ಐಕಳ ಕಂಬಳೋತ್ಸವದ ಪೂರ್ವಭಾವಿಯಾಗಿ ಕುದಿ ಕಂಬಳ ಕಾರ್ಯಕ್ರಮ
Saturday, January 27, 2024
ಕಿನ್ನಿಗೋಳಿ :48 ನೇ ವರ್ಷದ ಐಕಳ ಬಾವ ಕಾಂತಾಬಾರೆ ಬೂದಾಬಾರೆ ಜೋಡುಕರೆ ಕಂಬಳೋತ್ಸವವು ಫೆ.3 ರಂದು ನಡೆಯಲಿದ್ದು,ಕಂಬಳೋತ್ಸವದ ಪೂರ್ವಭಾವಿಯಾಗಿ ಇಂದು ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಕುದಿ ಕಂಬಳ ಕಾರ್ಯಕ್ರಮವು ನಡೆಯಿತು. ಏಳಿಂಜೆ ಲಕ್ಷ್ಮೀಜನಾರ್ದನ ಮಹಾಗಣಪತಿ ದೇವಸ್ಥಾನದ ಅರ್ಚಕ ಗಣೇಶ್ ಭಟ್ ಹಾಗೂ ವರುಣ್ ಭಟ್ ರವರು ವಿವಿಧ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದರು.
ಕಂಬಳ ಸಮಿತಿ ಅಧ್ಯಕ್ಷ ಐಕಳ ಬಾವ ಡಾ. ದೇವಿ ಪ್ರಸಾದ್ ಶೆಟ್ಟಿ,ಗಣನಾಥ ಜೆ ಶೆಟ್ಟಿ,ರವಿಚಂದ್ರ ಶೆಟ್ಟಿ ಐಕಳ ಬಾವ,ಲೀಲಾಧರ ಶೆಟ್ಟಿ, ಸುಕುಮಾರ್ ಭಂಡಾರಿ, ಸಮಿತಿಯು ಪದಾಧಿಕಾರಿಗಳಾದ ಚಿತ್ತರಂಜನ್ ಭಂಡಾರಿ, ಪ್ರಕಾಶ್ ಶೆಟ್ಟಿ ಪಡುಹಿತ್ತು ದಯಾನಂದ ಶೆಟ್ಟಿ ಐಕಳ, ಸ್ವರಾಜ್ ಶೆಟ್ಟಿ, ದೇವಿ ಪ್ರಸಾದ್ ಶೆಟ್ಟಿ ಐಕಳ, ಅಮರನಾಥ ಶೆಟ್ಟಿ, ಜಯಪಾಲ ಶೆಟ್ಟಿ, ತಾರಾನಾಥ ಶೆಟ್ಟಿ ಹಾಗೂ ಮೊದಲಾದವರು ಉಪಸ್ಥಿತರಿದ್ದರು.