-->


ಕೊಲಕಾಡಿ ಶಾಲಾ ಹಳೆ ವಿದ್ಯಾರ್ಥಿ ಸಂಘದ 39ನೇ ವಾರ್ಷಿಕೋತ್ಸವ

ಕೊಲಕಾಡಿ ಶಾಲಾ ಹಳೆ ವಿದ್ಯಾರ್ಥಿ ಸಂಘದ 39ನೇ ವಾರ್ಷಿಕೋತ್ಸವ

ಮುಲ್ಕಿ: ಶಾಲೆಯ ಶೈಕ್ಷಣಿಕ ಚಟುವಟಿಕೆಗಳಿಗೆ ಹಳೆ ವಿದ್ಯಾರ್ಥಿಗಳ ಕೊಡುಗೆ ಅಪಾರವಾಗಿದ್ದು ನಿರಂತರವಾಗಿ ಹಳೆ ವಿದ್ಯಾರ್ಥಿ ಗಳು ಸಂಘಟನೆ ಮೂಲಕ ವಿದ್ಯಾರ್ಥಿಗಳ ಕಲಿಕೆಗೆ ಪ್ರೋತ್ಸಾಹ ನೀಡಿ ಕಲಿತ ಶಾಲೆಯ ಶಿಕ್ಷಕರ ಋಣ ತೀರಿಸುವ ಕಾರ್ಯ ಅಭಿನಂದನೀಯ ಎಂದು ಗುತ್ತಿನಾರ್ ಸುಧಾಕರ ಶೆಟ್ಟಿ ದೆಪ್ಪುಣಿಗುತ್ತುಹೇಳಿದರು.
ಅವರು ಕೊಲಕಾಡಿ ಶಾಲಾ ಹಳೆ ವಿದ್ಯಾರ್ಥಿ ಸಂಘದ 39ನೇ ವಾರ್ಷಿಕೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಉದ್ಯಮಿ ಜನಾನಂದ ಶೆಟ್ಟಿ ತಿಂಗೊಳೆಮನೆ, ನಿವೃತ್ತ ಬ್ಯಾಂಕ್ ಸಿಬ್ಬಂದಿ ವಿಜಯಕುಮಾರ್ ಶೆಟ್ಟಿ, ಕಿಲ್ಪಾಡಿ ಗ್ರಾ.ಪಂ ಸದಸ್ಯ ಗೋಪಿನಾಥ ಪಡಂಗ, ಉದ್ಯಮಿ ಅರುಣ್ ಶೆಟ್ಟಿ ಶಿಮಂತೂರು, ರವಿರಾಜ್ ಬಿ ಶೆಟ್ಟಿ ಜತ್ತಬೆಟ್ಟು,ಶಿಕ್ಷಕಿ ಸಂಧ್ಯಾ ವಿಶ್ವಾಸ್ ನಾಯಕ್ ಮಣಿಪಾಲ, ಶಾಲಾ ವಿದ್ಯಾ ಪ್ರಚಾರಣಿ ಸಂಘದ ಅಧ್ಯಕ್ಷ ರಂಗನಾಥ ಶೆಟ್ಟಿ, ಶಾಲಾ ಸಂಚಾಲಕ ಗಂಗಾಧರ ಶೆಟ್ಟಿ, ಸದಸ್ಯರಾದ ಗಿರಿಧರ್ ಕಾಮತ್ ಶ್ರೀಮಂತ ಕಾಮತ್, ದಾಕ್ಷಾಯಿಣಿ ಆಳ್ವ ಮತ್ತಿತರರು ಉಪಸ್ಥಿತರಿದ್ದರು
ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರಾದ ನಾಗಭೂಷಣ್ ರಾವ್, ಗ್ರೆಟ್ಟಾ ರೋಡ್ರಿಗಸ್, ನೋಣಯ್ಯ ಆರ್ ರವರಿಗೆ ಗುರುವಂದನೆ ಸಲ್ಲಿಸಲಾಯಿತು ಶಿಕ್ಷಕೇತರ ಸಿಬ್ಬಂದಿಗಳಾದ ರಾಮಣ್ಣ ನಾಯ್ಕ್, ಮನೋಹರ ಕಾಮತ್ ಮತ್ತು ವಾಮನ ರವರನ್ನು ಸನ್ಮಾನಿಸಲಾಯಿತು
ಹಳೆವಿಧ್ಯಾರ್ಥಿಗಳಿಗೆ ಸಂಘಟಿಸಿದ್ದ ಕ್ರೀಡೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು ಹಾಗೂ ಪ್ರತಿಭಾವಂತ ಶಾಲಾ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು, ಶಿಕ್ಷಕಿ ದೀಪಿಕಾ ಸ್ವಾಗತಿಸಿದರು, ಮನೋಹರ ಕೋಟ್ಯಾನ್ ಹಾಗೂ ಪೂಜಾ ನಿರೂಪಿಸಿದರು
ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.

Ads on article

Advertise in articles 1

advertising articles 2

Advertise under the article