ಭಟ್ರಕೆರೆ - ಮೆಣ್ಗಲ್ ಪದವು ಕಾಂಕ್ರೀಟ್ ರಸ್ತೆ ಉದ್ಘಾಟನೆ
Wednesday, January 24, 2024
ಪೆರ್ಮುದೆ:ಪೆರ್ಮುದೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 25 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಭಟ್ರಕೆರೆಯಿಂದ ಮೆಣ್ಗಲ್ ಪದವಿಗೆ ಸಂಪರ್ಕಿಸುವ ರಸ್ತೆಯ ಉದ್ಘಾಟನೆಯನ್ನು ಮೂಲ್ಕಿ ಮೂಡಬಿದಿರೆ ವಿಧಾನ ಸಭಾ ಕ್ಷೇತ್ರದ ಶಾಸಕ ಉಮಾನಾಥ್ ಕೋಟ್ಯಾನ್ ಅವರು ಸೋಮವಾರದಂದು ನೆರವೇಸಿದರು.
ಈ ಸಂದರ್ಭ ಪೆರ್ಮುದೆ ಗ್ರಾ.ಪಂ ಅಧ್ಯಕ್ಷೆ ಜ್ಯೋತಿ ಪಿ ಶೆಟ್ಟಿ,ಉಪಾಧ್ಯಕ್ಷ ಸಂದೇಶ್ ಪೂಜಾರಿ,ಪಿಡಿಓ ರಮೇಶ್ ರಾಥೋಡ್,ಶೇಖರ್ ಶೆಟ್ಟಿ ಕಲ್ಪವೃಕ್ಷ,ಗುರುರಾಜ ಮಾಡ ಬೊಳ್ಳೊಳ್ಳಿ ಮಾರ್ ಗುತ್ತು,ಸುಧಾಕರ ಪೂಜಾರಿ ಮುಕ್ಕೋಡಿ,ನವೀನ ಶೆಟ್ಟಿ,ಕಿಶೋರ್ ಕೋಟ್ಯಾನ್ ,ಉಮೇಶ್ ಪೂಜಾರಿ,ನವೀನ್ ಚಂದ್ರ ಶೆಟ್ಟಿ,ಸದಾನಂದ ಶೆಟ್ಟಿಗಾರ್,ಕಾರ್ಯದರ್ಶಿ ನಾಗೇಶ್ ಸುವರ್ಣ ಹಾಗೂ ಮೊದಲಾದವರು ಉಪಸ್ಥಿತರಿದ್ದರು.