-->


ಬಾರ್ದಿಲ ದೇವರಗುಡ್ಡೆ ದೇವಸ್ಥಾನದಲ್ಲಿ ಶಿಲಾಮಯ ಗರ್ಭಗುಡಿ ನಿರ್ಮಾಣಕ್ಕೆ  ಪಾದುಕಾನ್ಯಾಸ

ಬಾರ್ದಿಲ ದೇವರಗುಡ್ಡೆ ದೇವಸ್ಥಾನದಲ್ಲಿ ಶಿಲಾಮಯ ಗರ್ಭಗುಡಿ ನಿರ್ಮಾಣಕ್ಕೆ ಪಾದುಕಾನ್ಯಾಸ

 

ಬಜಪೆ: ಕುಪ್ಪೆಪದವು ಬಾರ್ದಿಲ ದೇವರಗುಡ್ಡೆ  ಶ್ರೀ ಸಾಂಬಸದಾಶಿವ ದೇವಸ್ಥಾನದ ಸಂಪೂರ್ಣ ಜೀರ್ಣೋದ್ದಾರದ ಅಂಗವಾಗಿ  ಶಿಲಾಮಯಗರ್ಭಗ್ರಹ ನಿರ್ಮಾಣಕ್ಕೆ, ವಾಸ್ತು ಶಿಲ್ಪಿ ಕೃಷ್ಣ ರಾಜ ತಂತ್ರಿ ಮತ್ತು  ಕ್ಷೇತ್ರದ ತಂತ್ರಿಗಳಾದ ಡಾ|ಶಿವಪ್ರಸಾದ್ ತಂತ್ರಿಗಳ ನೇತೃತ್ವದಲ್ಲಿ, ದೇವಸ್ಥಾನದ ಅರ್ಚಕ ರಾಘವೇಂದ್ರ ಕಾರಂತ ಉಪಸ್ಥಿತಿಯಲ್ಲಿ ಪಾದುಕಾನ್ಯಾಸ ನೆರವೇರಿತು. 



ಪಾದುಕಾನ್ಯಾಸದ ಪೂರ್ವಭಾವಿಯಾಗಿ   ಸಾಮೂಹಿಕ ಶ್ರೀ ದೇವತಾ ಪ್ರಾರ್ಥನೆಯೊಂದಿಗೆ, ವಾಸ್ತು ಪೂಜೆ, ವಾಸ್ತು ಬಲಿ, ಅಷ್ಟೋಷ್ಟಕ ಗರ್ಭಪಾತ್ರಾಧಿವಾಸ, ಅಧಿವಾಸ ಹೋಮಗಳು,  ಅಷ್ಟೇಷ್ಟಕಾ ಸ್ಥಾಪನೆ ಪೂರ್ವಕ ಗರ್ಭಪಾತ್ರನ್ಯಾಸ ನಡೆಸಲಾಯಿತು.   

ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಸೋಮಶೇಖರ್ ಶೆಟ್ಟಿ ಉಳಿಪಾಡಿಗುತ್ತು ಮತ್ತು ಸಮಿತಿಯ ಸದಸ್ಯರು, ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಪ್ರವೀಣ್ ಆಳ್ವ ಗುಂಡ್ಯ, ಕಾರ್ಯಾಧ್ಯಕ್ಷ ಜಗದೀಶ್ ಕುಲಾಲ್ ಪಾಕಜೆ, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್ ಶೆಟ್ಟಿ ಕಟ್ಟಪುಣಿ, ಜತೆ ಕಾರ್ಯದರ್ಶಿ ಶಿವರಾಮ್ ಶೆಟ್ಟಿ, ಜೀರ್ಣೋದ್ದಾರ ಸಮಿತಿಯ ಪದಾಧಿಕಾರಿಗಳು, ಪ್ರಮುಖರುಗಳಾದ ಸತೀಶ್ಚಂದ್ರ ಪಾಣಿಲ, ತಿಮ್ಮಪ್ಪ ಶೆಟ್ಟಿ ಅಗರಿ, ವಿಜಯಲಕ್ಷ್ಮಿ ಸಾವಂತ್ ಕಟ್ಟಣಿಗೆ, ವಿಶ್ವನಾಥ ಶೆಟ್ಟಿ ಕಂಬಳ ಕೋಡಿ, ಪ್ರಸಾದ್ ಶೆಟ್ಟಿ ಬೋಂಡಾಲ, ಸತೀಶ್ ಪೂಜಾರಿ ಬಳ್ಳಾಜೆ,ಅರುಣಾ ಬಿ. ಶೆಟ್ಟಿ ಬಾರ್ದಿಲ, ಉರ್ಮಿಲ ಸೋಮಶೇಖರ್ ಶೆಟ್ಟಿ, ಕವಿತಾ ಶೆಟ್ಟಿ, ವಿನೋದ್ ಕುಮಾರ್ ಅಂಬೆಲೊಟ್ಟು,ದಿನೇಶ್ ಶೆಟ್ಟಿ ದೊಡ್ಡಗುತ್ತು, ರಾಜೇಶ್ ಶೆಟ್ಟಿ ಉಳಿಪಾಡಿ, ದೀಪಕ್ ಶೆಟ್ಟಿ ಕುಟ್ಟೆಚ್ಚಾರ್, ಲಿಂಗಪ್ಪ ಸಫಲಿಗ ಗಾಣದ ಕೊಟ್ಟಿಗೆ, ಪ್ರಸಾದ್ ಶೆಟ್ಟಿ ಕುಟ್ಟೆಚ್ಚಾರ್, ಸತೀಶ್ ಪೂಜಾರಿ ನೀಲಿ, ಭಾಸ್ಕರ ಶೆಟ್ಟಿ ಬಾರ್ದಿಲ, ಜೀರ್ಣೋದ್ದಾರ ಸಮಿತಿಯ ಪದಾಧಿಕಾರಿಗಳು,ಕಿಲೆಂಜಾರು, ಕುಲವೂರು, ಮುತ್ತೂರು ಹಾಗೂ ಇರುವೈಲು ಗ್ರಾಮಗಳ ಭಕ್ತರು, ಸಂಘ-ಸಂಸ್ಥೆಗಳ ಪ್ರಮುಖರು ಇದ್ದರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

Advertise under the article