-->

ಕೇಶ ಸೌಂದರ್ಯ ಕಲಿಕೆಗೆ ವೃತ್ತಿಪರ ಕಾಲೇಜುಹೇರ್ ಡಿಸೈನರ್ಸ್ ಶಿಕ್ಷಣ ಕ್ಷೇತ್ರದಲ್ಲಿ `ಶಿವಾಸ್' ಕ್ರಾಂತಿ

ಕೇಶ ಸೌಂದರ್ಯ ಕಲಿಕೆಗೆ ವೃತ್ತಿಪರ ಕಾಲೇಜುಹೇರ್ ಡಿಸೈನರ್ಸ್ ಶಿಕ್ಷಣ ಕ್ಷೇತ್ರದಲ್ಲಿ `ಶಿವಾಸ್' ಕ್ರಾಂತಿ


ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದ ತಾಣವಾಗಿ ಬೆಳೆದಿರುವ ದೇರಳಕಟ್ಟೆಯಲ್ಲಿ ವ್ಯಕ್ತಿ ಸೌಂದರ್ಯ ವೃದ್ಧಿಸುವ `ಸೆಲೂನ್' ಮೂಲಕ ಜಗತ್ಪ್ರಸಿದ್ಧರಾಗಿರುವ ಮುಂಬೈಯ ಗುಲಾಬಿ ಕೃಷ್ಣ ಭಂಡಾರಿ ಚಾರಿಟೇಬಲ್ ಟ್ರಸ್ಟ್(ರಿ) ಮಂಗಳೂರು ವಿಶ್ವವಿದ್ಯಾನಿಲಯದ ಮಾನ್ಯತೆಯೊಂದಿಗೆ ಶಿವಾಸ್ ಅಂತಾರಾಷ್ಟ್ರೀಯ ಇನ್‍ಸ್ಟಿಟ್ಯೂಟ್ ಆಫ್ ಪ್ರೊಫೆಷನಲ್ ಇನ್ನೋವೇಶನ್ಸ್(ಎಸ್‍ಐಐಪಿಐ) `ಶಿವಾಸ್ ಕಾಲೇಜು' ಆರಂಭಿಸಿರುವುದಲ್ಲದೆ, ಶಿವಾಸ್ ಹೇರ್ ಡಿಸೈನರ್ಸ್ ಪ್ರೈವೇಟ್ ಲಿಮಿಟೆಡ್ ಮೂಲಕ ಶಿವಾಸ್ ಸಿಗ್ನೇಚರ್ ಫ್ಯಾಮಿಲಿ ಸೆಲೂನ್' ಆರಂಭಿಸಿದೆ.

ರಾಜ್ಯದಲ್ಲೇ ಪ್ರಪ್ರಥಮ ಎಂಬಂತೆ ವಿಶ್ವವಿದ್ಯಾನಿಲಯವೊಂದರ ಮಾನ್ಯತೆ ಪಡೆದಿರುವ ಹೇರ್ ಡಿಸೈನರ್ಸ್ ಸರ್ಟಿಫಿಕೇಟ್ ಕೋರ್ಸ್ ಮತ್ತು ಡಿಪ್ಲೋಮಾ ತರಗತಿ ಇದಾಗಿದೆ. ದೇರಳಕಟ್ಟೆಯ ಪ್ಲಾಮಾ ನೆಸ್ಟ್ ಅಪಾರ್ಟ್‍ಮೆಂಟ್‍ನ ವಿಶಾಲ ಸ್ಥಳಾವಕಾಶದ ತಳಮಹಡಿಯಲ್ಲಿ ಅ. 26ರಂದು ಉದ್ಘಾಟನೆಗೊಂಡಿದೆ. ಮುಂಬೈಯಲ್ಲಿ ಬಾಲಿವುಡ್ ನಟ-ನಟಿಯರು, ಕ್ರೀಡಾಳುಗಳು, ವಿವಿಧ ಕ್ಷೇತ್ರಗಳ ಸ್ಟಾರ್‍ಗಳ ಸಹಿತ ಘಟಾನುಘಟಿ ತಾರೆಯರ ಹೇರ್ ಡಿಸೈನರ್ಸ್ ಆಗಿರುವ ಡಾ. ಶಿವರಾಮ ಭಂಡಾರಿ ಮಾಲಕತ್ವದ ಈ ಸಂಸ್ಥೆ ಈ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆಗೈದಿದೆ.

ಡಾ. ಸಿವರಾಮ ಭಂಡಾರಿ ಅಧ್ಯಕ್ಷತೆಯಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿರುವ ಶಿವಾಸ್ ಹೇರ್ ಡಿಸೈನರ್ಸ್ ಪ್ರೈ. ಲಿಮಿಟೆಡ್‍ನ ಸಿಇಒ ಆಗಿ ಡಾ. ವಿನೋದ್ ಚೋಪ್ರಾ ಕಾರ್ಯ ನಿರ್ವಹಿಸುತ್ತಿದ್ದಾರೆ. ಗುಲಾಬಿ ಕೃಷ್ಣ ಭಂಡಾರಿ ಚಾರಿಟೇಬಲ್ ಟ್ರಸ್ಟ್‍ನ ಟ್ರಸ್ಟಿಗಳಾಗಿ ಶ್ರೀಮತಿ ಅನುಶ್ರೀ ಎಸ್. ಭಂಡಾರಿ ಮತ್ತು ಶ್ರೀಮತಿ ಶ್ವೇತಾ ಆರ್. ಭಂಡಾರಿ ಸಂಸ್ಥೆಗೆ ಬಲ ತುಂಬಿದ್ದರೆ ಪ್ರಾಂಶುಪಾಲರಾಗಿ ಶ್ರೀಮತಿ ರೊವಿನಾ ಎಸ್. ಸೋನ್ಸ್ ಕಾರ್ಯ ನಿರ್ವಹಿಸುತ್ತಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ದೇರಳಕಟ್ಟೆಯಲ್ಲಿ ಈ ಸಂಸ್ಥೆ ತೆರೆದುಕೊಳ್ಳುವಲ್ಲಿ ಬಹುಕ್ಷೇತ್ರಗಳ ಸ್ಥಳೀಯ ಹಾಗೂ ಪರವೂರಿನ ಹಿತೈಷಿಗಳು ಸಹಕರಿಸಿದ್ದಾರೆ.

