ಮುಲ್ಕಿಯಲ್ಲಿ ಸಾಧಕರಿಗೆ ಸಮ್ಮಾನ,ನಾಟಕ ಪ್ರದರ್ಶನ
Wednesday, November 29, 2023
ಮುಲ್ಕಿ:ಮುಲ್ಕಿ ರಂಗ ಕಲಾವಿದರು,ಯಕ್ಷಗಾನ ಕಲಾವಿದರಿಗೆ ನಿರಂತರ ಆಸರೆಯಾಗುವ ಪ್ರದೇಶವಾಗಿದ್ದು ಇಲ್ಲಿ ಕಲಾವಿದರು ಹಾಗೂ ಸಾಧಕರಿಗೆ ಅರ್ಹವಾಗಿಯೇ ಗೌರವ ಸಂದಾಯವಾಗುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಮಾಜಿ ರಾಜ್ಯಾಧ್ಯಕ್ಷ ಡಾ.ಹರಿಕೃಷ್ಣ ಪುನರೂರು ಹೇಳಿದರು.ಅವರು ಮಂಗಳವಾರ ಮುಲ್ಕಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಳದ ಆವರಣದಲ್ಲಿ ಕಿನ್ನಿಗೋಳಿ ವಿಜಯಾ ಕಲಾವಿದರ ಅಭಿಮಾನಿ ಬಳಗದ ವತಿಯಿಂದ ನಡೆದ ತುಳು ನಾಟಕ ಪ್ರದರ್ಶನದ ಸಂದರ್ಭ ಕರ್ನಾಟಕ ರಾಜ್ಯೋತ್ಸವ ಪುರಸ್ಕೃತ ಚಂದ್ರಶೇಖರ ಸುವರ್ಣ ಹಾಗೂ ಸಮಾಜ ಸೇವಕ ಬಡಗಹಿತ್ಲು ಕಮಲಾಕ್ಷರ ಸಮ್ಮಾನದ ಆಧ್ಯಕ್ಷತೆ ವಹಿಸಿ ಮಾತನಾಡಿದರು.ಕಿನ್ನಿಗೋಳಿ ಯುಗಪುರುಷದ ಸಂಪಾದಕ ಭುವನಾಭಿರಾಮ ಉಡುಪ,ಮುಲ್ಕಿ ಬಂಟರ ಸಂಘದ ಅಧ್ಯಕ್ಷ ಅಶೋಕ್ ಶೆಟ್ಟಿ,ಯುವ ನಾಯಕ ಸುನಿಲ್ ಆಳ್ವ,ನಾಗೇಶ್ ಬಪ್ಪನಾಡು,ನಾಟಕ ನಿರ್ದೇಶಕ ಜಗದೀಶ್ ಶೆಟ್ಟಿ ಕೆಂಚನಕೆರೆ,ವಿಜಯಾ ಕಲಾವಿದರ ಸಂಚಾಲಕ ಸಾಯಿನಾಥ್ ಶೆಟ್ಟಿ,ವಿಜಯಾ ಕಲಾವಿದರ ಅಭಿಮಾನಿ ಬಳಗದ ರತ್ನಾಕರ ಶೆಟ್ಟಿ ಮತ್ತಿತರರಿದ್ದರು.ವಿಜಯಾ ಕಲಾವಿದರ ಅಧ್ಯಕ್ಷ ಶರತ್ ಶೆಟ್ಟಿ ನಿರೂಪಿಸಿದ ಕಾರ್ಯಕ್ರಮದಲ್ಲಿ ಪ್ರಕಾಶ್ ವಂದಿಸಿದರು.ಬಳಿಕ ವಿಜಯ ಕಲಾವಿದರಿಂದ ಹರೀಶ್ ಪಡುಬಿದ್ರೆಯವರ ಜಗದೀಶ್ ಶೆಟ್ಟಿ ಕೆಂಚನಕೆರೆಯವರ ನಿರ್ದೇಶನದ ಪಿರಾವುಡು ಒರಿ ಉಲ್ಲೆ ತುಳು ನಾಟಕ ಪ್ರದರ್ಶನ ಗೊಂಡಿತು.