ಕಿಲ್ಪಾಡಿ : ವಾರ್ಷಿಕೋತ್ಸವ ಹಾಗೂ ಸಾಧಕರಿಗೆ ಗೌರವ ಕಾರ್ಯಕ್ರಮ
Tuesday, December 19, 2023
ಮುಲ್ಕಿ: ಕಿಲ್ಪಾಡಿ ಶ್ರೀ ಕುಮಾರಸ್ವಾಮಿ ಯುವಕ ಮಂಡಲ ಮತ್ತು ಮಹಿಳಾ ಮಂಡಲದ 33ನೇ ವಾರ್ಷಿಕೋತ್ಸವ ಹಾಗೂ ಸಾಧಕರಿಗೆ ಗೌರವ ಕಾರ್ಯಕ್ರಮ ಕಿಲ್ಪಾಡಿ ಕುಮಾರ ಮಂಗಿಲ ಶ್ರೀ ಸುಬ್ರಮಣ್ಯ ದೇವಸ್ಥಾನದ ವಠಾರದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಕಿಲ್ಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ವಿಕಾಸ್ ಶೆಟ್ಟಿ ಮಾತನಾಡಿ ಸೇವಾ ಸಂಸ್ಥೆಗಳ ಮೂಲಕ ಗ್ರಾಮೀಣ ಪ್ರದೇಶದಲ್ಲಿ ಮಕ್ಕಳಲ್ಲಿ ಶಿಸ್ತು ,ಸಂಸ್ಕಾರ ಮೂಡಿಸುವ ಕಾರ್ಯ ಅಭಿನಂದನೀಯ ಎಂದರು
ಮುಖ್ಯ ಅತಿಥಿಗಳಾಗಿ ಕಿಲ್ಪಾಡಿ ಕೋರ್ದಬ್ಬು ದೈವಸ್ಥಾನದ ವಸಂತ ಗುರಿಕಾರ ಮಾತನಾಡಿ
ಮಕ್ಕಳು ದುಶ್ಚಟಗಳಿಗೆ ಬಲಿಯಾಗದೆ ಜೀವನದಲ್ಲಿ ಉತ್ತಮ ಶಿಕ್ಷಣ ಪಡೆದು ಸಾಧಕರಾಗಿ ಎಂದರು
ವೇದಿಕೆಯಲ್ಲಿ ದೇವಸ್ಥಾನದ ಅನುವಂಶಿಕ ಮೊಕ್ತೇಸರ ಚಂದ್ರಶೇಖರ ಮಯ್ಯ,ಯುವಕ ಮಂಡಲದ ಗೌರವಾಧ್ಯಕ್ಷ ಗೋಪಿನಾಥ ಪಡಂಗ, ಅಧ್ಯಕ್ಷ ಸತೀಶ್ ಆಚಾರ್ಯ
ಮಹಿಳಾ ಮಂಡಲದ ಅಧ್ಯಕ್ಷೆ ಲೋಲಾಕ್ಷಿ, ರಾಜ ಭಟ್
ಕಾರ್ಯಕ್ರಮದಲ್ಲಿ ಹಿರಿಯ ಧಾರ್ಮಿಕ ಪುರೋಹಿತ ನಾರಾಯಣ ಭಟ್ ಕಿಲ್ಪಾಡಿ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಪರೆಂಕಿಲ ಶ್ರೀಪತಿ ಭಟ್ ರವರನ್ನು ಗೌರವಿಸಲಾಯಿತು ಹಾಗೂ ಕ್ರೀಡಾ ಕೂಟದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಲಕ್ಷ್ಮೀಕಾಂತ್ ರಾವ್ ನಿರೂಪಿಸಿದರು. ಶ್ರಾವ್ಯ ಧನ್ಯವಾದ ಅರ್ಪಿಸಿದರು ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.