ಮುಲ್ಕಿಸೀಮೆಯ ಅರಸು ಕಂಬಳಕ್ಕೆ ಮೈಸೂರು ಸಂಸ್ಥಾನದ ಒಡೆಯರ್
Sunday, November 26, 2023
ಮುಲ್ಕಿ: ಡಿಸೆಂಬರ್ 24ರಂದು ನಡೆಯಲಿರುವ ಮುಲ್ಕಿ ಸೀಮೆಯ ಅರಸು ಕಂಬಳಕ್ಕೆ ಮೈಸೂರು ಸಂಸ್ಥಾನದ ಯದುವೀರ್ ಕೃಷ್ಣ ದತ್ತ ಚಾಮರಾಜ ಒಡೆಯರ್ ಆಗಮಿಸಲಿದ್ದಾರೆ ಎಂದು ಮುಲ್ಕಿ ಸೀಮೆಯ ಅರಸರಾದ ದುಗ್ಗಣ್ಣ ಸಾವಂತರು ಹಾಗೂ ಮುಲ್ಕಿ ಅರಮನೆ ವೆಲ್ಫೇರ್ ಟ್ರಸ್ಟ್ ನ ನಿರ್ದೇಶಕ ಎಂ. ಗೌತಮ್ ಜೈನ್ ಜಂಟಿ ಹೇಳಿಕೆಯಲ್ಲಿ ಮಾಧ್ಯಮಕ್ಕೆ ತಿಳಿಸಿದ್ದಾರೆ
ಅವರು ಮಾತನಾಡಿ ಡಿಸೆಂಬರ್ 24ರಂದು ಬೆಳಿಗ್ಗೆ ವಿವಿಧ ವಾದ್ಯ ಘೋಷಗಳೊಂದಿಗೆ ಮೈಸೂರು ಸಂಸ್ಥಾನದ ಯದುವೀರ್ ಕೃಷ್ಣ ದತ್ತ ಚಾಮರಾಜ ಒಡೆಯರ್ ರವರನ್ನು ಮುಲ್ಕಿ ಅರಮನೆಗೆ ಭವ್ಯ ಮೆರವಣಿಗೆ ಮೂಲಕ ಸ್ವಾಗತಿಸಲಾಗುವುದು ಬಳಿಕ ಒಡೆಯರ್ ರವರಿಗೆ ಮುಲ್ಕಿ ಸೀಮೆಯ ಒಂಬತ್ತು ಮಾಗಣೆಯ ವತಿಯಿಂದ ಗೌರವಾರ್ಪಣೆ ನಡೆಯಲಿದೆ
ಇದೇ ಸಂದರ್ಭದಲ್ಲಿ ಅವರು ಮುಲ್ಕಿ ಸೀಮೆ ಐತಿಹಾಸ ಪ್ರಸಿದ್ಧ ಅರಸು ಕಂಬಳವನ್ನು ವೀಕ್ಷಣೆ ಗೈಯಲಿದ್ದು ಬಳಿಕ ಮುಲ್ಕಿ ಅರಮನೆ ವೆಲ್ಫೇರ್ ಟ್ರಸ್ಟ್ ನ ವತಿಯಿಂದ ನಡೆಯುವ ಸಾಧಕರ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು.