ಎಕ್ಕಾರು ಬಂಟರ ಸಂಘದ ವಾರ್ಷಿಕ ಕ್ರೀಡೋತ್ಸವ ಉದ್ಘಾಟನೆ
Wednesday, November 8, 2023
ಬಜಪೆ:ಬಂಟರ ಸಂಘ ಎಕ್ಕಾರು ಇದರ ವತಿಯಿಂದ ಬಂಟರಸಂಘದ ಮೈದಾನದಲ್ಲಿ ನಡೆದ ವಾರ್ಷಿಕ ಕ್ರೀಡೋತ್ಸವವನ್ನು ಎಕ್ಕಾರು ಶ್ರೀ ಕೊಡಮಣಿತ್ತಾಯ ದೈವಸ್ಥಾನದ ಆಡಳಿತ ಮೊಕ್ತೇಸರ ನಿತಿನ್ ಹೆಗ್ಡೆ ಕಾವರಮನೆ ಅವರು ಉದ್ಘಾಟಿಸಿದರು. ಎಕ್ಕಾರು ಬಂಟರ ಸಂಘದ ಅಧ್ಯಕ್ಷ ರತ್ನಾಕರ ಶೆಟ್ಟಿ ಅವರು ಅಧ್ಯಕ್ಷತೆಯನ್ನು ವಹಿಸಿದ್ದರು.
ಕ್ರೀಡಾ ಕಾರ್ಯದರ್ಶಿ ವಿಕ್ರಂ ಮಾಡ,ಉಪಾಧ್ಯಕ್ಷರುಗಳಾದ ಜಯರಾಮ್ ಶೆಟ್ಟಿ ಕಟೀಲ್, ಶಂಕರ್ ಶೆಟ್ಟಿ ಅಜಾರು, ಶ್ರೀಮತಿ ಶ್ವೇತಾ ಮಾಡ ಮತ್ತು ಶ್ರೀಮತಿ ದಯಮಾನಿ ಶೆಟ್ಟಿ ಉಪಸ್ಥಿತರಿದ್ದರು.
ಪ್ರದಾನ ಕಾರ್ಯದರ್ಶಿ ಸುರೇಶ್ ಶೆಟ್ಟಿ ಸ್ವಾಗತಿಸಿದರು.
ದಯಾನಂದ ಮಾಡ ಕಾರ್ಯಕ್ರಮ ನಿರೂಪಿದರು.ಕ್ರೀಡೋತ್ಸವದಲ್ಲಿ ಬಂಟರ ಸಂಘದ ಎಲ್ಲಾ ಸದಸ್ಯರುಗಳು ಭಾಗವಹಿಸಿದ್ದರು.