ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಆಧ್ಯಾತ್ಮ ಶಿಕ್ಷಣವು ಅಗತ್ಯ - ಮಿಥುನ್ ರೈ
Thursday, November 9, 2023
ಹಳೆಯಂಗಡಿ:ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಆಧ್ಯಾತ್ಮಿಕ ಶಿಕ್ಷಣವನ್ನು ಪಡೆಯುವುದು ಅತೀ ಅಗತ್ಯ. ಇದರೊಂದಿಗೆ ಸಂಸ್ಕಾರ, ಆಚಾರ-ವಿಚಾರಗಳನ್ನು ದೇವಾಲಯದ ಸಂಬಂಧ ಪಟ್ಟ ವಿಭಾಗವು ನಡೆಸಿದರೆ ವಿದ್ಯಾರ್ಥಿಗಳ ಜೀವನಕ್ಕೆ ಅನುಕೂಲವಾಗುತ್ತದೆ ಇಂತಹ ಕಾರ್ಯಕ್ರಮವನ್ನು ಸಿಎಸ್ಐ ಜಿಲ್ಲಾ ಸಮಿತಿಯ ಹಳೆಯಂಗಡಿ ಸಿಎಸ್ಐ ಅಮ್ಮನ್ ಮೆಮೋರಿಯಲ್ ಚರ್ಚಿನ ಅತಿಥೇಯದಲ್ಲಿ ನಡೆಸಿರುವುದು ಅಭಿನಂದನೀಯ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಅವರು ಹೇಳಿದರು.
ಅವರು ಸಿಎಸ್ಐ ಕೆಎಸ್‌ಡಿ ದಕ್ಷಿಣ ಕನ್ನಡ ಪ್ರದೇಶ ಪರಿಷತ್ತು ಮತ್ತು ಸಿ ಎಸ್ ಐ ಅಮ್ಮನ್ ಮೆಮೋರಿಯಲ್ ಚರ್ಚ್ ಹಳೆಯಂಗಡಿ ಇದರ ಆಶ್ರಯದಲ್ಲಿ ನಡೆದ ಜಾಗತಿಕ ಭಾನುವಾರ ಶಾಲಾ ದಿನಾಚರಣಿ ಮಕ್ಕಳ ಹಬ್ಬದ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಣೆ ಮಾಡಿ ಮಾತನಾಡಿದರು.
ದಕ್ಷಿಣ ಕನ್ನಡ ಪ್ರಾದೇಶಿಕ ಪರಿಷತ್ ನ ಅಧ್ಯಕ್ಷ ರೆವೆ.ವಿಲಿಯಂ ಬಿ. ಕುಂದರ್ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು
ಸಿಎಸ್ಐ ಕೆ ಎಸ್ ಡಿ ಯ ಖಜಾಂಚಿ ವಿನ್ಸೆಂಟ್ ಪಾಲನ್ನ ಮಾತನಾಡಿ ಈ ವರ್ಷದ ಜಾಗತಿಕ ಭಾನುವಾರ ಶಾಲಾ ದಿನಾಚರಣೆಯನ್ನು ಮೌಲ್ಯಯುತವಾಗಿ ನಡೆಸಿದ್ದು, ಡಯಾಸಿಸ್ ನ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ರೆ. ಜಾರ್ಜ್ ಎ. ಬೆರ್ನಾರ್ಡ್ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ನ ಟ್ರಸ್ಟಿ ಶ್ರೀಮತಿ ಜಾಯ್ಸ್ ವಿನಯ ಬಂಗೇರ ಭಾಗವಹಿಸಿದ್ದರು.
ವೇದಿಕೆಯಲ್ಲಿ ದಕ್ಷಿಣ ಕನ್ನಡ ಪ್ರದೇಶ ಪರಿಷತ್ ನ ಉಪಾಧ್ಯಕ್ಷರ ರೆವೆ. ಗ್ಯಾಬ್ರಿಯಲ್ ರೋನಿತ್, ಕಾರ್ಯದರ್ಶಿ ಜಯವಂತಿ ಪೌಲ್, ಖಜಾಂಚಿ ಕೌಶಿಕ್ ಅಮ್ಮನ್ನ, ಹಳೆಯಂಗಡಿ ಸಭಾ ಪಾಲಕ ರೆವೆ. ಅಮೃತ್ ರಾಜ್ ಖೋಡೆ, ಪಣಂಬೂರು ಸಭಾ ಪಾಲಕ ರೆವೆ. ಸಂಧ್ಯಾ ಖೋಡೆ, ಸಭಾ ಪರಿಪಾಲನ ಸಮಿತಿಯ ಆಸ್ಟಿನ್ ಕರ್ಕಡ, ವಸಂತ್ ಬೆರ್ನಾರ್ಡ್, ಲಾವಣ್ಯ ಕೋಟ್ಯಾನ್, ಶರ್ಲಿ ಬಂಗೇರ, ಜೇಮ್ಸ್ ಕರ್ಕಡ, ಸಿಡ್ನಿ ಕರ್ಕಡ ಹಾಗೂ ಮೊದಲಾದವರು ಉಪಸ್ಥಿತರಿದ್ದರು.
ಈ ಸಂದರ್ಭ ಪ್ರದೇಶ ಪರಿಷತ್ ನ ಕಾರ್ಯದರ್ಶಿ ಶ್ರೀಮತಿ ಜಯವಂತಿ ಪೌಲ್ ರವರನ್ನು ಸನ್ಮಾನಿಸಲಾಯಿತು. ಶ್ರೀಮತಿ ಶರ್ಲಿ ಬೆರ್ನಾರ್ಡ್ ಕಾರ್ಯಕ್ರಮ ನಿರೂಪಿಸಿದರು.