ಕತೆ ಹಾಗೂ ಕವನ ಸ್ಪರ್ಧೆ
Tuesday, December 19, 2023
ಮೂಲ್ಕಿ ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ಡಿಸೆಂಬರ್ 27ರ ಬುಧವಾರ ಮೂಲ್ಕಿ ಸರಕಾರಿ ಪದವೀಪೂರ್ವ ಕಾಲೇಜಿನಲ್ಲಿ ನಡೆಯಲಿದ್ದು, ಮೂಲ್ಕಿ ತಾಲೂಕಿನ ಬರಹಗಾರರನ್ನು ಪ್ರೋತ್ಸಾಹಿಸುವುದಕ್ಕಾಗಿ ಕತೆ ಹಾಗೂ ಕವನ ಸ್ಪರ್ಧೆಯನ್ನು ಆಯೋಜಿಸಲಾಗಿದೆ. 16 ರಿಂದ 20 ಸಾಲುಗಳ ಕವನ ಹಾಗೂ ಎ 4 ಅಳತೆಯಲ್ಲಿ ಒಂದು ಪುಟ ಮೀರದ ಸಣ್ಣ ಕಥೆಯನ್ನು ತಾ. 24ರ ಒಳಗಾಗಿ ವಾಟ್ಸಪ್ ಸಂಖ್ಯೆ 9448355998 ಇದಕ್ಕೆ ಕಳುಹಿಸಬಹುದಾಗಿದೆ. ಆರಂಭದಲ್ಲಿ ಸಾಹಿತ್ಯ ಸಮ್ಮೇಳನ ಕಥೆ/ ಕವನ ಸ್ಪರ್ಧೆ ಎಂದು ಕೊನೆಯಲ್ಲಿ ಬರಹಗಾರರ ಹೆಸರು ವಿಳಾಸ ದೂರವಾಣಿ ಸಂಖ್ಯೆಯೊಂದಿಗೆ ಕಳುಹಿಸಬೇಕು. ವಿಜೇತರಿಗೆ ಸಮ್ಮೇಳನ ದಿನದಂದು ನಗದು ಬಹುಮಾನದೊಂದಿಗೆ ಪುರಸ್ಕರಿಸಲಾಗುವುದು.