-->

ಡಿ.23 -24 ಮಹಿಳೆಯರ ಕಿನ್ನಿಗೋಳಿ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟ

ಡಿ.23 -24 ಮಹಿಳೆಯರ ಕಿನ್ನಿಗೋಳಿ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟ

ಕಿನ್ನಿಗೋಳಿ: ಕ್ರಿಕೆಟ್ ಹಾಗೂ ಸಂಘಟನೆಯ ಮೂಲಕ ಮನೆಮಾತಾಗಿರುವ 25 ವರ್ಷಗಳಿಂದ ಜನಪ್ರಿಯತೆ ಗಳಿಸಿರುವ ಕೆ.ಎಫ್.ಸಿ ತಂಡದ ನೇತೃತ್ವದಲ್ಲಿ ಆಹ್ವಾನಿತ ಮಹಿಳಾ ತಂಡಗಳಿಗಾಗಿ ಲೀಗ್ ಮಾದರಿಯ ಕಿನ್ನಿಗೋಳಿ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟವು  ಡಿ. 23 ಹಾಗೂ 24ರಂದು ಐಕಳ ಪೊಂಪೈ ಕಾಲೇಜು ಮೈದಾನದಲ್ಲಿ ನಡೆಯಲಿದೆ ಎಂದು ಕೆ.ಎಫ್,ಸಿ ತಂಡದ ಗೌರವಾಧ್ಯಕ್ಷ ಈಶ್ವರ್ ಕಟೀಲು ಹೇಳಿದರು.ಅವರು ಸೋಮವಾರದಂದು ಸಂಜೆ  ಕಿನ್ನಿಗೋಳಿಯ ಹೊಟೇಲ್ ಸ್ವಾಗತ್ ಸಭಾಭವನದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಹೇಳಿದರು.ಪಂದ್ಯಾಟದಲ್ಲಿ 
ರಾಜ್ಯ ಮತ್ತು ಹೊರ ರಾಜ್ಯಗಳ 8 ಪ್ರತಿಷ್ಠಿತ ಮಹಿಳಾ ಕ್ರಿಕೆಟ್ ತಂಡಗಳು  ಪಾಲ್ಗೊಳ್ಳಲಿದೆ. ಯಾವುದೇ ಡೊನೇಶನ್, ಪ್ರವೇಶ ಶುಲ್ಕಗಳನ್ನು ಪಡೆಯದೇ ಕೇವಲ ಕ್ರಿಕೆಟನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಕಳೆದ ಮೂರು ವರ್ಷಗಳಲ್ಲಿ ಪುರುಷರ ಲೀಗ್ ಮಾದರಿಯ ಕ್ರಿಕೆಟ್ ಪಂದ್ಯಾಟಗಳನ್ನು ಅತ್ಯಂತ ಯಶಸ್ವಿಯಾಗಿ ನಡೆಸಿದ ಹಿನ್ನೆಲೆಯುಳ್ಳ ಕೆಎಫ್‌ ಸಿ ತಂಡದ ನೇತೃತ್ವದಲ್ಲಿ ಈ ಪಂದ್ಯಾಟ ನಡೆಯಲಿದೆ.
ಡಿ. 23 ರ ಬೆಳಿಗ್ಗೆ 8ಕ್ಕೆ ಮುಲ್ಕಿ-ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್‌ರವರ ಅಧ್ಯಕ್ಷತೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‌ನ ಮಾಜಿ ಉಪಾಧ್ಯಕ್ಷೆ ಕಸ್ತೂರಿ ಪಂಜರವರು ಟೂರ್ನಿಯನ್ನು  ಉದ್ಘಾಟಿಸಲಿದ್ದಾರೆ. ಐಕಳ ಪೊಂಪೈ ಕಾಲೇಜಿನ ಸಂಚಾಲಕ ರೆ.ಫಾ|ಒಸ್ವಾಲ್ಡ್ ಮೊಂತೆರೋ ಆಶೀರ್ವಚನ ನೀಡಲಿದ್ದು ವಿವಿಧ ಗಣ್ಯರು ಭಾಗವಹಿಸಲಿದ್ದಾರೆ.

