-->

ಫೆ.3ರಂದು ಐಕಳ ಕಂಬಳೋತ್ಸವ ಕ್ಕೆ  ಶ್ರೀಚಂದ್ರಶೇಖರ ಸ್ವಾಮೀಜಿ ಚಾಲನೆ -ಡಾ.ದೇವಿ ಪ್ರಸಾದ್ ಶೆಟ್ಟಿ

ಫೆ.3ರಂದು ಐಕಳ ಕಂಬಳೋತ್ಸವ ಕ್ಕೆ ಶ್ರೀಚಂದ್ರಶೇಖರ ಸ್ವಾಮೀಜಿ ಚಾಲನೆ -ಡಾ.ದೇವಿ ಪ್ರಸಾದ್ ಶೆಟ್ಟಿಮುಲ್ಕಿ:ಬೆಂಗಳೂರಿನ ಅಂತಾರಾಷ್ಟ್ರೀಯ ವಾಸ್ತು ತಜ್ಞ,ಆಧ್ಯಾತ್ಮಿಕ ಗುರು, ವೈಜ್ಞಾನಿಕ ಜ್ಯೋತಿಷಿ ಶ್ರೀ ಚಂದ್ರಶೇಖರ ಸ್ವಾಮೀಜಿ ರವರು ಫೆ. 3ರಂದು ಮಂಗಳೂರಿಗೆ ಪತ್ನಿ ಸಮೇತ ಆಗಮಿಸಲಿದ್ದು ಕಿನ್ನಿಗೋಳಿ ಸಮೀಪದ ಇತಿಹಾಸ ಪ್ರಸಿದ್ಧ ಐಕಳ ಕಾಂತಾ ಬಾರೆ ಬೂತಾ ಬಾರೆ ಕಂಬಳಕ್ಕೆ ಚಾಲನೆ ನೀಡಲಿದ್ದಾರೆ ಎಂದು ಕಂಬಳ ಸಮಿತಿ ಅಧ್ಯಕ್ಷ ಐಕಳ ಬಾವ ಡಾ. ದೇವಿ ಪ್ರಸಾದ್ ಶೆಟ್ಟಿ,ಬೆಳಪು ತಿಳಿಸಿದ್ದಾರೆ
ಅವರು ಮಾಧ್ಯಮದ ಜೊತೆ ಮಾತನಾಡಿ ಐಕಳಬಾವಾ ಕಂಬಳಕ್ಕೆ ಕಳೆದ ಹಲವು ದಶಕಗಳಿಂದ ಶ್ರೀ ಚಂದ್ರಶೇಖರ ಸ್ವಾಮೀಜಿ ಅವರು ಚಾಲನೆ ನೀಡಿ, ವಿಶೇಷವಾಗಿ ಆಶೀರ್ವದಿಸಿಕೊಂಡು ಬರುತ್ತಿದ್ದಾರೆ. ವರ್ಷದಿಂದ ವರ್ಷಕ್ಕೆ ಕಂಬಳವೂ ಹೆಚ್ಚೆಚ್ಚು ಜನಪ್ರಿಯತೆ ಪಡೆದುಕೊಂಡು ಬರುತ್ತಿದೆ,
ಮೂಲತಃ ಮುಲ್ಕಿಯ ನಿವಾಸಿಯಾಗಿರುವ ಶ್ರೀ ಚಂದ್ರಶೇಖರ ಸ್ವಾಮೀಜಿ ದೇಶ ವಿದೇಶಗಳಲ್ಲಿ ಅಂತಾರಾಷ್ಟ್ರಿಯ ವಾಸ್ತು ಸಲಹೆಗಾರರಾಗಿ, ವೈಜ್ಞಾನಿಕ.   ಜ್ಯೋತಿಷಿಯಾಗಿ 
, ಆಧ್ಯಾತ್ಮಿಕ ಗುರುವಾಗಿ ಖ್ಯಾತಿ ಪಡೆದಿದ್ದಾರೆ. ಆದರೆ ಪ್ರತಿ ವರ್ಷ ಸುಮಾರು ಐಕಳ ಕಂಬಳಕ್ಕೆ ಚಾಲನೆ ನೀಡಲು ಕರಾವಳಿಗೆ ಬರುತ್ತಿರುವುದು ಅವರಿಗೆ ಕಂಬಳದ ಮೇಲಿರುವ ಪ್ರೀತಿಯ ಪ್ರತೀಕವಾಗಿದೆ. 
ಸ್ವಾಮೀಜಿ ರವರು, ಕಂಬಳದ ಮಾರ್ಗದರ್ಶಕರಾಗಿದ್ದು, ಕರಾವಳಿ ಭಾಗದ ಸಾಂಪ್ರದಾಯಿಕ ಹಾಗೂ ಗ್ರಾಮೀಣ ಕ್ರೀಡೆಯಾದ ಕಂಬಳವನ್ನು ನಿರಂತರವಾಗಿ  ಪ್ರೋತ್ಸಾಹಿಸುತ್ತಾ ಬಂದಿದ್ದಾರೆ ಎಂದರು.
ಕಂಬಳೋತ್ಸವಕ್ಕೆ ಚಾಲನೆ ನೀಡಿದ ಬಳಿಕ ಸ್ವಾಮೀಜಿ ಅವರು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಕೆಲವೊಂದು ಪುಣ್ಯ ಕ್ಷೇತ್ರ ಹಾಗೂ ಖಾಸಗಿ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಬಳಿಕ ಮತ್ತೆ ಸಂಜೆ ವಿಮಾನದ ಮೂಲಕ ಬೆಂಗಳೂರಿಗೆ ತೆರಳಲಿದ್ದಾರೆ ಎಂದು ಬೆಳಪು ಡಾ! ದೇವಿಪ್ರಸಾದ್ ಶೆಟ್ಟಿ ತಿಳಿಸಿದ್ದಾರೆ.

Advertise in articles 1

advertising articles 2

Advertise under the article

ಕಾರ್ಯಕ್ರಮಗಳ ನೇರ ಪ್ರಸಾರ, ಚಿತ್ರೀಕರಣ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 8618554807