-->

ಡಿ.25-29  ಎಕ್ಕಾರು ಶ್ರೀ ಕೊಡಮಣಿತ್ತಾಯ ದೈವಸ್ಥಾನದ ವರ್ಷಾವಧಿ ಜಾತ್ರೆ

ಡಿ.25-29 ಎಕ್ಕಾರು ಶ್ರೀ ಕೊಡಮಣಿತ್ತಾಯ ದೈವಸ್ಥಾನದ ವರ್ಷಾವಧಿ ಜಾತ್ರೆ

ಎಕ್ಕಾರು:ಎಕ್ಕಾರು ಶ್ರೀ ಕೊಡಮಣಿತ್ತಾಯ  ದೈವಸ್ಥಾನದ  ವರ್ಷಾವಧಿ ಜಾತ್ರಾ ಮಹೋತ್ಸವವು ಡಿ.25 ರಿಂದ ಡಿ.29 ರವರೆಗೆ ನಡೆಯಲಿದೆ.ಡಿ.24 ರ 
ಮುಕ್ಕೋಟಿ  ದ್ವಾದಶಿಯಂದು  ರಾತ್ರಿ ಪೂರ್ವದ ಕಟ್ಟು ಕಟ್ಟಳೆಯಂತೆ ತಾಂಗಡಿ ಬರ್ಕೆ ಕಾವರ ಮನೆಯಿಂದ ದೈವಗಳ ಭಂಡಾರ ಹೊರಟು ದೇರಿಂಜ ಗಿರಿಗೆ ಚಿತ್ತೈಸಿ, ಧ್ವಜಾರೋಹಣ ನೆರವೇರಲಿರುವುದು.

ಡಿ.25 ರಂದು ಬೆಳಿಗ್ಗೆ  10 ಕ್ಕೆ ಉಳ್ಳಾಯ ದೈವದ ನೇಮೋತ್ಸವ,ಅಂದು ರಾತ್ರಿ 9 ರಿಂದ ಶ್ರೀ ಕೊಡಮಣಿತ್ತಾಯ  ದೈವದ ನೇಮೋತ್ಸವ,ಡಿ.26 ರಂದು ರಾತ್ರಿ  9 ರಿಂದ ಶ್ರೀ ಕಾಂತೇರಿ ಜುಮಾದಿ ದೈವದ ನೇಮೋತ್ಸವ,ಡಿ. 27ರಂದು ರಾತ್ರಿ ಗಂಟೆ 9 ರಿಂದ ಶ್ರೀ ಜಾರಂದಾಯ ದೈವದ ನೇಮೋತ್ಸವ,ಡಿ.28 ರಂದು 
ರಾತ್ರಿ ಗಂಟೆ 9 ರಿಂದ ಶ್ರೀ ಸರಳ ಜುಮಾದಿ ದೈವದ ನೇಮೋತ್ಸವ,ಡಿ.29 ರಂದು 
ರಾತ್ರಿ ಗಂಟೆ 9 ರಿಂದ ಶ್ರೀ ಪಿಲಿ ಚಾಮುಂಡಿ ದೈವದ ನೇಮೋತ್ಸವ,ಡಿ.30 ರಂದು 
ಬೆಳಿಗ್ಗೆ ಗಂಟೆ 10.00ಕ್ಕೆ ಧ್ವಜ ಅವರೋಹಣಗೊಳ್ಳಲಿದೆ.ವರ್ಷಾವಧಿ ಜಾತ್ರಾ ಮಹೋತ್ಸವದ ಪ್ರತಿದಿನ ಮಧ್ಯಾಹ್ನ 1 ರಿಂದ ರಾತ್ರಿ ತನಕ ಅನ್ನಸಂತರ್ಪಣೆಯು ನಡೆಯಲಿದೆ.

Advertise in articles 1

advertising articles 2

Advertise under the article

ಕಾರ್ಯಕ್ರಮಗಳ ನೇರ ಪ್ರಸಾರ, ಚಿತ್ರೀಕರಣ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 8618554807