್ಥಾನದಲ್ಲಿ ದೈವ ಶುದ್ದಿ,ಗಣಪತಿ ಹೋಮ,ನಂತರ ಶ್ರೀಮಲರಾಯ ಬಂಟ,ಅಣ್ಣಪ್ಪ ಪಂಜುರ್ಲಿ  ಹಾಗೂ ಗುಳಿಗ ದೈವಗಳ ಪ್ರತಿಷ್ಠೆ ,ಕಲಶಾಭಿಷೇಕ,ಕಲ್ಲುರ್ಟಿ ಪಂಜುರ್ಲಿ ದೈವಗಳ ಕಲಶಾಭಿಷೇಕ,ಪರ್ವ ಸೇವೆ,ಶ್ರೀ ಕಾಲಭೈರವ ಹಾಗೂ ಶ್ರೀಜ್ವಾಲಾ ಮಹಾಮ್ಮಾಯಿ ದೇವರಿಗೆ ಬ್ರಹ್ಮಕಲಶಾಭಿಷೇಕ,ಮಹಾಪೂಜೆ ಚಂಡಿಕಾಯಾಗ.ಸಾಯಂ ಕಾಲ 6 ರಿಂದ ಅದಿವಾಸ ಹೋಮ,ಬ್ರಹ್ಮಕಲಶಾಧಿವಾಸ.ಫೆ.24ರಂದು ಪ್ರಾತಃ 6 ರಿಂದ ಪುಣ್ಯಾಹ,ದಶದಾನ,ಗೋಪೂಜೆ,ಕವಾಟೋದ್ಘಾಟನೆ.ಬೆಳಿಗ್ಗೆ 11:20ರಿಂದ ಮೇಷ ಲಗ್ನದಲ್ಲಿ ಶ್ರೀ ಮಂಜುನಾಥ ದೇವರಿಗೆ ಬ್ರಹ್ಮಕಲಶಾಭಿಷೇಕದ ಪುಣ್ಯೋತ್ಸವ ,ಮಹಾಪೂಜೆ,ಅವಸ್ರುತ ಬಲಿ,ಪಲ್ಲಪೂಜೆ,ಸಾಯಂಕಾಲ 7 ರಿಂದ ರಂಗಪೂಜೆ,ದೇವರ ಉತ್ಸವ ಬಲಿ,ಮಹಾಪೂಜೆ.ಫೆ.25 ರಂದು ಬೆಳಿಗ್ಗೆ 7:30ರಿಂದ ಶ್ರೀ ಕಾಲಭೈರವ ಮಂಜುನಾಥ ದೇವರಿಗೆ ಪೂಜೆ,ಬೆಳಿಗ್ಗೆ 8 ಕ್ಕೆ ಮಹಿಷಂದಾಯ,ಅಣ್ಣಪ್ಪ ಪಂಜುರ್ಲಿ ,ಮಲರಾಯ ಬಂಟ,ಮರಳು ಧೂಮಾವತಿ ಬಂಟ ದೈವಗಳ ಭಂಡಾರ ಆಗಮನ,ಮಧ್ಯಾಹ್ನ 12:30 ಹಾಗೂ ರಾತ್ರಿ 7  ಕ್ಕೆ ಶ್ರೀ ದೇವರಿಗೆ ಮಹಾಪೂಜೆ .ರಾತ್ರಿ 7:30 ಕ್ಕೆ ಮಹಿಷಂದಾಯ,ಅಣ್ಣಪ್ಬಪಂಜುರ್ಲಿ,ಮಲರಾಯ ಬಂಟ,ಮರಳು ಧೂಮಾವತಿ ಬಂಟ ದೈವಗಳಿಗೆ ನೇಮೋತ್ಸವ.ಫೆ.26 ರಂದು ಬೆಳಿಗ್ಗೆ 7:30 ರಿಂದ ಶ್ರೀ ಕಾಲಭೈರವ ಮಂಜುನಾಥೇಶ್ವರ ದೇವರಿಗೆ ಪೂಜೆ,ರಾತ್ರಿ 7:30ಕ್ಕೆ ಶ್ರೀ ದೇವರಿಗೆ ಮಹಾಪೂಜೆ,ರಾತ್ರಿ 8:30ಕ್ಕೆ ಕಲ್ಲುರ್ಟಿ ಪಂಜುರ್ಲಿ ,ಗುಳಿಗ ದೈವಗಳಿಗೆ ಕೋಲ ಬಲಿ ಸೇವೆಯು ನಡೆಯಲಿದೆ ಎಂದರು.



ಪತ್ರಿಕಾ ಗೊಷ್ಠಿಯಲ್ಲಿ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಶೇಖರ್ ಜೋಗಿ,ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಗಂಗಾಧರ್ ಭಂಡಾರಿ ಕಾರ್ಯಾಧ್ಯಕ್ಷ ಚಂದ್ರಹಾಸ ಶೆಟ್ಟಿ ನಾರಳ,ಪ್ರಧಾನ ಕಾರ್ಯದರ್ಶಿ ಹರೀಶ್ ಮಟ್ಟಿ ,ಕೋಶಾಧಿಕಾರಿ  ಸೋಹನ್ ಅತಿಕಾರಿ ಹಾಗೂ ಉಪಾಧ್ಯಕ್ಷ ಸುನೀಲ್ ಗಂಜಿಮಠ ಇದ್ದರು.

Ads on article

Advertise in articles 1

advertising articles 2

Advertise under the article