-->

ಮನಸ್ಸಿದ್ದಲ್ಲಿ ಎನೂ  ಬೇಕಾದರೂ ಸಾಧಿಸಲು ಸಾಧ್ಯ - ಡಾ.ಹರಿಕೃಷ್ಣ ಪುನರೂರು

ಮನಸ್ಸಿದ್ದಲ್ಲಿ ಎನೂ ಬೇಕಾದರೂ ಸಾಧಿಸಲು ಸಾಧ್ಯ - ಡಾ.ಹರಿಕೃಷ್ಣ ಪುನರೂರುಮೂಲ್ಕಿ:ಅಂಗವಿಕಲತೆ ಸಾಧನೆಗೆ ಅಡ್ಡಿ ಮಾಡುವುದಿಲ್ಲ, ಮನಸ್ಸಿದ್ದರೆ ಏನು ಬೇಕಾದರೂ ಸಾಧಿಸಬಹುದು. ಛಲವೊಂದಿದ್ದರೆ ಸಾಕು ಅಂಗವಿಕಲತೆ ಮೆಟ್ಟಿ ನಿಂತು ಸುಂದರವಾದ ಬದುಕು ಕಟ್ಟಿಕೊಳ್ಳುತ್ತಾರೆ , ಸಣ್ಣತನದಿಂದಲೇ ಎಲ್ಲರಂತೆ ಸಮಾಜದಲ್ಲಿ ತಲೆಯೆತ್ತಿ ನಿಲ್ಲಬೇಕೆಂಬ ಆಚಲ ನಿಲುವು ಮೈಗೂಡಿಸಿಕೊಂಡು ಸಾಧನೆ ಮಾಡಿದ ಜಗದೀಶ್ ಪೂಜಾರಿ ಎಲ್ಲರಿಗೂ ಉದಾಹರಣೆ ಎಂದು ರಾಜ್ಯ ಕನ್ನಡ ಸಾಹಿತ್ಯ ಪರಿಷತ್ ನ ಮಾಜಿ ಅಧ್ಯಕ್ಷ  ಧರ್ಮದರ್ಶಿ ಡಾ ಹರಿಕೃಷ್ಣ ಪುನರೂರು ಹೇಳಿದರು.
ಅವರು  ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ಪೈರ್ ಹಾಗೂ ಶ್ರೀ ಶಾರದಾ ಸೆಂಟ್ರಲ್ ಸ್ಕೂಲ್ ಶಿಮಂತೂರು ಇವರುಗಳ ಜಂಟಿ ಆಶ್ರಯದಲ್ಲಿ ನಡೆದ ಕರ್ನಾಟಕ ರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ಪೈರ್ ನ  ಅಧ್ಯಕ್ಷ ಲ. ಸುಧೀರ್ ಬಾಳಿಗ ಮಾತನಾಡಿ   ವಿಕಲಚೇತನರಲ್ಲೂ ಉತ್ತಮ ಪ್ರತಿಭೆ ಇದೆ. ಸಾಮಾನ್ಯರಿಗಿಂತ ಅವರಲ್ಲಿ ಸಾಧಿಸಬೇಕೆಂಬ ದುಡಿತವಿರುತ್ತದೆ.ಅಂತಹವರಿಗೆ ಹೆಚ್ಚಿನ ರೀತಿ ಸಹಾಯ, ಪ್ರೋತ್ಸಾಹದ ಅವಶ್ಯಕತೆ ಇದೆ ಎಂದು ತಿಳಿಸಿದರು. 
ಈ ಸಂದರ್ಭದಲ್ಲಿ ಮಿಸ್ಟರ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದ ಮಂಗಳೂರಿನ ಅಡ್ಯಾರ್ ಪದವು ನಿವಾಸಿ ಜಗದೀಶ್ ಪೂಜಾರಿ ಅವರನ್ನು  ಸನ್ಮಾನಿಸಲಾಯಿತು.  ಶಾಲಾ ವಿದ್ಯಾರ್ಥಿಗಳು ರಾಜ್ಯೋತ್ಸವದ ಅಂಗವಾಗಿ ಹುಯಿಲಗೋಳ ನಾರಾಯಣ ರಾಯರ ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು, ಕುವೆಂಪು ವಿರಚಿತ ಎಲ್ಲಾದರೂ ಇರು ಎಂತಾದರು ಇರು, ದ. ರಾ. ಬೇಂದ್ರೆ ಅವರ ಒಂದೇ ಒಂದೇ ಕರ್ನಾಟಕ ಒಂದೇ, ಸಿದ್ದಯ್ಯ ಪುರಾಣಿಕ ಅವರ ಹೊತ್ತಿತೋ ಹೊತ್ತಿತು ಕನ್ನಡ ದೀಪ, ಚನ್ನವೀರ ಕಣವಿ ಅವರ ಹೆಸರಾಯಿತು ಕರ್ನಾಟಕ 5 ಹಾಡುಗಳನ್ನು ಹಾಡಿದರು.
ಯುಗಪುರುಷದ ಸಂಪಾದಕ ಭುವನಾಭಿರಾಮ ಉಡುಪ, ಶಾಲಾ ಸಂಚಾಲಕ ದೇವಪ್ರಸಾದ್ ಪುನರೂರು ಉಪಸ್ಥಿತರಿದ್ದರು.

ಶಾಲಾ ಪ್ರಾಂಶುಪಾಲ ಜಿತೇಂದ್ರ ವಿ ರಾವ್ ಸ್ವಾಗತಿಸಿದರು. ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ಪೈರ್ ನ  ಸ್ಥಾಪಕ ಅಧ್ಯಕ್ಷ ಲ. ವೆಂಕಟೇಶ ಹೆಬ್ಬಾರ್ ವಂದಿಸಿದರು. ಸಹ ಶಿಕ್ಷಕಿ ದೀಪಿಕಾ ನಿರೂಪಿಸಿದರು.

Advertise in articles 1

advertising articles 2

Advertise under the article

ಕಾರ್ಯಕ್ರಮಗಳ ನೇರ ಪ್ರಸಾರ, ಚಿತ್ರೀಕರಣ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 8618554807