ಶಿಮಂತೂರು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ 2022-23 ನೇ ಸಾಲಿನ ಸರ್ವ ಸದಸ್ಯರ ಸಭೆ
Thursday, September 14, 2023
ಮುಲ್ಕಿ: ಶಿಮಂತೂರು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ 2022-23 ನೇ ಸಾಲಿನ ಸರ್ವ ಸದಸ್ಯರ ಸಭೆ ಶಿಮಂತೂರು ಶ್ರೀ ಆದಿ ಜನಾರ್ಧನ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷೆ ಪದ್ಮಿನಿ ವಿಜಯಕುಮಾರ್ ಶೆಟ್ಟಿ ವಹಿಸಿ ಮಾತನಾಡಿ ಕೃಷಿ ಹಾಗೂ ಹೈನುಗಾರಿಕೆಗೆ ಪ್ರೋತ್ಸಾಹ ನೀಡಿ ಸಂಘದ ಯಶಸ್ವಿಗೆ ಸದಸ್ಯರು ಕಾರಣಕರ್ತರಾಗಿದ್ದು ಈ ಬಾರಿ ಸಂಘದ ಸದಸ್ಯರಿಗೆ ಲಾಭದ ಅಂಶದಲ್ಲಿ ಶೇ.21 ಡಿವಿಡೆಂಡ್ ನೀಡಲಾಗಿದೆ ಎಂದರು
ಸಭೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ದ.ಕ. ಜಿಲ್ಲಾ ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ಸಂದೀಪ್ ಮಾತನಾಡಿ ಕೃಷಿ ಹಾಗೂ ಹೈನುಗಾರಿಕೆ ಒಂದೇ ನಾಣ್ಯದ ಎರಡು ಮುಖಗಳಾಗಿದ್ದು ಸ್ವಚ್ಛತೆಗೆ ಪ್ರಾಮುಖ್ಯತೆ ನೀಡುವುದರ ಮುಖಾಂತರ ಹಾಲಿನ ಗುಣಮಟ್ಟ ಕಾಪಾಡಿಕೊಳ್ಳಬೇಕಾಗಿದೆ ಎಂದರು.
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಮತಾ ಶೆಟ್ಟಿ, ಲೆಕ್ಕಪತ್ರ ಮಂಡಿಸಿದರು.
ನಿರ್ದೇಶಕರಾದ ಪ್ರಫುಲ್ಲಾ ಸಿ ಶೆಟ್ಟಿ, ಶೋಭಾ ವಿ ಶೆಟ್ಟಿ, ಲೀಲಾ ಎಸ್ ಶೆಟ್ಟಿ, ಬೇಬಿ ಕೆ., ವನಿತಾ ವಿ ಶೆಟ್ಟಿ, ಗುಲಾಬಿ ಕೆ ಪೂಜಾರಿ, ಶೋಭಾ ಎ. ಶೆಟ್ಟಿ, ವತ್ಸಲಾ ಶೆಟ್ಟಿ, ಹಾಲು ಪರೀಕ್ಷಕಿ ಜ್ಯೋತಿ ಶ್ರೀಧರ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕಳೆದ ಸಾಲಿನಲ್ಲಿ ಅತಿ ಹೆಚ್ಚು ಹಾಲು ಹಾಕಿದ ಹರಿಣಾಕ್ಷಿ (ಪ್ರ), ವಿಜಯ ಆರ್ ಶೆಟ್ಟಿ (ದ್ವಿ), ಪದ್ಮಿನಿ ವಿ. ಶೆಟ್ಟಿ(ತೃ), ಪ್ರಪುಲ್ಲಾ ಸಿ ಶೆಟ್ಟಿ (ಅತಿ ಹೆಚ್ಚು ಫ್ಯಾಟ್) ರವರಿಗೆ ಬಹುಮಾನ ನೀಡಲಾಯಿತು.
ಕಳೆದ ಸಾಲಿನ ಎಸ್ ಎಸ್ ಎಲ್ ಸಿ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಪೂರ್ವಿಕ ಎಚ್ ಶೆಟ್ಟಿ, ಹರ್ಷಿತಾ ಆರ್ ಶೆಟ್ಟಿ, ಉಮಾವತಿ ಯು. ಕೋಟ್ಯಾನ್ ರವರನ್ನು ಗೌರವಿಸಲಾಯಿತು.
ಕಾರ್ಯನಿರ್ವಣಾಧಿಕಾರಿ ಮಮತಾ ಶೆಟ್ಟಿ ಸ್ವಾಗತಿಸಿ ಧನ್ಯವಾದ ಅರ್ಪಿಸಿದರು