-->
ಮುತ್ತೂರು ಗ್ರಾಮದ ಕಲ್ಲಿಮಾರ್ ನಲ್ಲಿ ನಿವೇಶನದ ಹಂಚಿಕೆ ಕಾರ್ಯಕ್ರಮ

ಮುತ್ತೂರು ಗ್ರಾಮದ ಕಲ್ಲಿಮಾರ್ ನಲ್ಲಿ ನಿವೇಶನದ ಹಂಚಿಕೆ ಕಾರ್ಯಕ್ರಮ

ಬಜಪೆ:ಮುತ್ತೂರು ಗ್ರಾಮ ಪಂಚಾಯತ್ ನ ಮುತ್ತೂರು ಗ್ರಾಮದ ಕಲ್ಲಿಮಾರ್ ನಲ್ಲಿ ಗುರುತಿಸಲಾದ ನಿವೇಶನದ ಹಂಚಿಕೆ ಕಾರ್ಯಕ್ರಮವು ಸೋಮವಾರದಂದು ಮುತ್ತೂರು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು .ನಿವೇಶನ ಹಂಚಿಕೆ ಮಾಡಿ ಮಾತನಾಡಿದ   ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ.  ವೈ ಭರತ್ ಶೆಟ್ಟಿ ಅವರು  ಮುತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊಳವೂರು ಮತ್ತು ಮುತ್ತೂರು ಗ್ರಾಮದಲ್ಲಿ ನಿವೇಶನಕ್ಕೆ ಜಾಗ ಗುರುತಿಸಿ ಹಕ್ಕು ಪತ್ರ ನೀಡಿದ್ದು ಆದರೆ ಫಲಾನುಭವಿಗಳಿಗೆ ಜಾಗವನ್ನು ನೀಡಲು ನಿವೇಶನದ ಜಾಗವು ಗುಡ್ಡ ಪ್ರದೇಶವಾಗಿತ್ತು ಇದರಲ್ಲಿ ಫಲಾನುಭವಿಗಳಿಗೆ ಜಾಗ ಕೊಟ್ಟರೆ ಅವರಿ ಮೂಲ ಸೌಕರ್ಯವಾದ ರಸ್ತೆ ಇಲ್ಲದಂತಾಗುತ್ತದೆ .ಹಾಗಾಗಿ ಗುಡ್ಡವನ್ನು ಸಮತಟ್ಟು ಮಾಡಿ ನಿವೇಶನ ಹಂಚಿಕೆ ಮಾಡಬೇಕೆನ್ನುವ ದೃಷ್ಟಿಯಿಂದ ನಿವೇಶನವನ್ನು ಸಮತಟ್ಟು ಮಾಡಿ ರಸ್ತೆ ಹಾಗೂ ಮನೆ ಕಟ್ಟಲು ಯೋಗ್ಯವಾಗುವ ರೀತಿಯಲ್ಲಿ ನಿವೇಶನ ಹಂಚಿಕೆ ಮಾಡುವ ಕೆಲಸ ಗ್ರಾಮ ಪಂಚಾಯತ್ ನ ಆಡಳಿತ ಮಂಡಳಿ ಒಟ್ಟಿಗೆ ಸೇರಿ ಮಾಡಿದ್ದೇವೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಮುತ್ತೂರು  ಗ್ರಾಮ ಪಂಚಾಯತ್ ಅಧ್ಯಕ್ಷ  ಪ್ರವೀಣ್ ಆಳ್ವ  ಅವರು ಕೊಲವೂರಿ ನಲ್ಲಿ 61 ಹಾಗೂ ಮುತ್ತೂರು ಗ್ರಾಮದಲ್ಲಿ 41 ಫಲಾನುಭವಿಗಳಿಗೆ ಹಕ್ಕು ಪತ್ರ ಹಾಗೂ ನಿವೇಶನ ನೀಡಲಾಗಿದ್ದು,  ಗ್ರಾಮದಲ್ಲಿ ಇನ್ನೂ  ನಿವೇಶನ ರಹಿತರು ಇದ್ದಾರೆ. ಅವರನ್ನು ಗುರುತಿಸಿ ಆದಷ್ಟು ಬೇಗ ನಿವೇಶನ ನೀಡುವ ಪ್ರಯತ್ನವನ್ನು ಮಾನ್ಯ ಶಾಸಕರು ಹಾಗೂ  ಎಲ್ಲಾ ಸದಸ್ಯರು ಸೇರಿ ಮಾಡುತ್ತೇವೆ ಎಂದು ಭರವಸೆಯನ್ನು ನೀಡಿದರು.  

 ಈ ಸಂಧರ್ಭ  ಫಲಾನುಭವಿಗಳು ಶಾಸಕರು , ಅಧ್ಯಕ್ಷರು ಹಾಗೂ ಉಪಾಧ್ಯಕ್ಷರಿಗೆ ಸನ್ಮಾನ ಮಾಡುವ ಮೂಲಕ ಕೃತಜ್ಞತೆಯನ್ನು ಸಲ್ಲಿಸಿದರು 

ಮುತ್ತೂರು ಗ್ರಾ.ಪಂ ನ ಮಾಜಿ ಅಧ್ಯಕ್ಷ ಹಾಗೂ ಈಗಿನ ಸದಸ್ಯ ಸತೀಶ್ ಪೂಜಾರಿ ಬಲ್ಲಾಜೆ,  ಮುತ್ತೂರು ಗ್ರಾಮ ಪಂಚಾಯತ್ ನ ಉಪಾಧ್ಯಕ್ಷೆ  ಶ್ರೀಮತಿ ಸುಶ್ಮಾ , ಪಂ.ನ ಮಾಜಿ ಉಪಾಧ್ಯಕ್ಷೆ ಹಾಗೂ  ಈಗಿನ ಸದಸ್ಯೆ  ಶ್ರೀಮತಿ ಮಾಲತಿ , ಸದಸ್ಯರಾದ ಪುಷ್ಪಾ ನಾಯ್ಕ್ , ಜಗದೀಶ್ ದುರ್ಗಕೋಡಿ , ತಾರನಾಥ್ ಕುಲಾಲ್ , ಥೋಮಸ್ ಹೆರಾಲ್ಡ್ ರೋಸಾರಿಯೋ , ರುಕ್ಮಿಣಿ , ಶಶಿಕಲಾ , ವನಿತಾ , ಮಾಜಿ ಅಧ್ಯಕ್ಷೆ  ನಾಗಮ್ಮ , ಮಾಜಿ ಉಪಾಧ್ಯಕ್ಷೆ  ಪ್ರಭಾವತಿ ಹಾಗೂ ನಿವೇಶನ ಪಡೆದ  ಫಲಾನುಭವಿಗಳು ಹಾಗೂ  ಗ್ರಾಮಸ್ಥರು ಉಪಸ್ಥಿತರಿದ್ದರು.

Ads on article

Advertise in articles 1

advertising articles 2

Advertise under the article