-->

ಪಂಜದಗುತ್ತು ಶಾಂತರಾಮ ಶೆಟ್ಟಿ ರವರ ಸ್ಮರಣಾ ಕಾರ್ಯಕ್ರಮ

ಪಂಜದಗುತ್ತು ಶಾಂತರಾಮ ಶೆಟ್ಟಿ ರವರ ಸ್ಮರಣಾ ಕಾರ್ಯಕ್ರಮ

ಹಳೆಯಂಗಡಿ:ದಿ.ಪಂಜದಗುತ್ತು ಶಾಂತಾರಾಮ ಶೆಟ್ಟಿಯವರು ಗ್ರಾಮದಲ್ಲಿನ ಬಡಮಕ್ಕಳ ವಿಧ್ಯಾಭ್ಯಾಸಕ್ಕೆ ಶಾಲೆಯನ್ನು ತೆರೆದು  ವಿದ್ಯಾದಾನದ ಮೂಲಕ  ಸಾವಿರಾರು ವಿದ್ಯಾರ್ಥಿಗಳಿಗೆ ನೆರವಾಗುದರ ಜೊತೆಗೆ  ವಿವಿಧ ಕ್ಷೇತ್ರಗಳಲ್ಲಿಯೂ ಅವರ ಸೇವೆ ಅಪಾರ ಎಂದು 
 ಸಾಹಿತಿ ಮತ್ತು ಸಮಾಜ ಸೇವಕಿ,ಹಳೆಯಂಗಡಿಯ
 ಎಚ್. ಶಕುಂತಲಾ ಭಟ್ ಹೇಳಿದರು.ಅವರಿಂದು ಹಳೆಯಂಗಡಿಯ ಪ್ರಿಯದರ್ಶಿನಿ ಕೊ-ಆಪರೇಟಿವ್ ಸೊಸೈಟಿ ಯ ಆಶ್ರಯದಲ್ಲಿ  ಸಂಘದ ಸಭಾಭವನದಲ್ಲಿ ನಡೆದ   ಸಂಘದ ಪ್ರೇರಣಾಶಕ್ತಿ, ಸಹಕಾರಿ ರಂಗದ ಸಾಧಕ ಪಂಜದಗುತ್ತು ಶಾಂತರಾಮ ಶೆಟ್ಟಿ ರವರ ಸ್ಮರಣಾ ಕಾರ್ಯಕ್ರಮದಲ್ಲಿ 
ಮುಖ್ಯ ಅತಿಥಿಗಳಾಗಿ  ಭಾಗವಹಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಎಚ್. ವಸಂತ್ ಬೆರ್ನಾಡ್ ವಹಿಸಿ ಮಾತನಾಡಿ ಸಂಘದ ಪ್ರೇರಣಾ ಶಕ್ತಿ ಪಂಜದಗತ್ತು ಶಾಂತರಾಮ ಶೆಟ್ಟರು ಸಹಕಾರಿ ಸಂಘದ ಭೀಷ್ಮರಾಗಿದ್ದರು. ಅವರ ಆದರ್ಶಗಳು ಸೊಸೈಟಿಗೆ ಮಾದರಿಯಾಗಿದ್ದು ಸಾಮಾಜಿಕ, ಶೈಕ್ಷಣಿಕ ,ಧಾರ್ಮಿಕ, ರಂಗಕ್ಕೆ ಅವರ ಕೊಡುಗೆ ಅನನ್ಯ ಅವರ ವ್ಯಕ್ತಿಯಲ್ಲ ಶಕ್ತಿಯಾಗಿದ್ದರು.
ಗ್ರಾಹಕರ ಬೆಂಬಲದಿಂದ  ಶೀಘ್ರದಲ್ಲಿ ಕಿನ್ನಿಗೋಳಿಯಲ್ಲಿ ಪ್ರಿಯದರ್ಶಿನಿ ಕೊ-ಆಪರೇಟಿವ್ ಸೊಸೈಟಿಯ ಇನ್ನೊಂದು ಶಾಖೆ ಪ್ರಾರಂಭಿಸಲಾಗುವುದು 
  ಎಂದರು.
ವೇದಿಕೆಯಲ್ಲಿ  ಕೆಮ್ರಾಲ್ ಗ್ರಾಮ ಪಂಚಾಯತ್  ಅಧ್ಯಕ್ಷ ಮಯ್ಯದ್ದಿ,ಸವಿತಾ ಶಾಂತಾರಾಮ ಶೆಟ್ಟಿ,
ಸಂಘದ ಉಪಾಧ್ಯಕ್ಷೆ ಪ್ರತಿಭಾ ಕುಳಾಯಿ,ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುದರ್ಶನ್ ಮತ್ತಿತರರು ಉಪಸ್ಥಿತರಿದ್ದರು.

Advertise in articles 1

advertising articles 2

Advertise under the article

ಕಾರ್ಯಕ್ರಮಗಳ ನೇರ ಪ್ರಸಾರ, ಚಿತ್ರೀಕರಣ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 8618554807