ನಾಳೆ(ಜ -13) ಪುನರೂರು ಸಂಭ್ರಮ -2024 ಕಾರ್ಯಕ್ರಮ
Friday, January 12, 2024
ಮೂಲ್ಕಿ:ಪುನರೂರು ಶ್ರೀ ವಿಶ್ವನಾಥ ದೇವಸ್ಥಾನದ ವಠಾರದಲ್ಲಿ ಪುನರೂರು ಪ್ರತಿಷ್ಠಾನ ದ ವರುಷದ ಹರುಷ ಪುನರೂರು ಸಂಭ್ರಮ - 2024 ಕಾರ್ಯಕ್ರಮವು ನಾಳೆ(ಜ.13) ಸಂಜೆ 4 ರಿಂದ ನೆರವೇರಲಿದೆ.
ಕಾರ್ಯಕ್ರಮವನ್ನು ಯಕ್ಷಗಾನ ಕವಿ, ಸಾಹಿತಿ, ರಂಗಚಿಂತಕ ಶ್ರೀಧರ ಡಿ.ಎಸ್ ಉದ್ಘಾಟಿಸಲಿದ್ದಾರೆ. ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಕ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣರು ಶುಭಾಶಂಸನೆ ಗೈಯಲಿದ್ದು, ಪುನರೂರು ಪ್ರತಿಷ್ಠಾನದ ಗೌರವಾಧ್ಯಕ್ಷ ಧರ್ಮದರ್ಶಿ ಡಾ ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸಲಿದ್ದಾರೆ. ಯುಗಪುರುಷ ಕಿನ್ನಿಗೋಳಿಯ ಪ್ರಧಾನ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪ, ಕಿನ್ನಿಗೋಳಿಯ ಶಿವಪ್ರಣಂ ಸ್ಕೂಲ್ ಆಫ್ ಡಾನ್ಸ್ ನ ವ್ಯವಸ್ಥಾಪಕ ರಿತೇಶ್ ಮೂಲ್ಕಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಪುನರೂರು ಶ್ರೀ ವಿಶ್ವನಾಥ ದೇವಸ್ಥಾನದ ಮೊಕ್ತೇಸರ ಪಟೇಲ್ ವಾಸುದೇವ ರಾವ್, ಪುನರೂರು ಪ್ರತಿಷ್ಠಾನದ ಗೌರವಾಧ್ಯಕ್ಷೆ ಎಚ್ ಕೆ ಉಷಾರಾಣಿ, ಪ್ರಧಾನ ಕಾರ್ಯದರ್ಶಿ ಶ್ರೇಯಾ ಪುನರೂರು, ಜನ ವಿಕಾಸ ಸಮಿತಿ ಮೂಲ್ಕಿಯ ಅಧ್ಯಕ್ಷೆ ಶೋಭಾ ರಾವ್ ಉಪಸ್ಥಿತರಿರುವರು.ಸಮಾರಂಭದಲ್ಲಿ ಪುನರೂರು ಪ್ರತಿಷ್ಠಾನದ ಆಶ್ರಯದಲ್ಲಿ ಜನ ವಿಕಾಸ ಸಮಿತಿ ಮೂಲ್ಕಿ ಇದರ ಸಹಕಾರದೊಂದಿಗೆ ಡಿಸೆಂಬರ್ 9 ರಂದು ಕಟೀಲು ಶ್ರೀ ಗೋಪಾಲಕೃಷ್ಣ ಆಸ್ರಣ್ಣ ಸಭಾ ಭವನದಲ್ಲಿ ಮೂಲ್ಕಿ ತಾಲೂಕಿನ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಆಯೋಜಿಸಿದ ಪ್ರತಿಭಾ ಸೌರಭ 2023ರ ಸ್ಪರ್ಧೆಯಲ್ಲಿ ಭಾಗವಹಿಸಿದ 405 ವಿದ್ಯಾರ್ಥಿಗಳಿಗೆ ಧನ್ಯತಾ ಪತ್ರ ಹಾಗೂ ಸ್ಪರ್ಧಾ ವಿಜೇತರಿಗೆ ಬಹುಮಾನ ಗಣ್ಯರ ಸಮ್ಮುಖದಲ್ಲಿ ವಿತರಿಸಲಾಗುವುದು.
ಸಭಾ ಕಾರ್ಯಕ್ರಮದ ನಂತರ ಉಪಹಾರದ ವ್ಯವಸ್ಥೆ ಇದೆ.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಅನ್ನಪೂರ್ಣ ರಿತೇಶ್ ನಿರ್ದೇಶಿಸಿರುವ ಕಿನ್ನಿಗೋಳಿಯ ಶಿವಪ್ರಣಂ ಸ್ಕೂಲ್ ಆಫ್ ಡಾನ್ಸ್ ನ ಸದಸ್ಯರಿಂದ ನಾಟ್ಯ ಯಕ್ಷ ವೈಭವ ಜರುಗಲಿದೆ.
ಕಳೆದ 7 ವರುಷಗಳಲ್ಲಿ ಈ ಕಾರ್ಯಕ್ರಮಕ್ಕೆ ಮೂಲ್ಕಿ ಕಿನ್ನಿಗೋಳಿ ಪರಿಸರದ ಹೆಚ್ಚಿನ ಗಣ್ಯರು, ಪ್ರೌಢ ಶಾಲೆಯ ವಿದ್ಯಾರ್ಥಿಗಳು ಶಿಕ್ಷಕರು, ಪೋಷಕರು ಹಾಗೂ ಕಲಾಭಿಮಾನಿಗಳು ಭಾಗವಹಿಸಿ ಯಶಸ್ವಿಗೊಳಿಸಿದ್ಧಾರೆ. ಈ ಬಾರಿಯೂ 1500 ಮಂದಿ ಭಾಗವಹಿಸುವ ನಿರೀಕ್ಷೆಯಲ್ಲಿದ್ದೇವೆ ಎಂದು ಪುನರೂರು ಪ್ರತಿಷ್ಠಾನದ ಅಧ್ಯಕ್ಷ ದೇವಪ್ರಸಾದ್ ಪುನರೂರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.