-->

ದ.ಕ ಜಿಲ್ಲಾ ಪತ್ರಕರ್ತರ ವಾರ್ಷಿಕ ಕ್ರೀಡಾಕೂಟ ಕ್ರಿಕೆಟ್ ಪಂದ್ಯದಲ್ಲಿ ವಾರ್ತಾ ಭಾರತಿ ಪ್ರಥಮ,ಅಭಿಮತ ದ್ವಿತೀಯ

ದ.ಕ ಜಿಲ್ಲಾ ಪತ್ರಕರ್ತರ ವಾರ್ಷಿಕ ಕ್ರೀಡಾಕೂಟ ಕ್ರಿಕೆಟ್ ಪಂದ್ಯದಲ್ಲಿ ವಾರ್ತಾ ಭಾರತಿ ಪ್ರಥಮ,ಅಭಿಮತ ದ್ವಿತೀಯ

ಮಂಗಳೂರು;ದಕ್ಷಿಣ ಕನ್ನಡ ಕಾರ್ಯ ನಿರತ ಪತ್ರಕರ್ತರ ಸಂಘದ  ಪತ್ರಕರ್ತರ ವಾರ್ಷಿಕ ಕ್ರೀಡಾ ಕೂಟದ ಕ್ರಿಕೆಟ್ ಪಂದ್ಯಾಟದಲ್ಲಿ ವಾರ್ತಾಭಾರತಿ ಪ್ರಥಮ, ಅಭಿಮತ ದ್ವಿತೀಯ ಸ್ಥಾನ ಗಳಿಸಿದೆ.
ನೆಹರು ಮೈದಾನದಲ್ಲಿ ಭಾನುವಾರ ನಡೆದ
ಸಮಾರೋಪ ಸಮಾರಂಭದಲ್ಲಿ 
 ದಕ್ಷಿಣ  ಶಾಸಕ ವೇದವ್ಯಾಸ ಕಾಮತ್ ಹಾಗೂ
ರೋಹನ್ ಕಾರ್ಪೊರೇಷನ್ ನ ಆಡಳಿತ ನಿರ್ದೇಶಕ ರೋಹನ್ ಮೊಂತೆರೊ ಆಗಮಿಸಿ  ಶುಭ ಹಾರೈಸಿದರು.
      ಬ್ರ್ಯಾಂಡ್ ಮಂಗಳೂರು ಹೆಸರಿನಲ್ಲಿ ಮಂಗಳೂರಿನ ಸಕಾರಾತ್ಮಕ ಬೆಳವಣೆಗೆಗೆ ಪತ್ರಕರ್ತರ ಕೊಡುಗೆ ಶ್ಲಾಘನೀಯ ಎಂದು ರೋಹನ್ ಮೊಂತೆರೊ ಹೇಳಿದರು.
    ಹಿರಿಯ ಪತ್ರಕರ್ತ ಮನೋಹರ ಪ್ರಸಾದ್,  ದ.ಕ ಜಿಲ್ಲಾ ಕಾರ್ಯ ನಿರತ ಪತ್ರ ಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಪ್ರಧಾನ ಕಾರ್ಯ ದರ್ಶಿ ಜಿತೇಂದ್ರ ಕುಂದೇಶ್ವರ,
ಉಪಾಧ್ಯಕ್ಷ ಭಾಸ್ಕರ ರೈ ಕಟ್ಟ ,ರಾಜೇಶ್ ಪೂಜಾರಿ,ಕಾರ್ಯ ಕ್ರಮ ಸಂಯೋಜಕರಾದ ವಿಲ್ಫೆಡ್ ಡಿ ಸೋಜ,ದಯಾ ಕುಕ್ಕಾಜೆ, ದ.ಕ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಕೋಶಾಧಿಕಾರಿ ಪುಷ್ಪರಾಜ್ ಬಿ.ಎನ್ , ಕಾರ್ಯ ಕಾರಿ ಸಮಿತಿ ಸದಸ್ಯ ರಾಜೇಶ್ ದಡ್ಡಂಗಡಿ,ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ (ನಾ.ನಿ)ಇಬ್ರಾಹಿಂ ಅಡ್ಕಸ್ಥಳ ಉಪಸ್ಥಿತರಿದ್ದರು. ಕಿಶನ್ ಮತ್ತು ಗಣೇಶ್  ನಿರೂಪಿಸಿದರು.

Advertise in articles 1

advertising articles 2

Advertise under the article

ಕಾರ್ಯಕ್ರಮಗಳ ನೇರ ಪ್ರಸಾರ, ಚಿತ್ರೀಕರಣ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 8618554807