ಎಡಪದವು : ವ್ಯಾಘ್ರ ಚಾಮುಂಡಿ ದೈವಸ್ಥಾನ - ಪುನರ್ ಪ್ರತಿಷ್ಠೆ ಮತ್ತು ನೇಮೋತ್ಸವಕ್ಕೆ ಚಪ್ಪರ ಮುಹೂರ್ತ
Saturday, March 16, 2024
ಬಜಪೆ:ಎಡಪದವು ಕುಂದೋಡಿ ಗಡುಸ್ಥಳದಲ್ಲಿ ಜೀರ್ಣೋದ್ದಾರಗೊಂಡಿರುವ ವ್ಯಾಘ್ರ ಚಾಮುಂಡಿ ದೈವಸ್ಥಾನದಲ್ಲಿ ಮಾರ್ಚ್ 24ರಿಂದ 27ರವರೆಗೆ ನಡೆಯಲಿರುವ ಪುನರ್ ಪ್ರತಿಷ್ಠೆ ಮತ್ತು ನೆಮೋತ್ಸವಕ್ಕೆ ಚಪ್ಪರ ಮುಹೂರ್ತವು ಕ್ಷೇತ್ರದ ಅರ್ಚಕ ಐ. ಕೃಷ್ಣ ಅಸ್ರಣ್ಣ ಕುಪ್ಪೆಪದವು ಅವರ ಉಪಸ್ಥಿತಿಯಲ್ಲಿ ನಡೆಯಿತು. ಜೀರ್ಣೋದ್ದಾರ ಸಮಿತಿಯ ಕಾರ್ಯಾಧ್ಯಕ್ಷ ಸುದರ್ಶನ್ ಪ್ರಭು ಕೊರ್ಡೇಲ್, ಕಾರ್ಯದರ್ಶಿ ಗುಣಪಾಲ ಏನ್., ಕೋಶಾಧಿಕಾರಿ ಸುಂದರ ನಾಯ್ಕ್, ಜತೆ ಕೋಶಾಧಿಕಾರಿ ನಾರಾಯಣ ನಾಯ್ಕ್, ಜತೆ ಕಾರ್ಯದರ್ಶಿ ರಾಜೇಶ್, ಸಂಘಟನಾ ಕಾರ್ಯದರ್ಶಿ ಪುರಂದರ ನಾಯ್ಕ್, ನಿತ್ಯಾನಂದ ನಾಯ್ಕ್ ಮತ್ತು ಸಮಿತಿಯ ಸದಸ್ಯರು ಹಾಗೂ ಭಕ್ತಾದಿಗಳು, ಮತ್ತಿತರರು ಪಾಲ್ಗೊಂಡಿದ್ದರು. ಉಪಸ್ಥಿತರಿದ್ದರು.