-->


ಹೊಸ ಅಂಗಣ ಮಾಸ ಪತ್ರಿಕೆಯ  ತಿಂಗಳ ಬೆಳಕು ಕಾರ್ಯಕ್ರಮ

ಹೊಸ ಅಂಗಣ ಮಾಸ ಪತ್ರಿಕೆಯ ತಿಂಗಳ ಬೆಳಕು ಕಾರ್ಯಕ್ರಮ

ಮೂಲ್ಕಿ:   ಸೇವಾ ಅವಧಿಯಲ್ಲಿ  ಕರ್ತವ್ಯ ನಿಷ್ಠೆ ,ಪ್ರಾಮಾಣಿಕತೆ ಮೂಲಕ ಜನಪರ ಕೆಲಸ ಮಾಡಿದರೆ ನಿವೃತ್ತಿಯ ಬಳಿಕವು ಸಮಾಜ ಗುರುತಿಸಿ ಗೌರವಿಸುತ್ತದೆಯೆಂದು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಹೇಳಿದರು.ಮೂಲ್ಕಿಯ ಪುನರೂರು ಟೂರಿಸ್ಟ್  ಹೋಂ ನ ಸಭಾಂಗಣದಲ್ಲಿ ಜರಗಿದ ಹೊಸ ಅಂಗಣ ಮಾಸ ಪತ್ರಿಕೆಯ  ತಿಂಗಳ ಬೆಳಕು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.ಕಾರ್ಯಕ್ರಮದಲ್ಲಿ  ನಿವೃತ್ತ ಪೊಲೀಸ್ ಅಧಿಕಾರಿ ಮೂಲ್ಕಿಯ ಕಕ್ವದ  ಕೆ ಎನ್ ಕೋಟ್ಯಾನ್ ರವರನ್ನು ಪತ್ನಿ ಸಮೇತ ಗೌರವಿಸಲಾಯಿತು. ಬಂಕಿ ನಾಯಕರು ಹಳೆಯಂಗಡಿ , ಅತಿಕಾರಿಬೆಟ್ಟು ಗ್ರಾ.ಪಂ.ಉಪಾಧ್ಯಕ್ಷ ಮನೋಹರ ಕೋಟ್ಯಾನ್ ಉದ್ಯಮಿ ವಾಸು ಪೂಜಾರಿ ಚಿತ್ರಾಪು,ಉದ್ಯಮಿ ಶಶಿಧರ್ ಕೋಟ್ಯಾನ್,ಜಾನ್ ಕ್ವಾಡ್ರಸ್,ಮೂಲ್ಕಿ ಬಿಲ್ಲವ ಸಂಘದ ಅಧ್ಯಕ್ಷ ಪ್ರಕಾಶ್ ಸುವರ್ಣ,  ಸಾಮಾಜಿಕ ಕಾರ್ಯಕರ್ತ ಸಾಧು ಅಂಚನ್ ,ಹೊಸ ಅಂಗಣ ಮಾಸ ಪತ್ರಿಕೆಯ ಸಂಪಾದಕ ಡಾ. ಹರಿಶ್ಚಂದ್ರ ಸಾಲ್ಯಾನ್, ಅಬ್ದುಲ್ ರಜಾಕ್,ವಿಜಯ ಕುಮಾರ್‌ ಕುಬೆವೂರು ಮತ್ತಿತರರು ಉಪಸ್ಥಿತರಿದ್ದರು.ಡಾ| ಹರೀಶ್ಚಂದ್ರ ಪಿ ಸಾಲ್ಯಾನ್‌ ಸ್ವಾಗತಿಸಿದರು,ರವಿಚಂದ್ರ ನಿರೂಪಿಸಿದರು.ವಾಮನ್‌ ಕೋಟ್ಯಾನ್‌ ನಡಿಕುದ್ರು ವಂದಿಸಿದರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

Advertise under the article