-->

ಜ.22ನ್ನು ವಿಶ್ವ ಹಿಂದೂ ರಾಷ್ಟ್ರ ದಿನವನ್ನಾಗಿ ಆಚರಿಸೋಣ: ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ

ಜ.22ನ್ನು ವಿಶ್ವ ಹಿಂದೂ ರಾಷ್ಟ್ರ ದಿನವನ್ನಾಗಿ ಆಚರಿಸೋಣ: ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ



ಬೆಂಗಳೂರು:ಸುಮಾರು 500 ವರ್ಷಗಳ ಕಾಲ ಸುದೀರ್ಘ ಹೋರಾಟದ ಪರಿಣಾಮವಾಗಿ ಅಯೋಧ್ಯೆಯಲ್ಲಿ ಸಮಸ್ತ ಹಿಂದೂಗಳ ಆಸ್ಮಿತೆಯಾದ ಮರ್ಯಾದ ಪುರುಷೋತ್ತಮ ಶ್ರೀರಾಮನ ಪ್ರಾಣ ಪ್ರತಿಷ್ಠೆಯಾದ ದಿನವಾದ ಜನವರಿ 22ನ್ನು ಪ್ರತಿ ವರ್ಷ ವಿಶ್ವ ಹಿಂದೂ ರಾಷ್ಟ್ರ ದಿನವನ್ನಾಗಿ ಆಚರಿಸಬೇಕು ಎಂದು ಆಧ್ಯಾತ್ಮಿಕ ಗುರು, ವೈಜ್ಞಾನಿಕ ಜ್ಯೋತಿಷಿ ಶ್ರೀಶ್ರೀ ಚಂದ್ರಶೇಖರ ಸ್ವಾಮೀಜಿ ಹೇಳಿದರು.
ಅಯೋಧ್ಯೆಯಲ್ಲಿ ರಾಮಪ್ರತಿಷ್ಠೆಯ ಹಿನ್ನೆಲೆಯಲ್ಲಿ ಬೆಂಗಳೂರಿನ ಆಶ್ರಮದಲ್ಲಿ ನಡೆದ ವಿಶೇಷ ಪೂಜಾ ಪುರಸ್ಕಾರದ ಬಳಿಕ ಮಾತನಾಡಿದ ಸ್ವಾಮೀಜಿ, ಜನವರಿ 22 ಎಂಬುದು ವಿಶ್ವದಲ್ಲಿನ ಹಿಂದೂಗಳ ಸ್ವಾಭಿಮಾನದ ದಿನ. ರಾಮ ಮಂದಿರ ನಿರ್ಮಾಣಕ್ಕಾಗಿ ಸುಮಾರು 500 ವರ್ಷಗಳ ಕಾಲ ನಡೆದ ಹೋರಾಟದ ಪರಿಣಾಮವಾಗಿ ಶ್ರೀರಾಮ ಮಂದಿರ ನಿರ್ಮಾಣಗೊಂಡು ಬಾಲ ರಾಮನ ಮೂರ್ತಿ ಸ್ಥಾಪನೆ ಮಾಡಿ, ಪ್ರಾಣ ಪ್ರತಿಷ್ಠೆ ಮಾಡಲಾಗಿದೆ. ವಿಶ್ವದ ಇತಿಹಾಸದಲ್ಲೇ ಇಂತಹ ಕಾರ್ಯಕ್ರಮ ಈ ಹಿಂದೆ ನಡೆದಿಲ್ಲ. ಮುಂದೆಯೂ ನಡೆಯುವುದಿಲ್ಲ. ನಭೂತೋ ಭವಿಷ್ಯತಿ ಎಂಬಂತೆ ಕಾರ್ಯಕ್ರಮ ನಡೆದಿದೆ. ಆದುದರಿಂದ ಇದರ ನೆನಪು ಸದಾ ಜನತೆಯಲ್ಲಿ ಇರಬೇಕು ಎಂಬ ದೃಷ್ಟಿಯಿಂದ ಪ್ರತಿ ವರ್ಷ ಜನವರಿ 22ನ್ನು ವಿಶ್ವ ಹಿಂದೂ ರಾಷ್ಟ್ರ ದಿನವನ್ನಾಗಿ ಆಚರಿಸಬೇಕು ಎಂದರು.
