ಮನುಷ್ಯನ ಸಾಧನೆಗೆ ಏಕಾಗ್ರತೆ ಬೇಕು-ವೆಂಕಟರಮಣ ಆಸ್ರಣ್ಣ
Monday, November 13, 2023
ಕಿನ್ನಿಗೋಳಿ : ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದ ಕಂಕನಾಡಿ ಫಾದರ್ ಮುಲ್ಲರ್ ಸೇವಾ ಸಂಸ್ಥೆಯ ಮನೋವೈದ್ಯ ಸಮಾಲೋಚಕರಾದ ಎಸ್.ಕೆ. ಶ್ರೀಪತಿ ಭಟ್ ಪರೆಂಕಿಲ ರವರಿಗೆ ಶಿಮಂತೂರು ಬ್ರಾಹ್ಮಣ ಬಂಧು ಮಿತ್ರರಿಂದ ಹುಟ್ಟೂರ ಸನ್ಮಾನ ಕಾರ್ಯಕ್ರಮ ಶಿಮಂತೂರು ಶ್ರೀ ಆದಿ ಜನಾರ್ಧನ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ದೀಪ ಬೆಳಗಿಸಿ ಚಾಲನೆ ನೀಡಿ ಕಟೀಲು ಕ್ಷೇತ್ರದ ಅರ್ಚಕರಾದ ವೆಂಕಟರಮಣ ಆಸ್ರಣ್ಣ ರವರು ಆಶೀರ್ವಚನ ನೀಡಿ ಮನುಷ್ಯನ ಸಾಧನೆಗೆ ಏಕಾಗ್ರತೆ ಬೇಕು, ಪ್ರಶಸ್ತಿಯಿಂದ ಜವಾಬ್ದಾರಿ ಹೆಚ್ಚಿದ್ದು ಸಾಧನೆ ನಿರಂತರವಾಗಿ ನಡೆಯಲಿ ಎಂದರು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ವಹಿಸಿ ಮಾತನಾಡಿ ಉತ್ತಮ ಸೇವಾ ಮನೋಭಾವದ ಮೂಲಕ ಸಮಾಜ ಸೇವಕರಾಗಿ ಎಲೆ ಮರೆಯ ಕಾಯಿಯಂತೆ ಮಾಡಿದ ಸಾಧನೆ ಅಭಿನಂದನೀಯ ಎಂದರು
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ವೇ.ಮೂ. ವಾದಿರಾಜ ಉಪಾಧ್ಯಾಯ ಕೊಲಕಾಡಿ,ಯುಗಪುರುಷದ ಸಂಪಾದಕ ಭುವನಾಭಿರಾಮ ಉಡುಪ, ಸೋಮೇಶ್ವರ ಪಶ್ಚಿಮ್ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಹಾಗೂ ನಿರ್ದೇಶಕ ರೋಹಿತ್ ಸ್ಯಾಂಕ್ಟುಶ್, ವಿಷ್ಣುಮೂರ್ತಿ ಭಟ್, ಶ್ರೀಕಾಂತ್ ಭಟ್ ಕೊಲಕಾಡಿ, ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ಪೈರ್ ನ ವೆಂಕಟೇಶ ಹೆಬ್ಬಾರ್, ರಾಘವೇಂದ್ರ ಭಟ್ ಕೊಲ್ಲೂರು ಪದವು, ಜಿತೇಂದ್ರ ವಿ.ರಾವ್, ಪ್ರಾಣೇಶ್ ಭಟ್, ಶಶಿಕಲಾ ಉಪಾಧ್ಯಾಯ, ಶ್ರೀವತ್ಸ, ಶಿಕ್ಷಕಿ ಕಾಮೇಶ್ವರಿ ಭಟ್, ಅಶ್ವಿನ್ ಭಟ್ ಶಿಮಂತೂರು, ಗುರುರಾಜ್ ಭಟ್ ದೇಂದಡ್ಕ ಮತ್ತಿತರರು ಉಪಸ್ಥಿತರಿದ್ದರು.
ಬಳಿಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಎಸ್.ಕೆ. ಶ್ರೀಪತಿ ಭಟ್ ಪರೆಂಕಿಲ ರವರನ್ನು ಪತ್ನಿ ದೀಪ ಎಸ್ ಭಟ್ ಸಮೇತ ಶಿಮಂತೂರು ಬ್ರಾಹ್ಮಣ ಬಂಧು ಮಿತ್ರರ ವತಿಯಿಂದ ಗೌರವಿಸಲಾಯಿತು.