ಮಟ್ಟಿ ಕ್ಷೇತ್ರದ ಬ್ರಹ್ಮಕಲಶೋತ್ಸವ,ತಂಡಗಳಿಗೆ ಆಮಂತ್ರಣ ಪತ್ರ ಹಸ್ತಾಂತರ
Friday, January 19, 2024
ಕೈಕಂಬ:ಮಳಲಿ ಮಟ್ಟಿ ಜೊಗಿಮಠ ಶ್ರೀ ಕಾಲಭೈರವ ಮಂಜುನಾಥ ದೇವಸ್ಥಾನದಲ್ಲಿ ಫೆ.20 ರಿಂದ 26 ರವರೆಗೆ ಬ್ರಹ್ಮಕಲಶೋತ್ಸವವು ನಡೆಯಲಿದ್ದು, ಆಪ್ರಯುಕ್ತ ಶ್ರೀ ಕ್ಷೇತ್ರದಲ್ಲಿ ಗುರುವಾರದಂದು ಸಂಜೆ ನಡೆದ ಸಭೆಯಲ್ಲಿ ಬಡಗುಳಿಪಾಡಿ,ತೆಂಕುಳಿಪಾಡಿ ಹಾಗೂ ಮೊಗರು ಗ್ರಾಮಗಳಿಗೆ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರವನ್ನು ವಿತರಿಸಲು ನಿಯೋಜಿಸಿದ ತಂಡಗಳಿಗೆ ಆಮಂತ್ರಣ ಪತ್ರ ಹಾಗೂ ರಶೀದಿ ಪುಸ್ತಕವನ್ನು ಹಸ್ತಾಂತರ ಮಾಡಲಾಯಿತು.ಸಭೆಯಲ್ಲಿ ಆಡಳಿತ ಸಮಿತಿ ಸದಸ್ಯರು,ಜೀರ್ಣೋದ್ಧಾರ ಸಮಿತಿಯ ಸದಸ್ಯರು,ಬ್ರಹ್ಮಕಲಶೋತ್ಸವ ಸಮಿತಿ ಸದಸ್ಯರು, ಹಾಗೂ ಕ್ಷೇತ್ರದ ಭಕ್ತರು ಉಪಸ್ಥಿತರಿದ್ದರು.