ಮೂಲ್ಕಿ: ವಿಧ್ಯಾಭ್ಯಾಸಕ್ಕೆ ಸಹಾಯ ಹಸ್ತ
Tuesday, October 10, 2023
ಮೂಲ್ಕಿ:ಮೂಲ್ಕಿ ಕಾರ್ನಾಡಿನ ಸಿ.ಎಸ್.ಐ ಆಂಗ್ಲಮಾಧ್ಯಮ ಶಾಲೆಯ ಅರ್ಹ ವಿದ್ಯಾರ್ಥಿಗೆ ಮೂರು ಸಾವಿರ ರೂಪಾಯಿಗಳ ಚೆಕ್ಕನ್ನು ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ಪಯರ್ ವತಿಯಿಂದ ಅ.4 ರಂದು ನೀಡಲಾಯಿತು.
ಮೂಲ್ಕಿ ಪರಿಸರದ ಉದ್ಯಮಿಯೋರ್ವರು ಶಾಲಾ ವಿದ್ಯಾರ್ಥಿಯಾದ ಶ್ಯಾಮ್ ಅವರ ಶೈಕ್ಷಣಿಕ ಶುಲ್ಕವನ್ನು ಭರಿಸುವ ಸಲುವಾಗಿ ದೇಣಿಗೆಯನ್ನು ನೀಡಿದ್ದು ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಝೀಟಾ ಎಲ್ ಮೆಂಡೋನ್ಸ ಮತ್ತು ಸಹಶಿಕ್ಷಕರ ಉಪಸ್ಥಿತಿಯಲ್ಲಿ ಅಧ್ಯಕ್ಷ ಲ. ಎನ್ ಸುಧೀರ್ ಬಾಳಿಗಾ ಹಾಗೂ ಕಾರ್ಯದರ್ಶಿ ಲ. ಪುಷ್ಪರಾಜ್ ಚೌಟ ಅವರು ವಿದ್ಯಾರ್ಥಿಗೆ ಹಸ್ತಾಂತರಿಸಿದರು.