ಮೂಳೂರು ಶ್ರೀ ಮುಂಡಿತ್ತಾಯ ದೈವಸ್ಥಾನದಲ್ಲಿ ಫೆ. 14ರಿಂದ 16ರವರೆಗೆ ಕಾಲಾವಧಿ ಬಂಡಿ ಜಾತ್ರೆ
Monday, February 12, 2024
ಕೈಕಂಬ : ಗುರುಪುರ ಮೂಳೂರು ಶ್ರೀ ಮುಂಡಿತ್ತಾಯ(ವೈದ್ಯನಾಥ) ದೈವಸ್ಥಾನದಲ್ಲಿ ಫೆ. 14ರಿಂದ 16ರವರೆಗೆ ಕಾಲಾವಧಿ ಬಂಡಿ ಜಾತ್ರೆ ನಡೆಯಲಿದೆ.
ಫೆ. 14ರಂದು ಪ್ರಾತಃಕಾಲ ಗಂಟೆ 4:40ಕ್ಕೆ ಭಂಡಾರ ಮನೆಯಿಂದ ಭಂಡಾರ ಹೊರಡಲಿದೆ. 8: 30ಕ್ಕೆ ಧ್ವಜಾರೋಹಣ(ಕೊಡಿ ಏರುವಿಕೆ), ಬೆಳಿಗ್ಗೆ 11ರಿಂದ 1ರವರೆಗೆ ಕಂಚಿಲು ಸೇವೆ ಮತ್ತು ಉರುಳು ಸೇವೆ ನಡೆಯಲಿದೆ. ಮಧ್ಯಾಹ್ನ 1ರಿಂದ ಜಾತ್ರೆ ಪ್ರಯುಕ್ತ ಸಾರ್ವಜನಿಕ ಮಹಾ ಅನ್ನ ಸಂತರ್ಪಣೆ ನಡೆಯಲಿದೆ. ರಾತ್ರಿ 8ಕ್ಕೆ ಶ್ರೀ ಮೈಸಂದಾಯ ದೈವದ ನೇಮ, ರಾತ್ರಿ 10ರಿಂದ ಶ್ರೀ ಮುಂಡಿತ್ತಾಯ ದೈವದ ನೇಮ, ಮುಂಜಾನೆ ಬಂಡಿ ರಥೋತ್ಸವ, ಅಭಯ ಪ್ರದಾನ ಮತ್ತು ಪ್ರಸಾದ ವಿತರಣೆಯಾಗಲಿದೆ.
ಫೆ. 15ರಂದು ರಾತ್ರಿ 8ರಿಂದ ಧೂಮಾವತಿ, ಬಂಟ ಮತ್ತು ಪರಿವಾರ ದೈವಗಳ ನೇಮ, ಅಭಯ ಪ್ರದಾನವಾಗಲಿದೆ. ಫೆ. 16ರಂದು ರಾತ್ರಿ 7ಕ್ಕೆ ತುಡಾರ ಬಲಿ ಉತ್ಸವ, ಧ್ವಜಾವರೋಹಣ, ಬಳಿಕ ಭಂಡಾರ ನಿರ್ಗಮನವಾಗಲಿದೆ.