ಶಿಬರೂರು ಕ್ಷೇತ್ರದ ಬ್ರಹ್ಮಕಲಶೋತ್ಸವಕ್ಕೆ ಧರ್ಮಸ್ಥಳದಿಂದ 10 ಲಕ್ಷ .ರೂ
Tuesday, March 19, 2024
ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಪ್ರಸಾದ ರೂಪವಾಗಿ 10 ಲಕ್ಷ ಬಂದಿರುವುದು ನಮಗೆ ಸಂತಸ ತಂದಿದೆ, ಮಂಜುನಾಥ ಸ್ವಾಮಿ, ಸ್ವಾಮಿ, ಉಳ್ಳಾಯ ಮತ್ತು ಕೊಡಮಣಿತ್ತಾಯ ದೈವದ
ಅನುಗ್ರಹದಿಂದ ಉತ್ಸವ ಸಾಂಗವಾಗಿ ನೆರವೇರುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಶಿಬರೂರು ಬ್ರಹ್ಮಶ್ರೀ ವೇದವ್ಯಾಸ ತಂತ್ರಿಯವರು ಹೇಳಿದರು. ಅವರು ಶಿಬರೂರು ಶ್ರೀ ಉಳ್ಳಾಯ ಮತ್ತು ಕೊಡಮಣಿತ್ತಾಯ ದೈವಸ್ಥಾನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಕೊಡಮಾಡಿದ 10 ಲಕ್ಷ ರೂಪಾಯಿ ಚೆಕ್ ಸ್ವೀಕರಿಸಿ ಮಾತನಾಡಿದರು. ಮಾಜಿ ಸಚಿವ ಅಭಯಚಂದ್ರಜೈನ್ ಮಾತನಾಡಿ ಧರ್ಮಸ್ಥಳ ಕ್ಷೇತ್ರದಿಂದ 10 ಲಕ್ಷ ಬಂದ ನಂತರ ಶಿಬರೂರು ಕ್ಷೇತ್ರಕ್ಕೆ ಬರುವ ಎಲ್ಲ ಅನುದಾನಗಳು ಕೂಡಿ ಬರುತ್ತದೆ, ಕ್ಷೇತ್ರಕ್ಕೆ ನಿರೀಕ್ಷೆಗಿಂತ ಹೆಚ್ಚಿನ ಅನುದಾನ, ಉದ್ಯಮಿಗಳ ಸಹಕಾರ ಬರಲಿ ಎಂದರು. ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ದುರ್ಗೇಗೌಡ ಚೆಕ್ ಹಸ್ತಾಂತರಿಸಿದರು.
ಈ ಸಂದರ್ಭ ಶಿಬರೂರುಗುತ್ತು ಪ್ರಶಾಂತ್ ಶೆಟ್ಟಿ ,ಸುಧಾಕರ ಶೇಣವ ದೇಂದೊಟ್ಟುಗುತ್ತು, ಜೀತೇಂದ್ರ ಶೆಟ್ಟಿ ಕೊರ್ಯಾರುಗುತ್ತು, ಶಿವಾನಂದ ಶೆಟ್ಟಿ ಪಡುಮನೆ, ಜಗದೀಶ್ ಶೆಟ್ಟಿ ಪರ್ಲಬೈಲು ಗುತ್ತು, ಸುಧಾಕರ ಶೆಟ್ಟಿ ಬಾಂಗಾವು, ಸೂರಿಂಜೆ ಪಂಚಾಯತ್ ಅಧ್ಯಕ್ಷೆ ಗೀತಾ ಶೆಟ್ಟಿ, ಭುವನಾಭಿರಾಮ ಉಡುಪ, ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜಿಲ್ಲಾ ನಿರ್ದೇಶಕ ಮಹಾಬಲ ಕುಲಾಲ್, ಬಜಪೆ ತಾಲೂಕು ಯೋಜನಾಧಿಕಾರಿ ಕರುಣಾಕರ ಆಚಾರ್ಯ, ಮೇಲ್ವಿಚಾರಕ ಅರಣಾ ಸಾಲಿಯಾನ್, ಅಧ್ಯಕ್ಷ ರವೀಂದ್ರ ಭಟ್ ಕಾರ್ಯದರ್ಶಿಗಳಾದ ಆಶಾ ಶೆಟ್ಟಿ ಶಿಬರೂರು, ಸುಜಾತಾ ಶೆಟ್ಟಿ ಕೊರ್ಯಾರು, ರೋಹಿತಾಶ್ವ ಆಚಾರ್ಯ,
ಸುಮನ್ ಶೆಟ್ಟಿ, ವಿನೀತ್ ಶೆಟ್ಟಿ, ಗೀತಾ ಮಡಿವಾಳ, ಸುರೇಶ್ ಕೈಯೂರು, ದಿನೇಶ್ ಕುಲಾಲ್, ನಿತ್ಯನ್ ಶೆಟ್ಟಿ ಶಿಬರೂರು ಗುತ್ತು, ಪ್ರಭಾಕರ ಶೆಟ್ಟಿ ಪೊಸಕಟ್ಟ ಮತ್ತಿತರರು ಉಪಸ್ಥಿತರಿದ್ದರು.