ಕಿನ್ನಿಗೋಳಿಯಲ್ಲಿ ಗೂಡುದೀಪ ಸ್ಪರ್ಧೆ- ಬಹುಮಾನ ವಿತರಣೆ
Monday, November 13, 2023
ಕಿನ್ನಿಗೋಳಿ:ಕಿನ್ನಿಗೋಳಿಯ ಯುಗಪುರುಷದ ನೇತೃತ್ವದಲ್ಲಿ ಭ್ರಾಮರೀ ಮಹಿಳಾ ಸಮಾಜ (ರಿ.) ಮೆನ್ನಬೆಟ್ಟು - ಕಿನ್ನಿಗೋಳಿ, ಲಯನ್ಸ್ ಹಾಗೂ ಲಿಯೋ ಕ್ಲಬ್ ಕಿನ್ನಿಗೋಳಿ, ರೋಟರಿ ಕ್ಲಬ್ ಕಿನ್ನಿಗೋಳಿ, ಇನ್ನರ್‌ವೀಲ್ ಕ್ಲಬ್ ಕಿನ್ನಿಗೋಳಿ, ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘ (ರಿ.) ಕಿನ್ನಿಗೋಳಿ, ಯಕ್ಷಲಹರಿ (ರಿ.) ಕಿನ್ನಿಗೋಳಿ, ಸೌತ್ ಕೆನರಾ ಫೋಟೋಗ್ರಾಫರ್‍ಸ್ ಅಸೋಸಿಯೇಶನ್ ಮೂಲ್ಕಿ ವಲಯ, ಕರ್ನಾಟಕ ಸ್ಟೇಟ್ ಟೈಲರ್‍ಸ್ ಅಸೋಸಿಯೇಶನ್ ಕಿನ್ನಿಗೋಳಿ ವಲಯ, ಲಯನ್ಸ್ ಕ್ಲಬ್ ಬಪ್ಪನಾಡು ಇನ್‌ಸ್ಪಾಯರ್, ಸಾರ್ವಜನಿಕ ಶ್ರೀ ಗಣೇಶೋತ್ಸವ ಸುವರ್ಣೋತ್ಸವ ಸಮಿತಿ ಕಿನ್ನಿಗೋಳಿ ಹಾಗೂ ವಿಜಯಾ ಕಲಾವಿದರು ಕಿನ್ನಿಗೋಳಿ ಸಂಸ್ಥೆಗಳ ಆಶ್ರಯದಲ್ಲಿ ದೀಪಾವಳಿ ಪ್ರಯುಕ್ತ ಗೂಡುದೀಪ ಸ್ಪರ್ಧೆ-2023 ನವೆಂಬರ್ 12ರಂದು ಕಿನ್ನಿಗೋಳಿಯ ಯುಗಪುರುಷ ಸಭಾಭವನದಲ್ಲಿ ಜರಗಿತು. ವಿಜೇತರಿಗೆ ಪ್ರಶಸ್ತಿ ವಿತರಿಸಿದ ಯುಗಪುರುಷದ ಪ್ರಧಾನ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪರು ಮಾತನಾಡಿ ದೀಪಾವಳಿಯಂತಹ ಹಬ್ಬಗಳು ನಮ್ಮ ನಾಡಿನ ಸಂಪ್ರದಾಯ ಹಾಗೂ ಆಚರಣೆಗಳನ್ನು ಬಿಂಬಿಸುವ ಹಬ್ಬಗಳಾಗಿದ್ದು, ಗೂಡುದೀಪ ಸ್ಪರ್ಧೆ ಈ ಆಚರಣೆಗಳಿಗೆ ಪೂರಕವಾಗಿದೆ ಎಂದರು. ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಡಾ. ಹರಿಕೃಷ್ಣ ಪುನರೂರು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಕಿನ್ನಿಗೋಳಿ ಲಯನ್ಸ್ ಕ್ಲಬ್ಬಿನ ಅಧ್ಯಕ್ಷೆ ಲ| ಹಿಲ್ಡಾ ಡಿಸೋಜ, ಲಿಯೋ ಕ್ಲಬ್ಬಿನ ಸುದೀಪ್ ಡಿಸೋಜ, ರೋಟರಿ ಅಧ್ಯಕ್ಷ ತ್ಯಾಗರಾಜ ಆಚಾರ್ಯ, ಲಕ್ಷಣ ಬಿ.ಬಿ., ಕೆ.ಬಿ.ಸುರೇಶ್, ಇನ್ನರ್‌ವೀಲ್ ಅಧ್ಯಕ್ಷೆ ಸವಿತಾ ಶೆಟ್ಟಿ, ವಿಜಯಾಕಲಾವಿದರು ಸಂಸ್ಥೆಯ ಅಧ್ಯಕ್ಷ ಶರತ್ ಶೆಟ್ಟಿ, ಯಕ್ಷಲಹರಿಯ ಅಧ್ಯಕ್ಷ ರಘುನಾಥ ಕಾಮತ್, ಕರ್ನಾಟಕ ಸ್ಟೇಟ್ ಟೈಲರ್‍ಸ್ ಅಸೋಸೊಯೇಶನ್ ಕಿನ್ನಿಗೋಳಿ ವಲಯದ ಅಧ್ಯಕ್ಷ ವಸಂತ್, ಶಂಕರ ಡಿ. ಕೋಟ್ಯಾನ್, ಸೌತ್ ಕೆನರಾ ಫೋಟೋಗ್ರಾಫರ್‍ಸ್ ಅಸೋಸಿಯೇಶನ್ ಮೂಲ್ಕಿ ವಲಯ ದೇವದಾಸ್ ಶೆಟ್ಟಿಗಾರ್, ರಮೇಶ್, ಹರೀಶ್, ಲಯನ್ಸ್ ಕ್ಲಬ್ ಬಪ್ಪನಾಡು ಇನ್‌ಸ್ಪಾಯರ್ ಇದರ ಅಧ್ಯಕ್ಷ ವೆಂಕಟೇಶ ಹೆಬ್ಬಾರ್, ಸುಧೀರ್ ಬಾಳಿಗ, ಪ್ರತಿಭಾ ಹೆಬ್ಬಾರ್, , ಸಾರ್ವಜನಿಕ ಶ್ರೀ ಗಣೇಶೋತ್ಸವ ಸುವರ್ಣೋತ್ಸವ ಸಮಿತಿಯ ಅಧ್ಯಕ್ಷ ಕುಶಲ ಅಂಚನ್, ಸುಮಿತ್‌ಕುಮಾರ್, ರಾಮಣ್ಣ ಕುಲಾಲ್, ಭ್ರಾಮರೀ ಮಹಿಳಾ ಸಮಾಜ (ರಿ.) ಇದರ ಅಧ್ಯಕ್ಷೆ ಅನುಷಾ ಕರ್ಕೇರ, ಅಮಿತಾ, ರೇವತಿ, ಮಮತಾ, ಸವಿತಾ, ವಿನಯ, ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘ ಇದರ ಪೃಥ್ವಿರಾಜ ಆಚಾರ್ಯ, ಜಗದೀಶ ಆಚಾರ್ಯ ಮುಂತಾದವರು ಉಪಸ್ಥಿತರಿದ್ದರು. ಆಧುನಿಕ ವಿಭಾಗದಲ್ಲಿ ಪ್ರಥಮ : ರಾಜೇಶ್ ಚಿಲಿಂಬಿ, ದ್ವಿತೀಯ : ದಯಾನಂದ ಮತ್ತು ತಂಡ ಬಂಟ್ವಾಳ, ತೃತೀಯ : ದೀಪಕ್ ಚೇಳಾರು ಇವರು ಬಹುಮಾನ ಪಡೆದರು. ಹಾಗೆಯೇ ಸಾಂಪ್ರದಾಯಿಕ ವಿಭಾಗದಲ್ಲಿ ಪ್ರಥಮ : ದಾಮೋದರ ಕಟೀಲು, ದ್ವಿತೀಯ : ಉಮೇಶ್ ಕಾವೂರು, ತೃತೀಯ : ದಕ್ಷತ್ ಕಟೀಲು ಇವರುಗಳು ಬಹುಮಾನ ಪಡೆದರು.