ಸುರತ್ಕಲ್ :ಹಿಮ್ಮುಖ ಚಲಿಸಿದ ಲಾರಿ,ಓರ್ವನಿಗೆ ಗಂಭೀರ ಗಾಯ,ಹಲವು ವಾಹನಗಳು ಜಖಂ
Wednesday, November 8, 2023
ಸುರತ್ಕಲ್: ಹಿಮ್ಮುಖವಾಗಿ ಚಲಿಸಿದ ನಿಲ್ಲಿಸಿದ್ದ ಲಾರಿ: ಓರ್ವನಿಗೆ ಗಂಭೀರ ಗಾಯ, ಹಲವು ಕಾರು, ಬೈಕ್ ಗಳು ಜಖಂ
ಸುರತ್ಕಲ್: ಲಾರಿಯೊಂದು ಹಿಮ್ಮುಖವಾಗಿ ಚಲಿಸಿದ ಪರಿಣಾಮ ಓರ್ವ ಗಂಭೀರ ಗಾಯಗೊಂಡು, ಕಾರುಗಳು , ದ್ವಿಚಕ್ರ ವಾಹನ ಹಾಗೂ ಬಟ್ಟೆ ಮಳಿಗೆಯೊಂದು ಜಖಂಗೊಂಡಿರುವ ಘಟನೆ ಸುರತ್ಕಲ್ ನಲ್ಲಿ ನಡೆದಿದೆ.
ಮಂಗಳೂರು ನೋಂದಣಿಯ ಸರಕು ಹೇರಿಕೊಂಡಿದ್ದ ಲಾರಿ ರೋರೋ ರೈಲಿನಲ್ಲಿ ತೆರಳುವ ಸಲುವಾಗಿ ಸುರತ್ಕಲ್ ಪೇಟಯಲ್ಲಿ ನಿಲ್ಲಿಸಲಾಗಿತ್ತು. ಚಾಲಕ ಲಾರಿಯನ್ನು ರಸ್ತೆಯ ಪಕ್ಕದಲ್ಲಿ ನಿಲ್ಲಿಸಿ ಹೊರಗೆ ತೆರಳಿದ್ದ ಎನ್ನಲಾಗಿದೆ.
ಈ ವೇಳೆ ಲಾರಿ ರೈಲ್ವೆ ನಿಲ್ದಾಣದ ರಸ್ತೆಯಲ್ಲಿರುವ ಭಾರತ್ ಪೆಟ್ರೋಲ್ ಬಂಕ್‌ಬಳಿ ನಿಲ್ಲಿಸಲಾಗಿದ್ದ ಲಾರಿ ಯುಟರ್ನ್ ನಲ್ಲಿ ಸಲೀಸಾಗಿ ಹಿಮ್ಮುಖವಾಗಿ ಚಲಿಸಿ ವಿರುದ್ಧ ಪಾಶ್ವದಲ್ಲಿರುವ ಮೂಡ ಮಾರುಕಟ್ಟೆಯ ಪಾರ್ಕಿಂಗ್ ನಲ್ಲಿ ನಿಲ್ಲಿಸಲಾಗಿದ್ದ ಕಾರುಗಳಿಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಕಾರಿನ ಬಳಿ ನಿಂತಿದ್ದ ಓರ್ವನಿಗೆ ಗಂಭೀರ ಗಾಯಗಳಾಗಿದ್ದು, ಆತನನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ಘಟನಾ ಸ್ಥಳಕ್ಕೆ ಸುರತ್ಕಲ್ ಸಂಚಾರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.