ಕಟೀಲು ದೀಪೋತ್ಸವದಲ್ಲಿ ಶಾಸಕ ಉಮಾನಾಥ ಕೋಟ್ಯಾನ್ ಭಾಗಿ
Tuesday, January 23, 2024
ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಅಯೋಧ್ಯೆ ಶ್ರೀ ರಾಮ ಮಂದಿರದಲ್ಲಿ ಶ್ರೀ ರಾಮ ದೇವರ ಪ್ರಾಣ ಪ್ರತಿಷ್ಠೆ ಅಂಗವಾಗಿ ರಾತ್ರಿ ದೀಪೋತ್ಸವ ನಡೆಯಿತು, ದೇವಳದಲ್ಲಿ ಪ್ರಾರ್ಥನೆಗೈದು, ಶಂಖನಾದದೊಂದಿಗೆ ದೇವಸ್ಥಾನದಲ್ಲಿ ದೀಪಗಳನ್ನು ಹಚ್ಚಲಾಯಿತು, ನಂತರ ದೇವಳದ ರಥ ಬೀದಿಯಲ್ಲಿ ಸಾವಿರಾರು ದೀಪಗಳನ್ನು ಭಕ್ತರು ಬೆಳಗಿಸಿದರು. ದೇವಳದ ರಥಬೀದಿ ತುಂಭಾ ಹಲವು ಭಜನಾ ತಂಡಗಳ ನೂರಾರು ಸದಸ್ಯರು ಕುಣಿತ ಭಜನೆಯೊಂದಿಗೆ ದೀಪೋತ್ಸವವನ್ನು ಚಂದಗಾಣಿಸಿದರು.
ಶಾಸಕ ಉಮಾನಾಥ ಕೋಟ್ಯಾನ್, ಮಾಜಿ ಸಚಿವ ಅಭಯಚಂದ್ರ ಜೈನ್ ಮತ್ತು ದೇವಳದ ಮುಕ್ತೇಸರರು, ಆಡಳಿತ ಮಂಡಳಿ ಸದಸ್ಯರು ಉತ್ತರಾಭಿಮುಖವಾಗಿ ನಿಂದು ಅರತಿಯನ್ನು ಬೆಳಗಿದರು. ಒಂದು ವಿಶೇಷ ಕಾರ್ಯಕ್ರಮದಲ್ಲಿ ಭಕ್ತರು ಭಾಗವಹಿಸಿ ಸಂಭ್ರಮಿಸಿದರು.