ಹಿಂದೂ ಯುವಸೇನೆ ಶ್ರೀದುರ್ಗಾ ಶಾಖೆ ಎಕ್ಕಾರು ಇದರ ಆಶ್ರಯದಲ್ಲಿ ಲೇಡಿಗೋಶನ್ ಆಸ್ಪತ್ರೆ ಮಂಗಳೂರು ಇದರ ಸಹಯೋಗದೊಂದಿಗೆ 3 ನೇ ವರ್ಷದ ರಕ್ತದಾನ ಶಿಬಿರ
Wednesday, October 4, 2023
ಬಜಪೆ: ಸಮಾಜಮುಖಿ ಹಾಗೂ ಜನಪರ ಕಾರ್ಯಗಳನ್ನು ಮಾಡುತ್ತಿರುವ ಸಂಘಟನೆಯ ಕಾರ್ಯ ಶ್ಲಾಘನೀಯ ಎಂದು ಮೂಲ್ಕಿ ಮೂಡಬಿದಿರೆ ವಿಧಾನ ಸಭಾ ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.ಅವರು ಭಾನುವಾರದಂದು ಎಕ್ಕಾರು ಬಂಟರ ಭವನದಲ್ಲಿ ಹಿಂದೂ ಯುವಸೇನೆ ಶ್ರೀದುರ್ಗಾ ಶಾಖೆ ಎಕ್ಕಾರು ಇದರ ಆಶ್ರಯದಲ್ಲಿ ಲೇಡಿಗೋಶನ್ ಆಸ್ಪತ್ರೆ ಮಂಗಳೂರು ಇದರ ಸಹಯೋಗದೊಂದಿಗೆ ನಡೆದ 3
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು.
ಉಮನಾಥ ಕೋಟ್ಯಾನ್ (ಎರಡನೇ ಬಾರಿ ಶಾಸಕರಾಗಿ ಆಯ್ಕೆ) ಶ್ರೀಮತಿ ಜಯಂತಿ (ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ)
ಪ್ರವೀಣ್ ಆಚಾರ್ಯ (ಎಕ್ಕಾರು ಗ್ರಾ,ಪಂ ಅಧ್ಯಕ್ಷ)
ರೊನಾಲ್ಡೊ ಫೆರ್ನಾಂಡಿಸ್ (ಉದ್ಯಮಿ ಕೃಷಿಕರು)
ಗುರುಪ್ರಸಾದ್ ಭಟ್
(ಪವರ್ ಮ್ಯಾನ್, ಮೆಸ್ಕಾಂ)
ಮಾಧವ ಶೆಟ್ಟಿಗಾರ್ ಕಿನ್ನಿಗೋಳಿ
ಪ್ರಕಾಶ್ ಕುಕ್ಯಾನ್ ಎಕ್ಕಾರು
(ಸ್ಥಾಪಕ ಅಧ್ಯಕ್ಷ ಶ್ರೀ ದುರ್ಗಾ ಕಲ್ಚರಲ್ ಕ್ರಿಕೆಟ್ ಕ್ಲಬ್ ಎಕ್ಕಾರು)
ನಿತಿನ್ ಹೆಗ್ಡೆ ತಿಮ್ಮ ಕಾವ ಎಕ್ಕಾರು
(ಆಡಳಿತ ಮುಕ್ತೇಸರರು, ಶ್ರೀ ಕೊಡಮಣಿತ್ತಾಯ ದೈವಸ್ಥಾನ ಎಕ್ಕಾರು)
ವೇದಿಕೆಯಲ್ಲಿ ಎಕ್ಕಾರು ಶ್ರೀಕೊಡಮಣಿತ್ತಾಯ ದೈವಸ್ಥಾನದ ಆಡಳಿತ ಮೊಕ್ತೇಸರ ನಿತಿನ್ ಹೆಗ್ಡೆ ಕಾವರಮನೆ(ತಿಮ್ಮ ಕಾವ),ಎಕ್ಕಾರು ಬಂಟರ ಸಂಘದ ಅಧ್ಯಕ್ಷ ರತ್ನಾಕರ ಶೆಟ್ಟಿ,ಎಕ್ಕಾರು ಗ್ರಾ.ಪಂ ಅಧ್ಯಕ್ಷ ಪ್ರವೀಣ್ ಆಚಾರ್ಯ,ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಸ್ತೂರಿ ಪಂಜ,ಬಿಜೆಪಿ ಎಕ್ಕಾರು ಮಹಾಶಕ್ತಿ ಕೇಂದ್ರದ ಅಧ್ಯಕ್ಷ ದಿನೇಶ್ ಕುಕ್ಯಾನ್ ,ಮಂಗಳೂರು ಲೇಡಿ ಗೋಶನ್ ಆಸ್ಪತ್ರೆಯ ಕೋ ಅರ್ಡಿನೇಟರ್ ಪ್ರವೀಣ್,ಮಂಗಳೂರಿನ ಹೆಚ್ ಡಿ ಎಫ್ ಸಿ ಬ್ಯಾಂಕ್ ನ ವ್ಯವಸ್ಥಾಪಕ ಕಿರಣ್ ಶೆಟ್ಟಿ,ಕಟೀಲು ನಂದಿನಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ನೀಲಯ್ಯ ಕೋಟ್ಯಾನ್ ,ಕಟೀಲು ನಂದಿನಿ ಪತ್ತಿನ ಸಹಕಾರಿ ಸಂಘದ ಕಾರ್ಯನಿರ್ವಹಣಾಧಿಕಾರಿ ಶಶಿಧರ ಶೆಟ್ಟಿ, ಉದ್ಯಮಿಗಳಾದ ರೊನಾಲ್ಡ್ ಫೆರ್ನಾಂಡಿಸ್ ಪ್ರದೀಪ್ ಕುಮಾರ್ ಶೆಟ್ಟಿ, ಲೋಕಯ್ಯ ಸಾಲ್ಯಾನ್ ,ಶಿವರಾಮ ಕೋಟ್ಯಾನ್ ,ಹಾಗೂ ಮೊದಲಾದವರು ಉಪಸ್ಥಿತರಿದ್ದರು.ಶಿಬಿರದಲ್ಲಿ ಒಟ್ಟು 130 ಮಂದಿ ರಕ್ತದಾನ ಮಾಡಿದರು.ಶಾಖೆಯ ಸಂಘಟನಾ ಕಾರ್ಯದರ್ಶಿ ಶಿವಪ್ರಸಾದ್ ಸ್ವಾಗತಿಸಿ,ಕು.ಸಮೃದ್ದ ಎಕ್ಕಾರು ಹಾಗೂ ಸೂರಜ್ ಪೂಜಾರಿ ಎಕ್ಕಾರು ಕಾರ್ಯಕ್ರಮ ನಿರೂಪಿಸಿದರು.