ಪಕ್ಷಿಕೆರೆಯ ಕೊರ್ದಬ್ಬು ದೈವಸ್ಥಾನದ ಕೊಡಿಯಡಿಗೆ ಶಿಲಾನ್ಯಾಸ ಕಾರ್ಯಕ್ರಮ
Saturday, November 4, 2023
ಪಕ್ಷಿಕೆರೆ : ಪಕ್ಷಿಕೆರೆಯ ಕೊರ್ದಬ್ಬು ದೈವಸ್ಥಾನದಲ್ಲಿ ಕೊಡಿಯಡಿಗೆ ಶಿಲಾನ್ಯಾಸ ಕಾರ್ಯಕ್ರಮವು ವಿದ್ವಾನ್ ರಮೇಶ್ ಕಚ್ಚೂರು, ಗುರಿಕಾರ ಸತೀಶ್ ಬಿ ಅಮೀನ್ ಅವರ ಪೌರೊಹಿತ್ವದಲ್ಲಿ ಶುಕ್ರವಾರದಂದು ನೆರವೇರಿತು.
ಈ ಸಂದರ್ಭ ಸುರಗಿರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಸೀತಾರಾಮ ಶೆಟ್ಟಿ, ಕೆಮ್ರಾಲ್ ಗ್ರಾಮ ಪಂಚಾಯತ್ ಅಧ್ಯಕ್ಷ ಮಯ್ಯದ್ದಿ, ದೈವಸ್ಥಾನದ ಗೌರವಾಧ್ಯಕ್ಷ ಬಾಲಾದಿತ್ಯ ಆಳ್ವ, ಅಧ್ಯಕ್ಷ ಶ್ರೀಧರ, ಜಯರಾಮ್ ಆಚಾರ್ಯ, ಪಿಸಿಎ ಬ್ಯಾಂಕ್ ನಿರ್ದೇಶಕರಾದ ರಾಜೇಶ್ ದಾಸ್, ಗೀತಾ ರಾಮ್ ದಾಸ್, ಉದ್ಯಮಿ ಧನಂಜಯ ಶೆಟ್ಟಿಗಾರ ಸಾಗರಿಕ, ಕುಂಭಾಭಿಷೇಕ ಸಮಿತಿ ಅಧ್ಯಕ್ಷ ಸಂತೋಷ್ ಶೆಟ್ಟಿ, ತಿಮ್ಮಪ್ಪ ಕೋಡಿಕಲ್ ದಾಮೋದರ ಭಂಡಾರಿ,ಧನು ಅಂಚನ್ ಮತ್ತಿತರರು ಉಪಸ್ಥಿತರಿದ್ದರು.