ಪ್ರಿಯದರ್ಶಿನಿ ಸಂಸ್ಥೆ ರಾಜ್ಯಾದ್ಯಾಂತ ಪಸರಿಸಲಿ - ಚಾಮರಾಜ ಒಡೆಯರ್
Saturday, December 23, 2023
ಹಳೆಯಂಗಡಿ:ಅತ್ಯಲ್ಪ ಅವಧಿಯಲ್ಲಿ ಉತ್ತಮ ಸಾಧನೆ ಮಾಡಿದ ಹಳೆಯಂಗಡಿಯ ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಶಾಖೆಗಳನ್ನು ತೆರೆಯುವ ಮಟ್ಟಿಗೆ
ಅಭಿವೃದ್ಧಿ ಹೊಂದಲಿ ಎಂದು ಮೈಸೂರಿನ ಶ್ರೀಮಾನ್ ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಹೇಳಿದರು.
ಅವರು ಹಳೆಯಂಗಡಿಯಲ್ಲಿ ಪ್ರಿಯದರ್ಶಿನಿ ಕೋಆಪರೇಟಿವ್ ಸೊಸೈಟಿ ಇದರ 2024ನೇ
ಸಾಲಿನ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಮಾತನಾಡಿದರು.
ನಿರ್ದೇಶಕ ಉಮಾನಾಥ್ ಜೆ. ಶೆಟ್ಟಿಗಾರ್, ಗೌತಮ್ ಜೈನ್ ರವರು ಸಂಘದ ಬೆಳವಣಿಗೆಯ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಮುಲ್ಕಿ ಸೀಮೆಯ ಅರಸರಾದ ಎಂ ದುಗ್ಗಣ್ಣ ಸಾವಂತರು, ಅಜಿಲ ಸೀಮೆಯ ಅಳದಂಗಡಿ ಅರಮನೆ ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ್ ಅಜಿಲರು, ಸೊಸೈಟಿಯ ಅಕ್ಷತಾ ಶೆಟ್ಟಿ ಮೋಹನ್ ದಾಸ್, ಅಭಿಷ್ಠಾ ಜೈನ್, ಲೋಲಾಕ್ಷಿ, ರಕ್ಷಿತಾ, ಪ್ರಕಾಶ್ ಶೆಟಿಗಾರ್, ಲತೇಶ್ ಸಸಿಹಿತ್ತು ನೀತು ನಿರಂಜಲ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಸಂಘದ ಅಧ್ಯಕ್ಷ ಎಚ್. ವಸಂತ್ ಬೆರ್ನಾರ್ಡ್ ಸ್ವಾಗತಿಸಿದರು.ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುದರ್ಶನ್ ಧನ್ಯವಾದವಿತ್ತರು.