ಎಕ್ಕಾರಿನಲ್ಲಿ ಸಾರ್ವಜನಿಕ ಶ್ರೀ ಶನೈಶ್ಚರಪೂಜೆ
Wednesday, January 10, 2024
ಜಿಲ್ಲಾ ರಾಜ್ಯೊತ್ಸವ ಪ್ರಶಸ್ತಿ ಪುರಸ್ಕೃತ ಸಂಸ್ಥೆ ವಿಜಯ ಯುವಸಂಗಮ ಎಕ್ಕಾರು ವತಿಯಿಂದ 22ನೇ ವರ್ಷದ ಸಾರ್ವಜನಿಕ ಶ್ರೀ ಶನೈಶ್ಚರ ಪೂಜೆಯು ಎಕ್ಕಾರು ದ್ವಾರದ ಬಳಿಯ ಅಶ್ವಥ ಕಟ್ಟೆಯಲ್ಲಿ ಶನಿ ಕಥಾ ಪ್ರವಚನ ರೂಪದಲ್ಲಿ ಎಕ್ಕಾರು ಶ್ರೀಗೋಪಾಲಕೃಷ್ಣ ಮಠದ ವೇದಮೂರ್ತಿ ಹರಿದಾಸ ಉಡುಪರ ಪೌರೋಹಿತ್ಯದಲ್ಲಿ ವಿಜೃಂಭಣೆಯಿಂದ ನೆರವೇರಿತು.ಈ ಸಂದರ್ಭ ಎಕ್ಕಾರು ಶ್ರೀಕೊಡಮಣಿತ್ತಾಯ ದೈವಸ್ಥಾನದ ಆಡಳಿತ ಮೊಕ್ತೇಸರ ನಿತಿನ್ ಹೆಗ್ಡೆ ಕಾವರಮನೆ (ತಿಮ್ಮ ಕಾವರು),ರತ್ನಾಕರ ಶೆಟ್ಟಿ ಬಡಕರೆ ಬಾಳಿಕೆ,ಸದಾಶಿವ ಶೆಟ್ಟಿ ಮುರ,ಗಿರೀಶ್ ಎಂ.ಶೆಟ್ಟಿ ಕಟೀಲು,ಈಶ್ವರ್ ಕಟೀಲ್,ಕಸ್ತೂರಿ ಪಂಜ,ವಿಜಯ ಯುವ ಸಂಗಮದ ಅಧ್ಯಕ್ಷ ವಿನೋದ್ ಶೆಟ್ಟಿ,ಪ್ರಧಾನ ಕಾರ್ಯದರ್ಶಿ ಪ್ರವೀಣ್ ಕೆ.ಎಂ,ಎಕ್ಕಾರು ಗ್ರಾ.ಪಂ ಸದಸ್ಯ ವಿಕ್ರಮ್ ಮಾಡ ಹಾಗೂ ಮತ್ತಿತರರು ಉಪಸ್ಥಿತರಿದ್ದರು.