Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಕೊಡೆತ್ತೂರು ಶ್ರೀ ಅರಸು ಕುಂಜರಾಯರ ಪ್ರಧಾನ ಶಿಲಾಮಯ ಗುಂಡದ ( ಮಾಡ) ಪವಿತ್ರವಾದ ಮುಟ್ಟಿಮರ ( ಮೆಟ್ಟಿಲು ಮರ) ನಿಲ್ಲಿಸುವ ಕಾರ್ಯಕ್ರಮ

ಕಟೀಲು:ಕೊಡೆತ್ತೂರು ಶ್ರೀ ಅರಸು ಕುಂಜರಾಯ ದೈವಸ್ಥಾನದ ಶ್ರೀ ಅರಸು ಕುಂಜರಾಯರ ಪ್ರಧಾನ ಶಿಲಾಮಯ ಗುಂಡದ ( ಮಾಡ) ಪವಿತ್ರವಾದ ಮುಟ್ಟಿಮರ ( ಮೆಟ್ಟಿಲು  ಮರ) ನಿಲ್ಲಿಸುವ ಕಾರ್ಯಕ್ರಮವು ಭಾನುವಾರದಂದು ನೆರವೇರಿತು. ಕರಸೇವೆಯ ಮೂಲಕ ಮುಟ್ಟಿಮರ ನಿಲ್ಲಿಸುವ  ಕಾರ್ಯಕ್ರಮವು ನಡೆಯಿತು. ಮುಟ್ಟಿಮರವನ್ನು ದೇಜಪ್ಪ ದೋಗ್ರ ಶೆಟ್ಟಿ ಮತ್ತು ಮಕ್ಕಳು ಪೆಜತ್ತಿಮಾರು ಕೊಡೆತ್ತೂರು ಇವರು ಸೇವಾ ರೂಪದಲ್ಲಿ ಸಮರ್ಪಣೆ ಮಾಡಿದ್ದಾರೆ.
ಈ ಸಂದರ್ಭ ಗುತ್ತುಮನೆತನಗಳ ಪ್ರಮುಖರುಗಳು,ವಿವಿಧ ಸಮಿತಿಗಳ ಪದಾಧಿಕಾರಿಗಳು,ದೈವಸ್ಥಾನಕ್ಕೆ ಸಂಬಂಧಪಟ್ಟ ಪ್ರಮುಖರುಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.