ಹಿಂದೂ ಧರ್ಮದ ಜನರು ಹಬ್ಬವನ್ನು ಸಾಮೂಹಿಕವಾಗಿ ಆಚರಿಸಿದರೂ, ಯಾವುದೇ ಹಿಂದೂ ದೇವಸ್ಥಾನ ಪ್ರತಿಷ್ಠೆಯನ್ನು ಜನರು ಇಷ್ಟೊಂದು ಪ್ರೀತಿಯಿಂದ ಸಂಭ್ರಮಿಸಲಿಲ್ಲ. ಯಾವುದೇ ಭೇದ ಭಾವ ಇಲ್ಲದೆ ಸಾಮೂಹಿಕವಾಗಿ ವಿಶ್ವದ ಹಿಂದೂಗಳು ಭಾಗವಹಿಸಿದ್ದಾರೆ. ರಾಮ ಮಂದಿರದಲ್ಲಿ ರಾಮಲಲ್ಲಾನ ಪ್ರಾಣ ಪ್ರತಿಷ್ಠೆಯ ಹೆಸರಿನಲ್ಲಿ ವಿಶ್ವದಲ್ಲಿ ಧಾರ್ಮಿಕ ಕ್ರಾಂತಿಯೇ ನಡೆದಿದೆ. ಧಾರ್ಮಿಕ ವಿಚಾರಗಳಲ್ಲಿ ಅಭಿಪ್ರಾಯವನ್ನು ಅಭಿವ್ಯಕ್ತಪಡಿಸಲು ಹಿಂಜರಿಯುತ್ತಿದ್ದ ಕಾಲದಿಂದ ಧಾರ್ಮಿಕ ಕಾರ್ಯಕ್ರಮದಲ್ಲಿ ಸಾಮೂಹಿಕವಾಗಿ ಭಾಗವಹಿಸುವ ಹಂತಕ್ಕೆ ಸಮಾಜ ಬೆಳೆದಿದೆ. ಆದುದರಿಂದ ಇದೊಂದು ಹಿಂದೂ ಸಮಾಜದ ಸ್ವಾಭಿಮಾನದ ಕಾರ್ಯಕ್ರಮವೂ ಹೌದು ಎಂದರು.
ರಾಮ ಎಂದರೆ ಪ್ರೀತಿ, ವಿಶ್ವಾಸದ ಸಂಕೇತ. ಆತನ ಬದುಕೇ ಆದರ್ಶ. ಆದರ್ಶ ಪುತ್ರ, ಆದರ್ಶ ಸಹೋದರ, ಆದರ್ಶ ಪತಿ, ಆದರ್ಶ ಮಿತ್ರ, ಆದರ್ಶ ರಾಜ, ಆದರ್ಶ ಶತ್ರು, ಆದರ್ಶ ಧರ್ಮಪಾಲಕ, ಆದರ್ಶ ಏಕವಚನೀ ಹೀಗೆ ಎಲ್ಲವೂ ಆದರ್ಶ. ಇಂತಹ ಆದರ್ಶ ಸಮಾಜದ ನಿರ್ಮಾಣಕ್ಕೆ ಈ ಮಂದಿರ ಕಾರಣೀಭೂತವಾಗಲಿ. ಈ ಮಂದಿರವು ಆದರ್ಶವಾಗಲಿ ಎಂಬುದು ಆಶಯ ಎಂದರು.
ಸಮಾರಂಭದಲ್ಲಿ ಆಶ್ರಮದ ನಿರ್ದೇಶಕಿ ಶ್ರೀಮತಿ ರಜನಿ. ಸಿ. ಭಟ್, ರಾಘವ್ ಸೂರ್ಯ, ಶ್ರೀಮತಿ ರೋಶಿನಿ ಸಿ ಭಟ್, ರಾಹುಲ್ ಸಿ. ಭಟ್, ಸಂಚಾಲಕ ಪುನೀತ್ ಕೃಷ್ಣ ಉಪಸ್ಥಿತರಿದ್ದರು.

Advertise in articles 1

advertising articles 2

Advertise under the article

ಕಾರ್ಯಕ್ರಮಗಳ ನೇರ ಪ್ರಸಾರ, ಚಿತ್ರೀಕರಣ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 8618554807