ಡಿ. 24ರಂದು ಸಂಜೆ 5ಕ್ಕೆ ಸಮಾರೋಪ, ಹಾಗೂ ವಿಜೇತರಿಗೆ ಪ್ರಶಸ್ತಿ ವಿತರಣೆ ನಡೆಯಲಿದೆ.ಬೆಂಗಳೂರಿನ ಬಸವೇಶ್ವರ ನಗರದ ಕಾನೂನು ಕಾಲೇಜಿನ ಪ್ರಾಚಾರ್ಯೆ ದೇವಿಕಾ ಎಸ್.ಅಜಿಲ ಕವತ್ತಾರ್‌ರವರ ಅಧ್ಯಕ್ಷತೆಯಲ್ಲಿ ಗಣ್ಯರ ಉಪಸ್ಥತಿಯಲ್ಲಿ ಐಕಳ ಪೊಂಪೈ ಕಾಲೇಜಿನ ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಜೇಮ್ಸ್ ಒಲಿವರ್ ಸಹಿತ ಇತರ ಕ್ರೀಡಾ ಸಾಧಕರ ಸಮ್ಮಾನ ನಡೆಯಲಿದೆ ಎಂದರು.

ಪತ್ರಿಕಾ ಗೋಷ್ಠಿಯಲ್ಕಿ  ಕೆಎಫ್‌ಸಿಯ ಸಂಸ್ಥಾಪಕ ಅಧ್ಯಕ್ಷ ಗಣೇಶ್ ಎಸ್, ಹಾಲಿ ಅಧ್ಯಕ್ಷ ಅರುಣ್ ಕುಮಾರ್, ಗೌರವಾಧ್ಯಕ್ಷ  ಪ್ರಮೋದ್ ಕುಮಾರ್, ದಾಮೋದರ ಕೊಡೆತ್ತೂರು,ದೈಹಿಕ ಶಿಕ್ಷಕ ಸಂತೋಷ್ ,ಶ್ರೀಶ ಐಕಳ,ಮಮತಾ ಗಣೇಶ್  ಹಾಗೂ ಮೊದಲಾದವರು   ಉಪಸ್ಥಿತರಿದ್ದರು.

ಅರ್ಯನ್  ಪಿಂಕ್ ಪ್ಯಾಂಥರ್ಸ್ ಏಳಿಂಜೆ , ಬ್ರಹ್ಮಾವರದ ಎಸ್‌ಎಂಎಸ್ ಪ್ಯಾಂಥರ್ಸ್, ಎಕ್ಕಾರ್‌ನ ವಿಜಯಾ ಯುವ ಸಂಗಮ, ಮಂಗಳೂರಿನ ಸಂತ ಅಲೋಶಿಯಸ್ ಪದವಿಪೂರ್ವ ಕಾಲೇಜು, 11 ಸೈಕರ್ಸ್ ಬೆದ್ರ,ಆಂಜನೇಯ ಸಸಿಹಿತ್ಲು,ಮಂಗಳೂರಿನ ಸಂತ ಅಲೋಶಿಯಸ್ ಕ್ರಿಕೆಟ್  ಆಕಾಡೆಮಿ, ಪಂಚಿನಡ್ಕದ ಜ್ವಾಲಿ  ಫ್ರೆಂಡ್ಸ್ ಈ ಟೂರ್ನಿಯಲ್ಲಿ  ಪಾಲ್ಗೊಳ್ಳಲಿರುವ 8 ಪ್ರಬಲ ಮಹಿಳಾ ಕ್ರಿಕೆಟ್ ತಂಡಗಳಾಗಿವೆ.

Advertise in articles 1

advertising articles 2

Advertise under the article

ಕಾರ್ಯಕ್ರಮಗಳ ನೇರ ಪ್ರಸಾರ, ಚಿತ್ರೀಕರಣ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 8618554807