-->


ವಿವೇಕಾನಂದರ ಚಿಂತನೆಗಳು ಸ್ಪೂರ್ತಿಯಾಗಲಿ- ರಾಜೇಶ್ ನಾಯರ್

ವಿವೇಕಾನಂದರ ಚಿಂತನೆಗಳು ಸ್ಪೂರ್ತಿಯಾಗಲಿ- ರಾಜೇಶ್ ನಾಯರ್

ಮೂಲ್ಕಿ:ನಮ್ಮ ಜೀವನದಲ್ಲಿ ಎಷ್ಟೇ ಸಮಸ್ಯೆಗಳು ಬರಲಿ ಅವುಗಳ ನಿವಾರಣೆ ಪ್ರಯತ್ನ ಪಡುವವರಿಗೆ ಆತ್ಮವಿಶ್ವಾಸ ಹೊಂದಿರುವವರಿಗೆ ಪರಮಾತ್ಮನು ಸಹಾಯ ಮಾಡುತ್ತಾನೆ. ಪ್ರಯತ್ನಕ್ಕೆ ಸ್ವಾಮಿ ವಿವೇಕಾನಂದರು ಉತ್ತಮ ಉದಾಹರಣೆ ಹಾಗಾಗಿ ಅವರ ಚಿಂತನೆಗಳು ತಿಳಿಸುವ ನಿಟ್ಟಿನಲ್ಲಿ ಪ್ರತೀ ವರುಷವು ಸ್ವಾಮಿ ವಿವೇಕಾನಂದರ ಜನ್ಮ ನಕ್ಷತ್ರದಂದು ಪುನರೂರು ಪ್ರತಿಷ್ಠಾನವು ವಿಶಿಷ್ಟ ರೀತಿಯಲ್ಲಿ ವಿವೇಕಾ ಜಾಗೃತಿಯನ್ನು ಯುವಜನಾಂಗದಲ್ಲಿ ಮೂಡಿಸುತ್ತಾ ಬಂದಿರುತ್ತದೆ ಎಂದು ಉಡುಪಿಯ ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ಉಪನ್ಯಾಸಕ ರಾಜೇಶ್ ನಾಯರ್ ಪುನರೂರು ಪ್ರತಿಷ್ಠಾನದ ಆಶ್ರಯದಲ್ಲಿ ಜನ ವಿಕಾಸ ಸಮಿತಿ ಮೂಲ್ಕಿಯ ಸಹಕಾರದಲ್ಲಿ ತೋಕೂರಿನ ಮೂಲ್ಕಿ ರಾಮಕೃಷ್ಣ ಪೂಂಜಾ ಕೈಗಾರಿಕಾ ತರಬೇತಿ ಸಂಸ್ಥೆಯ ಸಭಾಂಗಣದಲ್ಲಿ ಜರುಗಿದ ವಿವೇಕಾ ಜಾಗೃತಿ ಸಮಾರಂಭದಲ್ಲಿ ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಮೂಲ್ಕಿ ರಾಮಕೃಷ್ಣ ಪೂಂಜಾ ಕೈಗಾರಿಕಾ ತರಬೇತಿ ಸಂಸ್ಥೆಯ  ಪ್ರಾಂಶುಪಾಲ ಹರಿ ಎಚ್ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾದ ಮೂಲ್ಕಿ ರಾಮಕೃಷ್ಣ ಪೂಂಜಾ ಕೈಗಾರಿಕಾ ತರಬೇತಿ ಸಂಸ್ಥೆಯ ತರಬೇತಿ ಅಧಿಕಾರಿ ರಾಘವೇಂದ್ರ ಅಡಿಗ ಎನ್ ಎಲ್, ಸಂಸ್ಥೆಯ ಕಛೇರಿ ಅಧೀಕ್ಷ ಹರಿಶ್ಚಂದ್ರ ಎ, ಜನವಿಕಾಸ ಸಮಿತಿ ಮೂಲ್ಕಿಯ ಅಧ್ಯಕ್ಷ ಶಶಿಕರ ಕೆರೆಕಾಡು ಹಾಗೂ ಸದಸ್ಯರು, ಮೂಲ್ಕಿ ರಾಮಕೃಷ್ಣ ಪೂಂಜಾ ಕೈಗಾರಿಕಾ ತರಬೇತಿ ಸಂಸ್ಥೆಯ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಪುನರೂರು ಪ್ರತಿಷ್ಠಾನದ ಅಧ್ಯಕ್ಷ ದೇವಪ್ರಸಾದ್ ಪುನರೂರು ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು, ಪ್ರಾಣೇಶ್ ಭಟ್ ದೇಂದಡ್ಕ ವಂದಿಸಿದರು, ಶಿಮಂತೂರಿನ ಶ್ರೀ ಶಾರದ ಸೆಂಟ್ರಲ್ ಸ್ಕೂಲ್ ನ ಪ್ರಾಂಶುಪಾಲ ಜಿತೇಂದ್ರ ವಿ ರಾವ್ ಹೆಜಮಾಡಿ ಕಾರ್ಯಕ್ರಮ ನಿರೂಪಿಸಿದರು.

Ads on article

Advertise in articles 1

advertising articles 2

Advertise under the article