-->

ಬೆಥನಿ ವಿದ್ಯಾಸಂಸ್ಧೆಯ ಅಮೃತ ಮಹೋತ್ಸವ, ಶಾಂತಿಗಾಗಿ ನಡಿಗೆ ಜಾಥಾ ಕಾರ್ಯಕ್ರಮ

ಬೆಥನಿ ವಿದ್ಯಾಸಂಸ್ಧೆಯ ಅಮೃತ ಮಹೋತ್ಸವ, ಶಾಂತಿಗಾಗಿ ನಡಿಗೆ ಜಾಥಾ ಕಾರ್ಯಕ್ರಮ

ಕಿನ್ನಿಗೋಳಿ: ನಾವೆಲ್ಲರೂ  ಒಟ್ಟಾಗಿ ಶಾಂತಿಯನ್ನು ಹರಡುವ ಸಂತೋಷ,ಒಬ್ಬರನ್ನೊಬ್ಬರು ಪ್ರೀತಿಸುವ ಸಂತೋಷ ಹಾಗೂ ಬಡವರಿಗೆ ಸಂತೋಷದಿಂದ ಸಹಾಯ ಮಾಡುವ ಮಖೇನಾ ಅವರನ್ನು ಪ್ರೀತಿಸುವ ಗುಣ ನಮ್ಮಲ್ಲಿ ಅಳವಡಿಸಿಕೊಂಡಾಗ ನಮ್ಮಲ್ಲಿ ಶಾಂತಿಯ ಮನೋಭಾವ ಸ್ಧಾಪನೆಯಾಗಲು ಸಾಧ್ಯ.ಬೆಥನಿ ಶಿಕ್ಷಣ  ಸಂಸ್ಧೆಯು ಅಮೃತ ಮಹೋತ್ಸವದ ಈ ಸಂಧರ್ಭ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷದೊಂದಿಗೆ ಪ್ರೀತಿ‌ ಸಂತೋಷ ಸೌಹಾರ್ದತೆ ಸಾರುವಂತಾಗಲಿ ಎಂದು 
ಕಿನ್ನಿಗೋಳಿ ಚರ್ಚಿನ ಪ್ರಧಾನ ಧರ್ಮಗುರು ವಂ ಫಾ ಪೌಸ್ತೀನ್ ಲೋಬೋ ಹೇಳಿದರು.ಅವರು ಕಿನ್ನಿಗೋಳಿ ಲಿಟ್ಲ್ ಫ್ಲವರ್ ಶಾಲೆಯ ಬೆಥನಿ ವಿದ್ಯಾಸಂಸ್ಧೆಯ ಅಮೃತ ಮಹೋತ್ಸವದ ಅಂಗವಾಗಿ ಕಿನ್ನಿಗೋಳಿಯ ಶಿಕ್ಷಣ ಸಂಸ್ಧೆಗಳ ಸಹಯೋಗದಲ್ಲಿ ಶಾಂತಿಗಾಗಿ ನಡಿಗೆ 
ಜಾಥ ಕಾರ್ಯಕ್ರಮ ವನ್ನು  ಉದ್ಘಾಟಿಸಿ ಮಾತನಾಡಿದರು.

 ಈ ಸಂಧರ್ಭ ಕಿನ್ನಿಗೋಳಿ ಬೆಥನಿ ಶಿಕ್ಷಣ ಸಂಸ್ಧೆಯ ಸಂಚಾಲಕಿ ಸಿ.ಲಿಲ್ಲಿ ಪಿರೇರಾ ಜಾಥ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ವೇದಿಕೆಯಲ್ಲಿ ಮೇರಿವೆಲ್ ಕಾನ್ವೆಂಟಿನ ಸೂಪಿರಿಯರ್ ಸಿಸ್ಟರ್ ಪ್ರೇಮಲತಾ ಬಿ.ಎಸ್.
ಲಿಟ್ಲ್ ಫ್ಲವರ್ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಸಿಸ್ಟರ್ ಲೀಸಾ.ಲಿಟ್ಲ್ ಫ್ಲವರ್ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಸಿಸ್ಟರ್ ಮೊನಿಕಾ.ಮೇರಿವೆಲ್ ಪ್ರೌಢಶಾಲಾ ಮುಖ್ಯ ಶಿಕ್ಷಕಿ ಸಿಸ್ಟರ್ ಜೆಸಿಂತಾ ಡಿಸೋಜ.ಮೇರಿವೆಲ್ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಸಿಸ್ಟರ್ ಮನೀಷಾ ರೋಡ್ರಿಗಸ್.ಸ್ಟಾನೀ ಮಿರಾಂದ.ಜೋನ್ ಕಾರ್ಡೋಜ.ಲೋನಾ ಡಿಸೋಜಾ.ಕಿನ್ನಿಗೋಳಿ ಸ್ಟಾನೀ ಪಿಂಟೋ.ಸಂತಾನ್ ಡಿಸೋಜ.ಶೈಲಾ ಸಿಕ್ವೇರಾ.ಡೊಲ್ಪಿ ಸಾಂತುಮಾಯೆರ್. ವಿಲಿಯಂ ಡಿಸೋಜ ಮತ್ತಿತರರು ಉಪಸ್ಥಿತರಿದ್ದರು
ಮಕ್ಕಳ ಶಾಂತಿಗಾಗಿ ಜಾಥವು ಕಿನ್ನಿಗೋಳಿ ಮೇರಿವೆಲ್.ಲಿಟ್ಲ್ ಫ್ಲವರ್ ಶಾಲೆಯಿಂದ ಕಿನ್ನಿಗೋಳಿ ಬಸ್ಸು ನಿಲ್ದಾಣದ ಮೂಲಕ ಶಾಲೆಯ ತನಕ ನಡೆಯಿತು.ಈ ಜಾಥದಲ್ಲಿ‌ ಸುಮಾರು 1000 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಲೊಂಡಿದ್ದರು

Advertise in articles 1

advertising articles 2

Advertise under the article

ಕಾರ್ಯಕ್ರಮಗಳ ನೇರ ಪ್ರಸಾರ, ಚಿತ್ರೀಕರಣ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 8618554807