ದೀಪ ಬೆಳಗಿಸಿ ಸಂಸ್ಥೆ ಉದ್ಘಾಟಿಸಿದ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮದರ್ಶಿ ಡಾ. ವೀರೇಂದ್ರ ಹೆಗ್ಗಡೆ ಮಾತನಾಡಿ, ಶಿವರಾಮ ಭಂಡಾರಿ ಹುಟ್ಟುಹಾಕಿದ ಈ ಸಂಸ್ಥೆ ಹಲವರಿಗೆ ವೃತ್ತಿಜೀವನ ಆರಂಭಿಸಲು ನೆರವಾಗಲಿದೆ. ವಿಶ್ವವಿದ್ಯಾನಿಲಯ ಮಾನ್ಯತೆ ನೀಡಿರುವುದು ಸಂಸ್ಥೆಗೆ ಬಲ ತುಂಬಿದಂತಾಗಿದೆ. ಆಧುನಿಕ ಜಗತ್ತಿನಲ್ಲಿ ಜನ ನಮ್ ಬಹಿರಂಗ ಶುದ್ಧಿ ನೋಡುತ್ತಾರೆ. ಬಹಿರಂಗ ಶುದ್ಧಿ ಬಗ್ಗೆ ಆಸಕ್ತಿ ಹೊಂದಿದರವರು ಅಂತರಂಗದ ಶುದ್ಧಿಗೂ ಮಹತ್ವ ನೀಡುತ್ತಾರೆ. ಈ ಸಂಸ್ಥೆ ಇನ್ನಷ್ಟು ಶಾಖೆಗಳೊಂದಿಗೆ ಹೆಸರು ಮಾಡಲಿ ಎಂದು ಹಾರೈಸಿದರು.

ಬಾಲಿವುಡ್‍ನ ಸುಪ್ರಸಿದ್ಧ ನಿರ್ಮಾಪಕ-ನಿರ್ದೇಶಕ ಪದ್ಮಶ್ರೀ ಪುರಸ್ಕøತ ಡಾ. ಮಧೂರ್ ಭಂಡಾರ್ಕರ್, ಮಂಗಳೂರು ವಿಶ್ವವಿದ್ಯಾನಿಲಯದ ಮಾಜಿ ಕುಲಪತಿ ಪ್ರೊ. ಪಿ ಸುಬ್ರಹ್ಮಣ್ಯ ಯಡಪಡಿತ್ತಾಯ, ಉಳ್ಳಾಲದ ಸಯ್ಯದ್ ಮುಹಮ್ಮದ್ ಶರೀಫುಲ್ ಮದನಿ ದರ್ಗಾದ ಅಧ್ಯಕ್ಷ ಬಿ. ಜಿ. ಹನೀಫ್ ಹಾಜಿ, ರಂಗ ಕಲಾವಿದ ಅರವಿಂದ ಬೋಳಾರ್, ಬಾಲಿವುಡ್ ನಟಿ ಪ್ರಾಚಿ ತೆಲ್ಹಾನ್, ವಿಶ್ವ ಭಂಡಾರಿ ಮಹಾಮಂಡಲ ಒಕ್ಕೂಟದ ಸ್ಥಾಪಕ ಅಧ್ಯಕ್ಷ ಕಡಂದಲೆ ಸುರೇಶ್ ಭಂಡಾರಿ, ಜಸ್ಟೀಸ್ ಕೆ. ಎಸ್. ಹೆಗ್ಡೆ ಚಾರಿಟೇಬಲ್(ನಿಟ್ಟೆ ಆಸ್ಪಿಟಲ್) ಇದರ ಉಪಾಧ್ಯಕ್ಷ ಡಾ. ಬಿ. ಸತೀಶ್ ಕುಮಾರ್ ಭಂಡಾರಿ ಹಾಗೂ ಶಿಕ್ಷಣ, ವೈದ್ಯಕೀಯ, ರಾಜಕೀಯ, ಉದ್ಯಮ, ಸಾಂಸ್ಥಿಕ, ಧಾರ್ಮಿಕ ಮತ್ತಿತರರ ಗಣ್ಯಾತಿಗಣ್ಯರು ಸಂಸ್ಥೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಮುಂಬೈ ಪತ್ರಕರ್ತ ಸಂಘದ ಅಧ್ಯಕ್ಷ ರೋನ್ಸ್ ಬಂಟ್ವಾಳ ಮತ್ತು ಪತ್ರಕರ್ತ ಆರೀಫ್ ಕಲ್ಕಟ್ಟ ಅವರು ಕಾರ್ಯಕ್ರಮ ಸಂಯೋಜಿಸಿದರು.

Advertise in articles 1

advertising articles 2

Advertise under the article

ಕಾರ್ಯಕ್ರಮಗಳ ನೇರ ಪ್ರಸಾರ, ಚಿತ್ರೀಕರಣ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 8618554807