-->

ಎಕ್ಕಾರು:ಭಜನಾ ಸಂಕೀರ್ತಣೆ,ವಿಶೇಷ ಪೂಜೆ

ಎಕ್ಕಾರು:ಭಜನಾ ಸಂಕೀರ್ತಣೆ,ವಿಶೇಷ ಪೂಜೆ

ಎಕ್ಕಾರು:ಆಯೋಧ್ಯೆಯಲ್ಲಿ ನಡೆದ ಶ್ರೀ ರಾಮನ ಪ್ರಾಣ ಪ್ರತಿಷ್ಠೆಯ ಪ್ರಯುಕ್ತ ಎಕ್ಕಾರು ಪರಿಸರದ ಸ್ಥಳೀಯ ಸಂಘ ಸಂಸ್ಥೆಗಳ ವತಿಯಿಂದ  ವಿವಿಧ ಭಜನಾ ತಂಡಗಳಿಂದ ಭಜನಾ ಸಂಕೀರ್ತಣೆ ಹಾಗೂ  ಸೀತೆ,ಲಕ್ಷ್ಮಣ ಹಾಗೂ ಹನುಮ ವೇಷ ದೊಂದಿಗೆ ವಿಜೃಂಭಣೆಯಿಂದ ಎಕ್ಕಾರು ಗ್ರಾಮ ಪಂಚಾಯತ್ ಸಮೀಪದಿಂದ ಎಕ್ಕಾರು ಶ್ರೀ ಗೋಪಾಲ ಕೃಷ್ಣ ಮಂದಿರದ ತನಕ  ಮೆರವಣೆಗೆಯು ನಡೆಯಿತು.ಆಪ್ರಯುಕ್ತ ಭಜನಾ ಮಂದಿರದಲ್ಲಿ ವಿಶೇಷ ಪೂಜೆ ಹಾಗೂ ವಿವಿಧ ಭಜನಾ ತಂಡಗಳಿಂದ   ಬೆಳಿಗ್ಗಿನಿಂದ ರಾತ್ರಿ ತನಕ ಭಜನಾ ಸಂಕೀರ್ತನೆಯು ನಡೆಯಿತು.
ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಅರ್ಚಕ ಕಮಲಾದೇವಿ ಪ್ರಸಾದ ಆಸ್ರಣ್ಣ,ಎಕ್ಕಾರು ಶ್ರೀ ಗೋಪಾಲಕೃಷ್ಣ ಭಜನಾ ಮಂದಿರದ ಜಗದೀಶ್ ರಾವ್ ,ಸುರೇಂದ್ರ ರಾವ್ ,ಎಕ್ಕಾರು ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರವೀಣ್ ಆಚಾರ್ಯ,ಪ್ರಕಾಶ್ ಕುಕ್ಯಾನ್ ,ಸುದೀಪ್ ಅಮೀನ್ ,ತೇಜಸ್ವಿ ರಾವ್ ,ಭಾರತಿ ಶೆಟ್ಟಿ,ಹರಿಪ್ರಸಾದ್ ಕುಲಾಲ್ ,ದಿನೇಶ್ ಮೇಲೆಕ್ಕಾರು,ರಿತೇಶ್ ಶೆಟ್ಟಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಮೆರವಣೆಗೆ ಹಾಗೂ ಭಜನಾ ಸಂಕೀರ್ತಣೆ :

ಬೆಳಿಗ್ಗೆ ಎಕ್ಕಾರು  ಗ್ರಾಮ ಪಂಚಾಯತ್ ಬಳಿಯಿಂದ ಎಕ್ಕಾರು  ಶ್ರೀ ಗೋಪಾಲಕೃಷ್ಣ ಭಜನಾ ಮಂದಿರದ ವರೆಗೆ ರಾಮ -ಲಕ್ಷ್ಮಣ-ಸೀತೆ ಹಾಗೂ ಹನುಮಂತ ವೇಷ ದೊಂದಿಗೆ ಬಾಲಗೋಕುಲ ಭಜನಾ ತಂಡ ಹಾಗೂ ಶ್ರೀ ದುರ್ಗಾ ಮಹಿಳಾ ಭಜನಾ ಮಂಡಳಿ , ದುರ್ಗಾ ನಾಸಿಕ್ ಬ್ಯಾಂಡ್ ನೊಂದಿಗೆ ಮೆರವಣಿಗೆಗೆ  ನಡೆಯಿತು ಬಳಿಕ ಭಜನಾ ಮಂದಿರದಲ್ಲಿ ದೀಪ ಪ್ರಜ್ವಲಿಸಿ ಭಜನಾ ಸಂಕೀರ್ತನೆ ಆರಂಭಗೊಂಡಿತು.


ಭಜನಾ ಸಂಕೀರ್ತಣೆಯಲ್ಲಿ ಪಾಲ್ಗೊಂಡ ತಂಡಗಳು: 


ಶ್ರೀ ದುರ್ಗಾ ಮಹಿಳಾ ಮಂಡಳಿ ಎಕ್ಕಾರು, ದುರ್ಗಾ ಬಾಲಗೋಕುಲ ಮಕ್ಕಳ ತಂಡ ,
ಕುಂಭ ಕಂಠಿಣೀ ಭಜನಾ ಮಂಡಳಿ ಬುಡಿಗಾಡು - ಎಕ್ಕಾರು , ವಿಶ್ವ ಹಿಂದೂ ಪರಿಷತ್ ಬಜರಂಗದಳ ಭಜರಂಗಿ ಶಾಖೆ ಎಕ್ಕಾರು, ದುರ್ಗಾ ವಾಹಿನಿ ಕೆಂಚಗುಡ್ಡೆ ಎಕ್ಕಾರು ,ಶ್ರೀಮತಿ ಜ್ಯೋತಿ ಭಟ್ ಬಳಗ ಕಟೀಲು, ಇವರಿಂದ ಭಜನ ಕಾರ್ಯಕ್ರಮ. ಹಿಂದೂ ಯುವ ಸೇನೆ ದುರ್ಗಾಶಾಖೆ ಎಕ್ಕಾರು, ಇವರ ಹಳೆಯಂಗಡಿಯ  ಭಜನಾ ತಂಡ


ಮಧ್ಯಾಹ್ನ ಹಾಗೂ ರಾತ್ರಿ  ಪೂಜೆಯ ನಂತರ ಸಾರ್ವಜನಿಕ ಅನ್ನ ಸಂತರ್ಪಣೆಯ ನಡೆಯಿತು.

Advertise in articles 1

advertising articles 2

Advertise under the article

ಕಾರ್ಯಕ್ರಮಗಳ ನೇರ ಪ್ರಸಾರ, ಚಿತ್ರೀಕರಣ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 8618554807