ಮಳಲಿ ಮಟ್ಟಿ ಜೋಗಿ ಮಠ ಶ್ರೀಕಾಲಭೈರವ ಮಂಜುನಾಥ ದೇವಸ್ಥಾನದಲ್ಲಿ ಫೆ. 20- 26ರವರೆಗೆ ಬ್ರಹ್ಮ ಕಲಶ ಪುಣ್ಯೋತ್ಸವ, ಸಿದ್ಧತೆ ಬಗ್ಗೆ ಸಭೆ
Tuesday, January 16, 2024
ಕೈಕಂಬ :ಬ್ರಹ್ಮ ಕಲಶದ ಪುಣ್ಯ ಕಾರ್ಯದಲ್ಲಿ ನಾವೆಲ್ಲರೂ ಭಾಗಿಯಾಗುದರ ಜೊತೆಗೆ ತಮ್ಮೇಲರ ಸಹಕಾರವೂ ಅತ್ಯಗತ್ಯ ಎಂದು ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಕಿರಣ್ ಪಕ್ಕಲ ಪೆರ್ಮಂಕಿ ಹೇಳಿದರು.ಅವರು ಮಳಲಿ ಮಟ್ಟಿ ಜೋಗಿ ಮಠ ಶ್ರೀಕಾಲಭೈರವ ಮಂಜುನಾಥ ದೇವಸ್ಥಾನದಲ್ಲಿ ಫೆಬ್ರವರಿ 20 ರಿಂದ 26ರವರೆಗೆ ನಡೆಯಲಿರುವ ಬ್ರಹ್ಮ ಕಲಶ ಪುಣ್ಯೋತ್ಸವದ ಸಿದ್ಧತೆ ಬಗ್ಗೆ ಭಾನುವಾರದಂದು ಸಂಜೆ ಕ್ಷೇತ್ರದಲ್ಲಿ ನಡೆದ ಬ್ರಹ್ಮಕಲಶೋತ್ಸವದ ವಿವಿಧ ಉಪಸಮಿತಿಗಳ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು ದೇವಸ್ಥಾನದ ಆಡಳಿತ ಮೊಕ್ತೇಸರ ಗಂಗಾಧರ್ ಜೋಗಿ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು.ಬ್ರಹ್ಮ ಕಲಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಚಂದ್ರಹಾಸ್ ಶೆಟ್ಟಿ ನಾರಳ, ಕಾರ್ಯದರ್ಶಿ ಹರೀಶ್ ಮಟ್ಟಿ, ಕೋಶಾಧಿಕಾರಿ ಸೋಹನ್ ಅತಿಕಾರಿ, ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಶೇಖರ್ ಜೋಗಿ, ಗಂಜಿಮಠ ಪಂಚಾಯತ್ ಮಾಜಿ ಅಧ್ಯಕ್ಷ ನೋಣಯ್ಯ ಕೋಟ್ಯಾನ್,ಬ್ರಹ್ಮ ಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷ ಸತೀಶ್ ಜೋಗಿ ಮಾಲೆಮಾರ್, ಸೀತಾರಾಮ್ ಜೋಗಿ, ಕೇಶವ ಪೂಜಾರಿ, ಮಾಜಿ ಕಾರ್ಪೋರೇಟರ್ ರಾಜೇಶ್ ಕೊಂಚಾಡಿ, ಸುನೀಲ್ ಗಂಜಿಮಠ, ಚರಣ್ ಮತ್ತು ಆಡಳಿತ ಮಂಡಳಿಯ ಪ್ರಮುಖರು, ಜೀರ್ಣೋದ್ದಾರ ಸಮಿತಿಯ ಪದಾಧಿಕಾರಿಗಳು,ಬ್ರಹ್ಮಕಲಶೋತ್ಸವ ಸಮಿತಿಯ ಪದಾಧಿಕಾರಿಗಳು, ಭಕ್ತರು ಈ ವೇಳೆ ಉಪಸ್ಥಿತರಿದ್ದರು.ಸತೀಶ್ ಶೆಟ್ಟಿ ಕಂದಾವರ ಸ್ವಾಗತಿಸಿ, ನಿರೂಪಿಸಿದರು.