ಪಕ್ಷಿಕೆರೆ ಸಂತ ಜೂದರ ಯಾತ್ರಿಕ ಕೇಂದ್ರ ಹಾಗೂ ಸಂತ ಜೂದರ ಪುಣ್ಯ ಕ್ಷೇತ್ರದ ವಾರ್ಷಿಕ ಮಹೋತ್ಸವದ ಪ್ರಯುಕ್ತ ಸಾಮೂಹಿಕ ವಿವಾಹ ಕಾರ್ಯಕ್ರಮ
Friday, October 27, 2023
ಕಿನ್ನಿಗೋಳಿ : ಪಕ್ಷಿಕೆರೆ ಸಂತ ಜೂದರ ಯಾತ್ರಿಕ ಕೇಂದ್ರ ಹಾಗೂ ಸಂತ ಜೂದರ ಪುಣ್ಯ ಕ್ಷೇತ್ರದ ವಾರ್ಷಿಕ ಮಹೋತ್ಸವದ ಪ್ರಯುಕ್ತ ಚರ್ಚ್ ಸಭಾಭವನದಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಿತು
ಮಂಗಳೂರು ಧರ್ಮ ಪ್ರಾಂತ್ಯದ ನಿವೃತ್ತ ಬಿಷಪ್ ಎಲೋಶಿಯಸ್ ಪಾವ್ಲ್ ಡಿಸೋಜಾ ಮಾತನಾಡಿ ಪುಣ್ಯಕ್ಷೇತ್ರದಲ್ಲಿ ಸಾಮಾಜಿಕ ಕಾರ್ಯಗಳು ನಿರಂತರವಾಗಿ ನಡೆಯಲಿ ಇಂದು ಆಶೀರ್ವಚನ ನೀಡಿದರು.
ಪಕ್ಷಿಕೆರೆ ಸಂತ ಜೂದರ ಪುಣ್ಯಕ್ಷೇತ್ರದ ಧರ್ಮಗುರು ಮೆಲ್ವಿನ್ ನೊರೋಹ್ನ , ಫಾ.ರಾಬರ್ಟ್ ಪಕ್ಷಿಕೆರೆ
ಪಾಲನಾ ಮಂಡಳಿಯ ಉಪಾಧ್ಯಕ್ಷೆ ಶೈಲಾ ಡಿಸೋಜ, ಕಾರ್ಯದರ್ಶಿ ಸುನಿಲ್ ಮೊರಾಸ್, ಚರ್ಚ್ ನ ಗೌರವ ಸದಸ್ಯ ಹಾಗೂ ಕೆಮ್ರಾಲ್ ಗ್ರಾಪಂ ಸದಸ್ಯ ಜಾಕ್ಸನ್ ಸಲ್ದಾನ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮೂವರು ನೂತನ ಜೋಡಿಗಳಾದ ಡೆನ್ನಿಸ್ ಕುಟಿನೊ ಮಂಜೇಶ್ವರ-ಆರ್ಸಿಲ್ಲ ಅಶ್ವಿತಾ ಪಾಯಸ್ ಮಡಂತ್ಯಾರ್; ಮ್ಯಾಕ್ಸಿಮ್ ಮೊರಾಸ್ ಸಿದ್ದಕಟ್ಟೆ-ಪ್ರೀತಿಕ ಪಿಂಟೊ ವಿಜಯಡ್ಕ; ರೋಷನ್ ಫೆರ್ನಾಂಡಿಸ್ ಕಾಟಿಪಳ್ಳ- ಅವಿಲ್ಲಾ ಜ್ಯೋತಿ ವರೆದ ಪಾವೂರು ರವರು ಗುರು ಹಿರಿಯರು ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ಹಸೆ ಮಣೆ ಏರಿದರು. ರಾಬರ್ಟ್ ಡಿಸೋಜಾ ಪಕ್ಷಿಕೆರೆ ನಿರೂಪಿಸಿದರು