-->

ಪ್ರೊ ಅಮೃತಸೊಮೇಶ್ವರರವರ ನುಡಿ ನಮನ ಕಾರ್ಯಕ್ರಮ

ಪ್ರೊ ಅಮೃತಸೊಮೇಶ್ವರರವರ ನುಡಿ ನಮನ ಕಾರ್ಯಕ್ರಮ

ಕಿನ್ನಿಗೋಳಿ :ಯಕ್ಷಗಾನ ಪ್ರಸಂಗಕರ್ತನಾಗಿ,ಜಾನಪದ ವಿದ್ವಾಂಸನಾಗಿ,ಕೃತಿಗಳ ರಚನೆಗಳ ಮೂಲಕ ಹಿರಿಯ ಸಾಹಿತಿಯಾಗಿ,ಹಾಡುಗಳ ಮೂಲಕ ಚಲನಚಿತ್ರ ರಂಗಕ್ಕೆ ಕೊಡುಗೆ ಸೇರಿದಂತೆ ಹಿರಿಯ ಸಾಹಿತಿ ಪ್ರೊ ಅಮೃತ ಸೊಮೇಶ್ವರರವರು ಎಲ್ಲಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದು ಅವರ ಸಾಧನೆ ಇಂದಿನ ಯುವ ಪೀಳಿಗೆಗೆ ಮಾದರಿಯೆಂದು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ  ಪುನರೂರು ಹೇಳಿದರು.ಕಿನ್ನಿಗೋಳಿಯ ಯುಗಪುರುಷ ಸಭಾ ಭವನದಲ್ಲಿ ಕಿನ್ನಿಗೋಳಿಯ ಯುಗಪುರುಷದ ನೇತ್ರತ್ವದಲ್ಲಿ ನಡೆದ ಯಕ್ಷಗಾನ ಪ್ರಸಂಗಕರ್ತ,ಸಾಹಿತಿಃ ಪ್ರೊ ಅಮೃತಸೊಮೇಶ್ವರರವರ ನುಡಿ ನಮನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು. ಕಿನ್ನಿಗೋಳಿ ಯುಗಪುರುಷದ ಕೆ. ಭುವನಾಭಿರಾಮ ಉಡುಪ , ಮೂಡುಬಿದಿರೆಯ  ಉದ್ಯಮಿ  ಕೆ. ಶ್ರೀಪತಿ ಭಟ್,   ಉಳೆಪಾಡಿ ಶ್ರೀ ದುರ್ಗಾಪರಮೇಶ್ವರೀ ಮಹಮ್ಮಾಯಿ ದೇವಸ್ಥಾನದ ಧರ್ಮದರ್ಶಿ ಮೋಹನದಾಸ ಸುರತ್ಕಲ್,  ಮೂಲ್ಕಿ  ಬಪ್ಪನಾಡು ಲಯನ್ಸ್ ಕ್ಲಬ್‌ ಸ್ಥಾಪಕಾಧ್ಯಕ್ಷ   ವೆಂಕಟೇಶ ಹೆಬ್ಬಾರ್,ಪ್ರತಿಭಾ ಹೆಬ್ಬಾರ್‌,ಹೇಮಾಚಾರ್ಯ,ಡಾ.ಸೋಂದಾ ಭಾಸ್ಕರ ಭಟ್‌,ಶ್ರೀಧರ್‌ ಡಿ ಎಸ್‌,,ಶರತ್‌ ಶೆಟ್ಟಿ ಕಿನ್ನಿಗೋಳಿ,ಜೊಸ್ಸಿ ಪಿಂಟೋ,ಉಮೇಶ್‌ ರಾವ್‌ ಎಕ್ಕಾರು,ದಯಾಮಣಿ ಎಕ್ಕಾರು ಮತ್ತಿತರರು ಉಪಸ್ಥಿತರಿದ್ದರು.

Advertise in articles 1

advertising articles 2

Advertise under the article

ಕಾರ್ಯಕ್ರಮಗಳ ನೇರ ಪ್ರಸಾರ, ಚಿತ್ರೀಕರಣ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 8618554807