-->


ಶ್ರೀ ಕ್ಷೇತ್ರ ಮಂದಾರಬೈಲಿನ ವಾರ್ಷಿಕ ಉತ್ಸವ

ಶ್ರೀ ಕ್ಷೇತ್ರ ಮಂದಾರಬೈಲಿನ ವಾರ್ಷಿಕ ಉತ್ಸವ



ಮಂಗಳೂರು : ಮಂಗಳೂರು ಕೊಂಚಾಡಿಯ ಮಂದಾರಬೈಲಿನ ಶ್ರೀ ಕ್ಷೇತ್ರ ಮಂದಾರಬೈಲು ಇಲ್ಲಿ ಜ. 28ರಿಂದ ಫೆಬ್ರವರಿ 4ರವರೆಗೆ ಶ್ರೀ ರಕ್ತೇಶ್ವರಿ, ಶ್ರೀ ಮಂತ್ರದೇವತೆ ಮತ್ತು ಶ್ರೀ ಗುಳಿಗ ದೈವಗಳ ವರ್ಷಾವಧಿ ಕೋಲ ಬಲಿ ಸೇವೆ, ಧಾರ್ಮಿಕ ಕಾರ್ಯಕ್ರಮ, ವಿಶೇಷ ಅಷ್ಟನಾದ ತೊಟ್ಟಿಲ ಸೇವೆ, ದೀಪಾಲಂಕಾರ ಸೇವೆ ಮತ್ತು ನಾಗದೇವರಿಗೆ ಆಶ್ಲೇಷ ಬಲಿ ಸೇವೆ ನಡೆಯಲಿದೆ.

ಜ. 28ರಿಂದ ಬೆಳಿಗ್ಗೆ ತಾಯಿಗೆ ಪಂಚಾಮೃತಾಭಿಷೇಕ, ನವಕ ಕಲಶಾಭಿಷೇಕ, ತೋರಣ ಹಾಗೂ ಉಗ್ರಾಣ ಮುಹೂರ್ತ ನಡೆಯಲಿದೆ. ಜ. 29ರಂದು ಬೆಳಿಗ್ಗೆ 9:30ರಿಂದ ಶ್ರೀ ಕದ್ರಿಯಲ್ಲಿ ಮಂಜುನಾಥ ದೇವರಿಗೆ ಶತರುದ್ರಾಭಿಷೇಕ, ರಂಗಪೂಜೆ, ಬೆಳ್ಳಿ ರಥೋತ್ಸವ, ಜ. 30ರಂದು 8ರಿಂದ ನಾಗದೇವರಿಗೆ ತಂಬಿಲ ಸೇವೆ, ಆಶ್ಲೇಷ ಬಲಿ, ಮೃತ್ಯುಂಜಯ ಹೋಮ, ರಾತ್ರಿ 7ರಿಂದ ಮಂದಾರಬೈಲು ಶ್ರೀ ದುರ್ಗಾಪರಮೇಶ್ವರಿ ವೆಂಕಟರಮಣ ದೇವರಿಗೆ ರಂಗಪೂಜೆ, ಕಲ್ಲುರ್ಟಿ ದೈವಕ್ಕೆ ಅಗೇಲು ಸೇವೆ ನಡೆಯಲಿದೆ. ಜ. 31ರಂದು ಸಂಜೆ 6:30ರಿಂದ ತಾಯಿಗೆ ಅಷ್ಟನಾದ ದೊಂದಿಗೆ ವಿಶೇಷ ಉಯ್ಯಾಲೆ ಸೇವೆ ನಡೆಯಲಿದೆ.

ಜ. 1ರಂದು ಬೆಳಿಗ್ಗೆ 9:30ರಿಂದ ದರ್ಶನ ಸೇವೆ, ಸಂಜೆ 6:30ರಿಂದ ಶ್ರೀ ರಕ್ತೇಶ್ವರಿ, ಶ್ರೀ ಮಂತ್ರದೇವತೆ ಹಾಗೂ ಶ್ರೀ ಗುಳಿಗ ದೈವಗಳಿಗೆ ವಿಶೇಷ ದೀಪಾಲಂಕಾರ ಸೇವೆ, ಪಲ್ಲಕಿ ಬಲಿ, ಜ. 2ರಂದು ಬೆಳಿಗ್ಗೆ 9:30ರಿಂದ ತಾಯಿಗೆ ಹರಕೆ ರೂಪದ ಬೆಳ್ಳಿ ಬಂಗಾರ ಸಮರ್ಪಣೆ, ಸಂಜೆ 4:30ರಿಂದ ವಿವಿಧ ಭಜನಾ ತಂಡಗಳಿಂದ ಭಜನಾ ಸತ್ಸಂಗ, ಜ. 3ರಂದು ಬೆಳಿಗ್ಗೆ 8:30ರಿಂದ ಶ್ರೀ ಸತ್ಯನಾರಾಯಣ ಪೂಜೆ, 10:30ಕ್ಕೆ ಭಂಡಾರ ಏರುವುದು(ಧ್ವಜಾರೋಹಣ), ಪಲ್ಲಪೂಜೆ, ಸಂಜೆ 7:30ರಿಂದ ಶ್ರೀ ರಕ್ತೇಶ್ವರಿ, ಶ್ರೀ ಮಂತ್ರದೇವತೆ ದೈವಗಳಿಗೆ ಕೋಲ ಬಲಿ ಸೇವೆ, ದರ್ಶನ ಬಲಿ, ಪಲ್ಲಕಿ ಬಲಿ, ಬೆಳ್ಳಿ ರಥೋತ್ಸವ, ತುಲಾಭಾರ ಸೇವೆ, ಅಭಯಪ್ರದಾನ ಹಾಗೂ ಜ. 4ರಂದು ಸಂಜೆ 5:30ರಿಂದ ವರ್ಷಾವಧಿ ಅಗೆಲು ಸೇವೆ, ರಾತ್ರಿ 8ರಿಂದ ಶ್ರೀ ಗುಳಿಗ ದೈವದ ಕೋಲಬಲಿ ಸೇವೆ, ಅಭಯ ಪ್ರದಾನ, ಪ್ರಸಾದ ವಿತರಣೆ ನಡೆಯಲಿದೆ. ಈ ಎಲ್ಲ ದಿನ ಭಕ್ತಾದಿಗಳಿಗೆ ನಿರಂತರ ಅನ್ನಸಂತರ್ಪಣೆ, ಉಪಾಹಾರ, ಪಾನೀಯದ ವ್ಯವಸ್ಥೆ ಮಾಡಲಾಗಿದೆ ಎಂದು ಶ್ರೀ ಕ್ಷೇತ್ರದ ಪ್ರಕಟಣೆ ತಿಳಿಸಿದೆ.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

Advertise under the article