-->

ಕಟೀಲು ವರ್ಷಾವಧಿ ಜಾತ್ರೆ

ಕಟೀಲು ವರ್ಷಾವಧಿ ಜಾತ್ರೆ
ಎ.13 ರಿಂದ ಎ.20 ರವರೆಗೆ ಕಟೀಲು ಶ್ರೀದುರ್ಗಾಪರಮೇಶ್ವರೀ ದೇವಸ್ಥಾನದ ವರ್ಷಾವಧಿ ಜಾತ್ರೆ
ತೋಕೂರು:ಮದ್ದೇರಿ ದೈವಸ್ಥಾನದ ನಿರ್ಮಾಣಕ್ಕೆ ಭೂಮಿ ಪೂಜೆ

ತೋಕೂರು:ಮದ್ದೇರಿ ದೈವಸ್ಥಾನದ ನಿರ್ಮಾಣಕ್ಕೆ ಭೂಮಿ ಪೂಜೆ





ಹಳೆಯಂಗಡಿ : ತೋಕೂರು ಮದ್ದೇರಿ ದೈವಸ್ಥಾನದ ಜೀರ್ಣೋದ್ಧಾರದ ಅಂಗವಾಗಿ ನೂತನ ದೈವಸ್ಥಾನ ನಿರ್ಮಾಣಕ್ಕೆ ವೇ.ಮೂ.ಸುಬ್ರಮಣ್ಯ ಭಟ್, ಮಧುಸೂದನ್ ಆಚಾರ್ಯ ಹಾಗೂ ಹರೀಶ್ ಭಟ್ ನೇತೃತ್ವದಲ್ಲಿ  ವಿವಿಧ ಧಾರ್ಮಿಕ ಕಾರ್ಯಗಳೊಂದಿಗೆ ಪ್ರಾತಃಕಾಲ ವಿಶೇಷ ಪ್ರಾರ್ಥನೆ ಬಳಿಕ 6.30ಕ್ಕೆ ಗಣ ಹೋಮ ನಡೆದು 7.30ಕ್ಕೆ ಮಕರ ಲಗ್ನ ಸುಮೂಹರ್ತದಲ್ಲಿ ಭೂಮಿ ಪೂಜೆ ನೆರವೇರಿತು.
ಈ ಸಂದರ್ಭ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಪದ್ಮನಾಭ ಆಚಾರ್ಯ,ಗೌರವಾಧ್ಯಕ್ಷ ಹರಿದಾಸ್ ಭಟ್,ಸಮಿತಿಯ ಸುಬ್ರಹ್ಮಣ್ಯ ಭಟ್ ನಂದಗೋಕುಲ ಪಡುಬಿದ್ರೆ, ಪ್ರಭಾಕರ್ ರಾವ್, ಪ್ರಧಾನ ಕಾರ್ಯದರ್ಶಿ ಹೇಮನಾಥ ಅಮೀನ್, ಕೋಶಾಧಿಕಾರಿ ಪುರುಷೋತ್ತಮ ಕೋಟ್ಯಾನ್, ಮೋಹನ್ ದಾಸ್ ತೋಕೂರು,ಬೆಂಗಳೂರು ಸಮಿತಿಯ ಹರಿಪ್ರಸಾದ್ ಶೆಟ್ಟಿ ,ತೋಕೂರು ಗುತ್ತು ಉಮೇಶ್ ಶೆಟ್ಟಿ ,,ಸಮಿತಿ ಸದಸ್ಯರು, ಪಂಚಾಯತ್ ಅಧ್ಯಕ್ಷ  ಕುಸುಮಾ ಚಂದ್ರಶೇಖರ್, ಮಾಜಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ  ಕಸ್ತೂರಿ ಪಂಜ, ಪಂಚಾಯತ್ ಸದಸ್ಯರಾದ ಸಂತೋಷ್ ಕುಮಾರ್, ಸ್ಥಳೀಯ ಸಂಘ ಸಂಸ್ಥೆಗಳ ಅಧ್ಯಕ್ಷರು ಮತ್ತು ಸದಸ್ಯರು, ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 9880954630,8618554807

ಸುದ್ದಿಗಳಿದ್ದರೆ Chigurunewss@gmail.com or ವಾಟ್ಸಪ್ ಸಂಖ್ಯೆ 8618554807 ಗೆ ಕಳಿಸಿರಿ