ರಾಜ್ಯ ಮಟ್ಟದ ಕರಾಟೆಸ್ಪರ್ಧೆ - ಚಿನ್ನ,ಬೆಳ್ಳಿ ಹಾಗೂ ಕಂಚಿನ ಪದಕ
Monday, January 8, 2024
ಮೂಲ್ಕಿಯ ಕೆರೆಕಾಡು ನಮ್ಮನೆ ಯ ನಿವಾಸಿ ಅವಳಿ ಮಕ್ಕಳಾದ ನವೀಶ್ ಎನ್. ಪೂಜಾರಿ ಅವರು ಮಂಗಳಾದೇವಿಯ ಖಾಸಗಿ ಶಾಲೆಯಲ್ಲಿ ಭಾನುವಾರ ನಡೆದ ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ "ಕುಮಿಟೆ"ಯಲ್ಲಿ ಚಿನ್ನ ಹಾಗೂ "ಕಟ" ವಿಭಾಗದಲ್ಲಿ ಬೆಳ್ಳಿಯ ಪದಕ, ನಮಿಷಾ ಎನ್. ಪೂಜಾರಿ ಎರಡೂ ವಿಭಾಗದಲ್ಲಿ ಕಂಚಿನ ಪದಕವನ್ನು ಪಡೆದಿದ್ದಾರೆ. ಮುಖ್ಯ ಶಿಕ್ಷಕ ಈಶ್ವರ ಕಟೀಲು ಹಾಗೂ ಶಿಕ್ಷಕ ನಾಗರಾಜ್ ಕುಲಾಲ್ ಕುಬೆವೂರು ಅವರಿಂದ ತರಬೇತಿ ಪಡೆಯುತ್ತಿದ್ದಾರೆ. ಪತ್ರಕರ್ತ ರಂಗಭೂಮಿ ಕಲಾವಿದ ನರೇಂದ್ರ ಕೆರೆಕಾಡು ಹಾಗೂ ತೋಕೂರು ನಿಟ್ಟೆ ಶಿಕ್ಷಣ ಸಂಸ್ಥೆಯ ಡಾ.ರಾಮಣ್ಣ ಶೆಟ್ಟಿ ಆಂಗ್ಲ ಮಾಧ್ಯಮ ಶಾಲೆಯ ಸಹ ಶಿಕ್ಷಕಿ ಉಷಾ ಪೂಜಾರ್ತಿ ಅವರ ಮಕ್ಕಳಾಗಿದ್ದಾರೆ. ಇರ್ವರು ಕಿಲ್ಪಾಡಿ ಬೆಥನಿ ಆಂಗ್ಲ ಮಾಧ್ಯಮ ಶಾಲೆಯ 4ನೇ ತರಗತಿಯ ವಿದ್ಯಾರ್ಥಿಗಳಾಗಿದ್ದಾರೆ.