ಸಹಕಾರಿ ರಂಗದ ಬೀಷ್ಮ ಎಚ್.ನಾರಾಯಣ ಸನಿಲ್ ರವರ ಸ್ಮರಣಾ ಕಾರ್ಯಕ್ರಮ
Monday, March 18, 2024
ಹಳೆಯಂಗಡಿ: ಬಡವ ಹಾಗೂ ಮಧ್ಯಮ ವರ್ಗದ ಜನರಿಗೆ ಅನುಕೂಲವಾಗುವ ದೃಷ್ಟಿಯಿಂದ ಹಳೆಯಂಗಡಿಯಲ್ಲಿ ಸಹಕಾರಿ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಿ, ಅದರ ಮೂಲಕ ಅದೆಷ್ಟೋ ಜನರಿಗೆ ಉದ್ಯೋಗ ಅವಕಾಶ ,ವ್ಯಾಪಾರ ಅಭಿವೃದ್ಧಿಗೆ ಸಹಾಯ, ತಮ್ಮ ಇತರ ಅಗತ್ಯತೆಗಳಿಗೆ ಸಹಾಯ ಹಸ್ತ ಮತ್ತು ಸ್ಥಳೀಯ ಸಾಮಾಜಿಕ ಕ್ಷೇತ್ರದ ಸಂಸ್ಥೆಗಳಿಗೆ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನಾನುರಾಗಿ ಆಗಿದ್ದ ಸಹಕಾರಿ ಭೀಷ್ಮ ಎಚ್ ನಾರಾಯಣ ಸನಿಲ್ ರವರ ಸಾಮಾಜಿಕ ಜೀವನ ತೆರೆದ ಪುಸ್ತಕ ಎಂದು ಹಳೆಯಂಗಡಿಯ ಸಮಾಜ ಸೇವಕಿ ಶ್ರೀಮತಿ ರಾಜೇಶ್ವರಿ ಸೂರ್ಯ ಕುಮಾರ್ ಹೇಳಿದರು.
ಅವರು ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿ ಹಳೆಯಂಗಡಿ ಇದರ ಆಶ್ರಯದಲ್ಲಿ ನಡೆದ ಶ್ರೀ ಎಚ್ ನಾರಾಯಣ ಸನಿಲ್ ಸ್ಮರಣ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಲಕಾಗಿ 'ನಮ್ಮ ಟಿವಿ'ಯ ನವೀನ್ ಶೆಟ್ಟಿ ಎಡ್ಮೆಮಾರ್ ಮಾತನಾಡಿ ನಾರಾಯಣ ಸನಿಲ್ ರವರ ಸಾಮಾಜಿಕ ಕಳಕಳಿ ನಮಗೆಲ್ಲರಿಗೂ ಆದರ್ಶ. ಸನಿಲ್ ರವರು ಸಮಾಜಕ್ಕೆ ಬಿಟ್ಟುಹೋದ ಆಸ್ತಿಗಳಲ್ಲಿ ಪ್ರಸ್ತುತ ಸಮಾಜದಲ್ಲಿ ಕೆಲಸ ಮಾಡುತ್ತಿರುವ ಅದೆಷ್ಟೋ ಜನರೇ ಸಾಕ್ಷಿಯಾಗಿದ್ದಾರೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೊಸೈಟಿಯ ಅಧ್ಯಕ್ಷ ಎಚ್. ವಸಂತ ಬೆರ್ನಾಡ್ ವಹಿಸಿದ್ದರು.
ಹಿರಿಯ ನಿರ್ದೇಶಕರಾದ ಉಮಾನಾಥ ಜೆ ಶೆಟ್ಟಿಗಾರ್, ವಿಜಯ ಕುಮಾರ ಸನಿಲ್ ಗೌತಮ್ ಜೈನ್ ,ನವೀನ್ ಕುಮಾರ್ ಪಂಜ ಉಪಸ್ಥಿತರಿದ್ದರು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುದರ್ಶನ್ ಸ್ವಾಗತಿಸಿ, ಹಿರಿಯ ಸಿಬ್ಬಂದಿ ಶ್ರೀಮತಿ ಅಕ್ಷತಾ ಶೆಟ್ಟಿ ವಂದಿಸಿದರು.