ತೋಕೂರು ಮಹಿಳಾ ಮಂಡಲದ ರಜತ ಮಹೋತ್ಸವದ ಸಮಾರೋಪ;ಸಾಧಕರಿಗೆ ಗೌರವ
Wednesday, January 31, 2024
ತೋಕೂರು:ತೋಕೂರು ಮಹಿಳಾ ಮಂಡಲ, ರಜತೋತ್ಸವ ಸಮಿತಿ, ಯುವಕ ಮಂಡಲದ ಆಶ್ರಯದಲ್ಲಿ ಮಹಿಳಾ ಮಂಡಲದ ರಜತ ಮಹೋತ್ಸವದ ಸಮಾರೋಪ ಹಾಗೂ ಜಂಟಿ ಸಂಸ್ಥೆಯ ವಾರ್ಷಿಕೋತ್ಸವ ಸಮಾರಂಭ ತೋಕೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವಠಾರದಲ್ಲಿ ನಡೆಯಿತು.
ಮಂಗಳೂರು ಶ್ರೀನಿವಾಸ ವಿದ್ಯಾಲಯದ ಕಾರ್ಯದರ್ಶಿ ಮಿತ್ರ ಶ್ರೀನಿವಾಸರಾವ್ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು
ವಿನೀತ್ ಕುಮಾರ್ ಶೆಟ್ಟಿ ಚಂದ್ರಗಿರಿ ಮಾಣಿ ರವರು ಸ್ಮರಣ ಸಂಚಿಕೆಯನ್ನು ಬಿಡುಗಡೆ ಗೊಳಿಸಿದರು . ದ.ಕ.ಜಿಲ್ಲೆಯ ಮಹಿಳಾ ಮಂಡಲಗಳ ಒಕ್ಕೂಟದ ಅಧ್ಯಕ್ಷೆ ಚಂಚಲ ತೇಜೋಮಯ ಸಮಾರೋಪ ಭಾಷಣ ಮಾಡಿದರು.
ಕಾರ್ಯಕ್ರಮದಲ್ಲಿ ಮೂಲ್ಕಿ ಮೂಡಬಿದಿರೆ ವಿಧಾನ ಸಭಾ ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್ , ಉದ್ಯಮಿ ರೋಹಿತ್ ಎಸ್ ಮುಕ್ಕ, ಸುಬ್ರಹ್ಮಣ್ಯರಾವ್ ನಂದಗೋಕುಲ ಪಡುಬಿದ್ರೆ, ಮಹಿಳಾಮಂಡಲದ ಅಧ್ಯಕ್ಷೆ ಅನುಪಮಾ ಎ .ರಾವ್, ಯುವಕ ಸಂಘದ ಅಧ್ಯಕ್ಷ ಶೇಖರ ಶೆಟ್ಟಿಗಾರ್, ರಜತ ಮಹೋತ್ಸವ ಸಮಿತಿಯ ಗೌರವಾಧ್ಯಕ್ಷೆ ಯಶೋಧ ಪಿ ರಾವ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ವಿನೋದಾ ಭಟ್,ಹೇಮನಾಥ ಅಮೀನ್ ಕಾರ್ಯಕ್ರಮ ನಿರೂಪಿಸಿದರು
ಕಾರ್ಯಕ್ರಮದಲ್ಲಿ ಸಾಧಕರ ನೆಲೆಯಲ್ಲಿ ಗ್ರಾಮದ ಶೈಕ್ಷಣಿಕ ಸಾಧಕ ವಿದ್ಯಾರ್ಥಿಗಳು ಹಾಗೂ ಮಂಗಳೂರು ನಾಟ್ಯಾರಾಧನ ಕಲಾಕೇಂದ್ರದ ಸ್ಥಾಪಕರಾದ ವಿದುಷಿ, ಸುಮಂಗಲಾ ರತ್ನಾಕರ ರಾವ್ ರವರನ್ನು ಗೌರವಿಸಲಾಯಿತು.