-->


ಯೇಸು ಕ್ರಿಸ್ತನ ಆದರ್ಶಗಳನ್ನು ಪಾಲಿಸೋಣ  - ರೆ .ಅಮೃತ ರಾಜ್ ಕೋಡೆ

ಯೇಸು ಕ್ರಿಸ್ತನ ಆದರ್ಶಗಳನ್ನು ಪಾಲಿಸೋಣ - ರೆ .ಅಮೃತ ರಾಜ್ ಕೋಡೆ




ಹಳೆಯಂಗಡಿ:ಯೇಸು ಕ್ರಿಸ್ತರು ಶಾಂತಿಯ ದೂತರಾಗಿ ಈ ಲೋಕಕ್ಕೆ ಬಂದರು ತನ್ನ ಜೀವಿತಾವಧಿಯಲ್ಲಿ ಕ್ಷಮಿಸುವ ದೊಡ್ಡ ಗುಣ ದೊಂದಿಗೆ ಶಾಂತಿದೂತನಾಗಿ ಮೂಡಿಬಂದರು. ಇವರ ಆದರ್ಶಗಳನ್ನು ನಾವು ಪಾಲಿಸೋಣ ಎಂದು ಹಳೆಯಂಗಡಿ ಸಿಎಸ್ಐ ಅಮ್ಮನ್ ಮೆಮೋರಿಯಲ್ ಚರ್ಚಿನ ಸಭಾ ಪಾಲಕ ರೇ. ಅಮೃತ್ ರಾಜ್ ಕೋಡೆಯವರು ಆಶಯ ವ್ಯಕ್ತಪಡಿಸಿದರು.

 ಅವರು ಹಳೆಯಂಗಡಿ ಸಿಎಸ್ಐ ಅಮ್ಮನ್ ಮೆಮೋರಿಯಲ್ ಚರ್ಚಿನಲ್ಲಿ ನಡೆದ ಕ್ರಿಸ್ಮಸ್ ವಿಶೇಷ ಕಾರ್ಯಕ್ರಮದಲ್ಲಿ ಸಂದೇಶ ನೀಡಿದರು. ಮಣಿಪಾಲದ ಸಿಎಸ್ಐ ಇಂಗ್ಲಿಷ್ ಚರ್ಚಿನ ಸಭಾ ಪಾಲಕರಾದ ರೇ. ಜಾನ್ ಬೆನಾಡಿಕ್ ರವರು ಪ್ರಾರ್ಥನೆಯಲ್ಲಿ ಮುನ್ನಡಿಸಿದ್ದರು. 

 ಶಾಲಾ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು..  ಸಭಾ ಪಾಲನ ಸಮಿತಿಯ ಕಾರ್ಯದರ್ಶಿ ಲಾವಣ್ಯ ಕೋಟ್ಯಾನ್ ಸ್ವಾಗತಿಸಿ, ಕೋಶಾಧಿಕಾರಿ ಶರ್ಲಿ ಬಂಗೇರ ವಂದಿಸಿದರು .ಸಭಾ ಪರಿಪಾಲನಾ ಸಮಿತಿಯ ಸದಸ್ಯರುಗಳಾದ ಆಸ್ಟಿನ್ ಕರ್ಕಡ ,ವಸಂತ ಬರ್ನಾಡ್ , ಜೇಮ್ಸ್ ಕರ್ಕಡ, ಸಿಡ್ನಿ ಕರ್ಕಡ ವೇದಿಕೆಯಲ್ಲಿದ್ದರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

Advertise under the article