ಮಧ್ಯ ವಾಲ್ಮೀಕಿ ಆಶ್ರಮ ವಸತಿ ಶಾಲೆಯಲ್ಲಿ ಸಮ್ಮಿಲನ - ಸಹಭೋಜನ ಕಾರ್ಯಕ್ರಮ
Monday, November 27, 2023
ಕಾರ್ಯಕ್ರಮದಲ್ಲಿ ಮಂಗಳೂರು ತಾಲೂಕು ಪಂಚಾಯತ್ ನ ಮಾಜಿ ಉಪಾಧ್ಯಕ್ಷ ಸುರೇಶ್ ಶೆಟ್ಟಿ ಎಕ್ಕಾರು ಮಾತನಾಡಿ
ಸಾಮಾಜಿಕ ಕಳಕಳಿಯೊಂದಿಗೆ ಮಕ್ಕಳಲ್ಲಿ ಅನಾಥಪ್ರಜ್ಞೆ ಕಾಡದ ರೀತಿಯಲ್ಲಿ ಆತ್ಮಸ್ಥೈರ್ಯ ತುಂಬುವ ಕಾರ್ಯ ನಡೆದಾಗ ಮುಖ್ಯ ವಾಹಿನಿಯಲ್ಲಿ ಗುರುತಿಸಿಕೊಳ್ಳುವ ಪೂರಕ ವಾತಾವರಣ ವೃದ್ಧಿಯಾಗುತ್ತದೆ ಎಂದು ಹೇಳಿದರು.
ಅನಾಥ ಮಕ್ಕಳ ಬಾಲಕರ ಮತ್ತು ಬಾಲಕಿಯರ ಪ್ರತ್ಯೇಕ ವಸತಿನಿಲಯ ( ಹಾಸ್ಟೆಲ್ ) ಸಹಿತ 1ರಿಂದ 10ನೇ ತರಗತಿವರೆಗೆ ತರಗತಿಗಳಿರುವ ಕರ್ನಾಟಕ ರಾಜ್ಯದ ಏಕೈಕ ಆಶ್ರಮ ವಸತಿ ಶಾಲೆಯಾಗಿ ಗುರುತಿಸಿಕೊಂಡಿರುವ ಮಧ್ಯ ವಾಲ್ಮೀಕಿ ಆಶ್ರಮ ವಸತಿ ಶಾಲೆಯಲ್ಲಿ 219 ಮಕ್ಕಳಿದ್ದು ಆ ಪೈಕಿ 55 ಮಂದಿ ಬಾಲಕಿಯರಿದ್ದಾರೆ.ಶಾಲೆಯಲ್ಲಿ
ಅತ್ಯುತ್ತಮ ಗಾಯಕ ಪ್ರತಿಭೆಗಳಿವೆ , ಡ್ರಾಯಿಂಗ್ - ಪೇಂಟಿಂಗ್ ನಲ್ಲಿ ನಿಷ್ಣಾತರಿದ್ದಾರೆ , ಕ್ರೀಡೆಯಲ್ಲಿ ಪರಿಣತರಿದ್ದಾರೆ , ನೃತ್ಯ - ಭಜನೆಗಳಲ್ಲಿ ಮನ ಸೆಳೆಯುವ ಸಾಧನೆಯಿದೆ. ಪ್ರತಿನಿತ್ಯ ಸಾಯಂಕಾಲ ಹಾಗೂ ಬೆಳಿಗ್ಗೆ ಮಕ್ಕಳು ಸಾಮೂಹಿಕವಾಗಿ ಭಜನೆ ಮಾಡುತ್ತಾರೆ.
ಮಿಥುನ ಟಿ.ಎನ್
" ದಿನಚರಿ ವೇಳಾಪಟ್ಟಿ ಪ್ರಕಾರವೇ ನಿತ್ಯದ ಕಾರ್ಯಾಚರಣೆ ನಡೆಯುತ್ತದೆ. ಚಾರ್ಟ್ ಪ್ರಕಾರವೇ ವಾರದ ಎಲ್ಲಾ ದಿನಗಳ ಆಹಾರ - ತಿನಿಸುಗಳ ವ್ಯವಸ್ಥೆಯಾಗುತ್ತದೆ. ಶೈಕ್ಷಣಿಕವಾಗಿಯೂ ಇಲ್ಲಿನ ಮಕ್ಕಳು ಉತ್ತಮ ಫಲಿತಾಂಶ ಪಡೆದಿರುತ್ತಾರೆ.
ನಿಂಗರಾಜು
ಎಕ್ಕಾರು ದುರ್ಗಾ ಕ್ರಿಕೆಟ್ ಮತ್ತು ಕಲ್ಚರಲ್ ಕ್ಲಬ್ ನ ಗೌರವಾಧ್ಯಕ್ಷ ಪ್ರದೀಪ್ ಕುಮಾರ್ ಶೆಟ್ಟಿ ಅವರು ಮಹಾಪೋಷಕರಾಗಿ ಸಂಯೋಜಿಸಿದ ಸಮ್ಮಿಲನ - ಸಹಭೋಜನ ಕಾರ್ಯಕ್ರಮದಲ್ಲಿ ಕ್ಲಬ್ ನ ಪದಾಧಿಕಾರಿಗಳು , ಸದಸ್ಯರು , ವಸತಿ ಶಾಲೆಯ ವಿದ್ಯಾರ್ಥಿಗಳು ಬೋಧಕ - ಬೋಧಕೇತರ ಸಿಬ್ಬಂದಿ ಜತೆ ಸಹಭೋಜನದಲ್ಲಿ ಪಾಲ್ಗೊಂಡರು. ಈ ಹಿಂದೆ ಉದ್ಯಮಿ ಪ್ರದೀಪ್ ಕುಮಾರ್ ಶೆಟ್ಟಿ ಅವರು ವೈಯಕ್ತಿಕವಾಗಿ ನಾನಾ ರೀತಿಯ ಸೇವಾ ಚಟುವಟಿಕೆಗಳನ್ನು ನಡೆಸಿದ್ದರು.
ಎಕ್ಕಾರು ಗ್ರಾ.ಪಂ. ಅಧ್ಯಕ್ಷ ಪ್ರವೀಣ್ ಆಚಾರ್ಯ, ಸದಸ್ಯ ಸುದೀಪ್ ಅಮೀನ್ , ಡಿಸಿಸಿ ಕ್ಲಬ್ ನ ಪದಾಧಿಕಾರಿಗಳಾದ ಪ್ರಕಾಶ್ ಕುಕ್ಯಾನ್ , ಭಾರತಿ ಶೆಟ್ಟಿ , ದುರ್ಗಾ ಮಹಿಹಾ ಮಂಡಲದ ಅಧ್ಯಕ್ಷೆ ತೇಜಸ್ವಿನಿ ರಾವ್ , ವಿದ್ಯಾರ್ಥಿ ನಾಯಕ ಶ್ರೀಶೈಲ,ಜೀವಿತಾ ಶೆಟ್ಟಿ ಉಪಸ್ಥಿತರಿದ್ದರು.
ಹಿರಿಯ ಶಿಕ್ಷಕಿ ಸುನಂದಾ ಸ್ವಾಗತಿಸಿದರು. ಶಿಕ್ಷಕಿ ಗಾಯತ್ರಿ ಸತೀಶ್ ಕಾರ್ಯಕ್ರಮ ನಿರೂಪಿಸಿದರು.